ʼರಾಜ್ಯ ರೈತ ಸಂಘವನ್ನು ಕಟ್ಟುವ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತ ಮಹಾನ್ ಚೇತನ ಪ್ರೊ. ಎಂ ಡಿ ನಂಜುಂಡಸ್ವಾಮಿಯವರುʼ ಎಂದು ರೈತ ಮುಖಂಡ ನಾಗರಾಜು ಅಭಿಪ್ರಾಯಪಟ್ಟರು.
ಮದ್ದೂರು ಪಟ್ಟಣದ ಟಿಎಪಿಸಿಎಂಎಸ್ ಹತ್ತಿರ ಇರುವ ಎಂ ಡಿ ನಂಜುಂಡಸ್ವಾಮಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, “ಸರ್ಕಾರದ ಅಧಿಕಾರಿಗಳು ರೈತರ ಸಾಲ ವಸೂಲಾತಿ ಮಾಡಲು ಮುಂದಾದ ಸಂದರ್ಭದಲ್ಲಿ ಸಾಲ ಕಟ್ಟದೆ ಇರುವವರ ಮನೆಯನ್ನು ಜಪ್ತಿ ಮಾಡದಂತೆ ಸಂವಿಧಾನ ಬದ್ಧವಾಗಿ ಕಾನೂನು ಹೋರಾಟ ರೂಪಿಸಿದವರು ನಂಜುಂಡಸ್ವಾಮಿಯವರು. ಅಧಿಕಾರಿಗಳು ರೈತರ ಮನೆ ಜಪ್ತಿ ಮಾಡದಂತೆ ಊರುಗಳಲ್ಲಿ ರೈತ ಸಂಘದ ಬೋರ್ಡ್ ಹಾಕಿಸಿ ರೈತರ ಅನುಮತಿ ಇಲ್ಲದೆ ಊರಿಗೆ ಪ್ರವೇಶವಿಲ್ಲ ಎನ್ನುವ ಬೋರ್ಡ್ ಹಾಕುವ ಮೂಲಕ ರೈತರಿಗೆ ಬೆಂಬಲವಾಗಿ ನಿಂತಿದ್ದರು. ಅವರ ಪ್ರತಿ ಮಾತು ರೈತರ ಪಾಲಿಕೆ ರಕ್ಷಣೆಯಂತಿರುತ್ತಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ?: ಮದ್ದೂರು | ಕುವೆಂಪು ರಾಮಾಯಣದ ನೋವಿನ ಪಾತ್ರಗಳಿಗೆ ತಮ್ಮ ಕೃತಿಗಳ ಮೂಲಕ ಜೀವ ತುಂಬಿದರು : ಹೆಚ್.ಹನುಮಂತರಾಯಪ್ಪ
ಈ ವೇಳೆ ಪುರಸಭಾ ಮಾಜಿ ಅಧ್ಯಕ್ಷ ಎಂ ಸಿ ಬಸವರಾಜು, ಶಿಕ್ಷಕ, ಸಾಹಿತಿ ಬಿ ವಿ ಹಳ್ಳಿ ನಾರಾಯಣ್, ಪ್ರಗತಿಪರ ಸಂಘಟಕ ಕೆ ಟಿ ಶಿವಕುಮಾರ್, ಸುಮುಖ ನಿಧಿ ಬ್ಯಾಂಕ್ ಅಧ್ಯಕ್ಷ ಕುಂದನ ಕುಪ್ಪೆ ಕುಮಾರ್, ಅಹಿಂದ ಸಂರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ
ಶಶಿ ಕುಮಾರ್ ಪಿ, ಶಿಕ್ಷಕ ರಾಮಲಿಂಗಯ್ಯ, ಸೋಮಶೇಖರ್,ರಾಚಯ್ಯ ಚಾಮನಹಳ್ಳಿ, ಜಯಂತಿ ಲಾಲ್ ಪಾಟೀಲ್, ಬಿ ಪಿ ಗೀರೀಶ್ಹಾ ಗೂ ಇತರರು ಇದ್ದರು.
