ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 250 ಅಡಿ ಎತ್ತರದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಭೀಮ್ ಸೇನೆ ಸಂಘಟನೆ ಆಗ್ರಹಿಸಿದೆ.
ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶ ಕುಮಾರ್ ಗೌಡೋರ್, “ತೆಲಂಗಾಣ ರಾಜ್ಯದಲ್ಲಿ 125 ಅಡಿ ಎತ್ತರದ ಹಾಗೂ ಆಂಧ್ರಪ್ರದೇಶದಲ್ಲಿ 206 ಅಡಿ ಎತ್ತರದ ಸಂವಿಧಾನ ಶಿಲ್ಪಿ ಅಂಬೇಡ್ಕರವರ ಪ್ರತಿಮೆ ಅನಾವರಣ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಬಾಬಾ ಸಾಹೇಬರ 250 ಅಡಿ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.
“ಈ ಹಿಂದೆ ಇದ್ದ ಸರ್ಕಾರದ ದುರಾಡಳಿತದಿಂದ ಬೇಸತ್ತು, ಎಲ್ಲ ಹಿಂದುಳಿದ ಸಮುದಾಯ ಒಂದಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಯ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರದ ಕಾರ್ಯವೈಖರಿಗೂ ಏನೂ ವ್ಯತ್ಯಾಸವಿರುವುದಿಲ್ಲ. 2025-26ನೇ ಸಾಲಿನ ಬಜೆಟ್‌ನಲ್ಲಿ ಬಾಬಾ ಸಾಹೇಬರ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಘೋಷಿಸಬೇಕೆಂದು” ಕರ್ನಾಟಕ ರಾಜ್ಯದ ಎಲ್ಲ ಕನ್ನಡಿಗರ ಹಾಗೂ ಹಿಂದುಳಿದ ಸಮುದಾಯದ ಪರವಾಗಿ ಭೀಮ್ ಸೇನೆ ಮನವಿ ಮಾಡಿತು.
ಈ ಸುದ್ದಿ ಓದಿದ್ದೀರಾ?: ಯಾದಗಿರಿ | ಬಹುಮತ ಇದ್ದರೂ ಬಿಜೆಪಿಗೆ ಸಿಗದ ಪುರಸಭೆ ಅಧಿಕಾರ; ಅಧ್ಯಕ್ಷ ಸ್ಥಾನ ಗೆದ್ದ ಕಾಂಗ್ರೆಸ್
ಈ ವೇಳೆ ಮಹೇಶ ಖಾನಾಪುರ, ಮರಲಿಂಗಪ್ಪ ಚಟ್ನಳ್ಳಿ, ವಾಸುದೇವ್, ರಾಜು ಚಟ್ನಳ್ಳಿ, ಮೌನೇಶ, ಸಾಬಣ್ಣ ಹೊಸಮನಿ, ಹೊನ್ನಪ್ಪ ಖಾನಾಪುರ ಇನ್ನಿತರರು ಇದ್ದರು.