“ದೈಹಿಕ ಹಸಿವಿಗೆ ಹಾಲು ರೊಟ್ಟಿ, ಹಣ್ಣು ಬೇಕು. ಆದರೆ ಜ್ಞಾನದ ಹಸಿವಿಗೆ ಕೌಶಲ್ಯಗಳು ಬೇಕಾಗುತ್ತದೆ. ಕಲಿತ ಕೌಶಲ್ಯಗಳಿಂದ ಬದುಕನ್ನು ರೂಪಿಸಿಕೊಳ್ಳಬೇಕು. ಆಗ ಸ್ಪರ್ಧಾತ್ಮಕ ಬದುಕಿನಲ್ಲಿ ನಾಯಕತ್ವದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದು ಲೋಯಲಾ ವಿಕಾಸ ಕೇಂದ್ರ ನಿರ್ದೇಶಕರು ಫಾದರ್ ಜೆರಾಲ್ಡ್ ಡಿಸೋಜಾ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ರೋಷನಿ ಟ್ರಸ್ಟ್ ಸಂಸ್ಥೆಯಲ್ಲಿ ಯುವಜನ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
“ಕಲಿತದ್ದನ್ನು ವಿವೇಚನೆಯಿಂದ ಆಲೋಚಿಸಬೇಕು. ಆಲೋಚಿಸಿದ್ದನ್ನು ಭವಿಷ್ಯತ್ತಿನಲ್ಲಿ ರೂಪಗೊಳ್ಳಲು ಅಳವಡಿಕೊಳ್ಳಬೇಕು. ಇಂತಹ ಕಾರ್ಯಾಗಾರ ನಿಮ್ಮ ವ್ಯಕ್ತಿತ್ವ, ಆಲೋಚನಾ ಕ್ರಮ ಬದಲಾವಣೆ ಉಪಯುಕ್ತವಾಗಿದೆ. ಇಂತಹ ಕಾರ್ಯಾಗಾರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದರು.
ಮಂಜುನಾಥ್ ಎಮ್ ಕಾರ್ಯಕ್ರಮದ ಪ್ರಸ್ತಾವಿಕ ಮಾತನಾಡಿ, “ಅಂಬೇಡ್ಕರ್ ಅವರ ಜೀವನ ಬಹು ದೊಡ್ಡದು. ಅವರ ಹೋರಾಟ ಬದುಕನ್ನು ನಾವೆಲ್ಲರೂ ಅಳವಡಿಸಿಳ್ಳಲು ಇಂತಹ ಕಾರ್ಯಗಾರಗಳು ಬಹಳ ಮುಖ್ಯ ಆಗುತ್ತವೆ. ಗುರುಗಳ, ತಂದೆತಾಯಿ ಮಾತುಗಳನ್ನು ಕೇಳಬೇಕು. ಜೀವನದಲ್ಲಿ ಶಿಸ್ಟನ್ನು ಅಳವಡಿಸಿಕೊಳ್ಳಬೇಕು. ಪ್ರೀತಿ, ವಿಶ್ವಾಸ ನಂಬಿಕೆಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸಮಾಜ ಏನಾಗಿದೆ, ಯಾವ ಕಡೆ ನಡೆದಿದೆ ಎಂಬುದನ್ನು ಇಂದಿನ ಯುವಕರು ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಬೇಕು” ಎಂದರು.
ರೋಷನಿ ಸಂಸ್ಥೆಯ ಮುಖ್ಯಸ್ಥರು ಸಿಸ್ಟೆರ್ ಜಾನೆಟ್ ಪಿಂಟೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸಮಾಜದಲ್ಲಿ ಆಗುವಂತ ಸಮಸ್ಯೆಗಳನ್ನು ನಾವೇ ಕಲ್ಪಿಸಿಕೊಳ್ಳಲು ಆಗದಂತಹ ಪರಿಸ್ಥಿತಿ ನಮ್ಮಿಂದಲೇ ಆಗಿದೆ. ಅದರಿಂದ ಆಚೆ ಬಂದು ನಾವು ನೀವೆಲ್ಲ ಆಲೋಚಿಸಬೇಕಿದೆ. ನಮ್ಮ ಸಂವಿಧಾನದಲ್ಲಿ ಸಮಾನತೆ, ಭ್ರಾತೃತ್ವ, ಸ್ವಾತಂತ್ರ ಒಳಗೊಂಡು ರೂಪಿತವಾಗಿದೆ. ಹಾಗಾಗಿ ಸಂವಿಧಾನದ ಮೂಲಕ ಸಮಾಜದ ಎಲ್ಲ ಜನರನ್ನು ಗೌರವಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ
ಕಾರ್ಯಕ್ರಮದಲ್ಲಿ ರೋಷನಿ ಸಂಸ್ಥೆಯ ನಿರ್ದೇಶಕರು ಸಿಸ್ಟೆರ್ ಅನಿತಾ ಡಿಸೋಜಾ ಆಯೋಜನಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೈರೋಜ್ ಅಹಮ್ಮದ ಶಿರಬಡಗಿ, ನಾಗರಾಜ್ ಪೂಜಾರ್, ರಂಜಿತಾ ಗೊಲ್ಲರ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಶಿಬಿರರ್ಥಿಗಳು ಉಪಸ್ಥಿತರಿದ್ದರು. ಮಂಜುನಾಥ್ ಗೌಳಿ ನಿರೂಪಿಸಿದರು. ಎಸ್ ವಿ ಪಾಟೀಲ್ ಸ್ವಾಗತಿಸಿದರು. ಫಕಿರೇಶ್ ಗುಂಡಳ್ಳಿ ವಂದನಾರ್ಪಣೆ ಮಾಡಿದರು.
