ಮನರಂಜನೆ ವಕೀಲರಿಗೆ ಅಗತ್ಯ, ಇದರ ಜೊತೆಗೆ ಉಪನ್ಯಾಸ ಸಹ ಅಗತ್ಯ ಎಂದು ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ ಅಭಿಪ್ರಾಯಪಟ್ಟರು.
ದಾವಣಗೆರೆ ಜಿಲ್ಲಾ ವಕೀಲರ ಸಂಘದಿಂದ ವಕೀಲರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಾಸ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಮನರಂಜನೆ ಎಂಬುದು ಮನಸ್ಸಿಗೆ ಆಹ್ಲಾದ ನೀಡುತ್ತದೆ. ವಕೀಲರಿಗೆ ಮನರಂಜನೆ ಬೇಕು, ಇದರ ಜೊತೆಗೆ ಅವಶ್ಯಕವಾಗಿ ಉಪನ್ಯಾಸ ಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಾಗ್ದಾನ ಮರೆತ ಪ್ರಧಾನಿ ಮೋದಿ, ಭದ್ರಾ ಮೇಲ್ದಂಡೆ ಹಣಬಿಡುಗಡೆ ಮಾಡಿಸಲು ಸಂಸದರಿಗೆ ರೈತಸಂಘ, ಡಿಎಸ್ಎಸ್ ಆಗ್ರಹ.
“ಇದೀಗ ನ್ಯಾಯಾಧೀಶರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನಮ್ಮಲ್ಲೂ ಸಾಕಷ್ಟು ಪ್ರತಿಭಾವಂತರು ಇದ್ದು, ಅವರಿಗೆ ಉಪಯೋಗ ಆಗಲು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿ. ನಮ್ಮಲ್ಲೇ ಇರುವ ಹಿರಿಯ ವಕೀಲರು ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲು ತಯಾರಿದ್ದಾರೆ. ಇದರ ಸದುಪಯೋಗವನ್ನು ಕಿರಿಯ ವಕೀಲರು ಸೇರಿದಂತೆ ಎಲ್ಲಾ ವಕೀಲರು ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್. ಅರುಣ್ ಕುಮಾರ್, ಉಪಾಧ್ಯಕ್ಷ ಜಿ.ಕೆ. ಬಸವ ರಾಜ್ ಗೋಪನಾಳ್, ಕಾರ್ಯದರ್ಶಿ ಎಸ್. ಬಸವರಾಜ್, ನ್ಯಾಯಾಧೀಶರಾದ ನಿವೇದಿತಾ, ನಾಗೇಶ್ , ಸಹ ಕಾರ್ಯದರ್ಶಿ ಜಿ.ಎಸ್. ಮಂಜುನಾಥ್, ಮಿಮಿಕ್ರಿ ಪ್ರಸಿದ್ಧ ಹಾಸ್ಯ ಕಲಾವಿದ ಬೆಮೆಲ್ ಕಂಪಲಪ್ಪ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
