ರಷ್ಯಾದ ಕಂಪನಿಯೊಂದರ ಬಿಯರ್ ಬಾಟಲ್ಗಳ ಮೇಲೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಮುದ್ರಿಸಿ ಮಾರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಬ್ರೂವರೀಸ್ ಕಂಪನಿ ತಯಾರಿಸುವ ಬಿಯರ್ ಬಾಟಲ್ಗಳಲ್ಲಿ ಗಾಂಧೀಜಿ ಅವರ ಭಾವಚಿತ್ರ ಹಾಗೂ ಸಹಿ ಇರುವುದು ಕಂಡುಬಂದಿದೆ. ಬಿಯರ್ ಬಾಟಲ್ ಪ್ರದರ್ಶಿಸುವ ವಿಡಿಯೋ ಇನ್ಸ್ಟಗ್ರಾಮ್ನಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ರಷ್ಯಾದಲ್ಲಿ ಮಾರಾಟವಾಗುವ ಬಿಯರ್ನಲ್ಲಿ ಗಾಂಧೀಜಿ ಭಾವಚಿತ್ರವಿದೆ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ನೇಹಿತನಿಗೆ ಗಂಭೀರವಾಗಿ ಪರಿಗಣಿಸುವಂತೆ ತಿಳಿಸಲು ನಮ್ಮ ವಿನಮ್ರ ವಿನಂತಿ ಎಂದು ನೆಟ್ಟಿಗರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಹದ್ದು ಮೀರಿದ ವರ್ತನೆ- ಗೆರೆ ಎಳೆಯುವುದೇ ಕಾಯ್ದಿರಿಸಿರುವ ಸುಪ್ರೀಮ್ ತೀರ್ಪು?
“ಆಘಾತಕಾರಿ ಹಾಗೂ ತಿರಸ್ಕರಿಸುವಂತಹದ್ದು. ರಷ್ಯಾದ ರಿವೋರ್ಟ್ ಬ್ರಾಂಡಿನ ಬಿಯರ್ನಲ್ಲಿ ಭಾರತದ ರಾಷ್ಟ್ರಪಿತರಾದ ಮಾಹತ್ಮಾ ಗಾಂಧಿ ಭಾವಚಿತ್ರ ಹಾಗೂ ಹೆಸರನ್ನು ನಮೂದಿಸಲಾಗಿದೆ. ಗಾಂಧೀಜಿ ಅವರು ಶಾಂತಿ ಹಾಗೂ ಅಹಿಂಸೆಯ ಪ್ರತೀಕವಾಗಿದ್ದಾರೆ. ಈ ಘಟನೆಯು ಕೋಟ್ಯಂತರ ಭಾರತೀಯರಿಗೆ ಅವಮಾನ ಮಾಡಲಾಗಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
“ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಡಾ ಜೈಶಂಕರ್ ಅವರು ಭಾವಚಿತ್ರ ವಾಪಸ್ ತೆಗೆದುಕೊಳ್ಳಲು ಒತ್ತಾಯಿಸುತ್ತೇನೆ. ಗಾಂಧೀಜಿ ಅವರು ಮದ್ಯಪಾನದ ವಿರೋಧಿಯಾಗಿದ್ದರು. ಖಂಡಿತಾ ಇದನ್ನು ತಡೆದು ಮಹಾತ್ಮ ಗಾಂಧೀಜಿ ಹಾಗೂ ಭಾರತಕ್ಕೆ ಗೌರವ ನೀಡಬೇಕೆಂದು” ನೆಟ್ಟಿಗರೊಬ್ಬರು ಮನವಿ ಮಾಡಿದ್ದಾರೆ.