- ಲಕ್ಸುರಿ ಬಸ್ ಹೊರತುಪಡಿಸಿ ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
- ದಿನಕ್ಕೆ ಸರಾಸರಿ 65.02 ಲಕ್ಷ ಕಿ.ಮೀ ಸಂಚರಿಸುತ್ತಿರುವ ನಾಲ್ಕು ನಿಗಮದ ಬಸ್ಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜೂನ್ 11ರಂದು ಜಾರಿಗೆ ತಂದಿದೆ. ಇದರ ಬೆನ್ನಲ್ಲೇ, ಈ ವರ್ಷ 1894 ಹೊಸ ಬಸ್ಗಳನ್ನು ಖರೀದಿಸಲು ಸಾರಿಗೆ ನಿಗಮ ಮುಂದಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಸಾರಿಗೆ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್ಡಬ್ಲೂಕೆಎಸ್ಆರ್ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ)ದ ಲಕ್ಸುರಿ ಬಸ್ಗಳನ್ನು ಹೊರತುಪಡಿಸಿ ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಈ ಹಿನ್ನೆಲೆ, ಬೇಡಿಕೆಗೆ ಅನುಗುಣವಾಗಿ ಬಸ್ಗಳನ್ನು ಖರೀದಿ ಮಾಡಲು ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಹೆಚ್ಚಿನ ಬಸ್ಗಳ ಅಗತ್ಯವಿರುವ ಕೆಲವು ಮಾರ್ಗಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ, ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸಾರಿಗೆ ನಿಗಮ ಮುಂದಾಗಿದೆ.
ನಾಲ್ಕು ನಿಗಮಗಳು 1,04,450 ಸಿಬ್ಬಂದಿ ಹೊಂದಿವೆ. ನಾಲ್ಕು ನಿಗಮಗಳು ರಾಜ್ಯದ್ಯಂತ 23,989 ಬಸ್ಗಳನ್ನು ಹೊಂದಿದ್ದು, ಒಂದು ದಿನಕ್ಕೆ ಸರಾಸರಿ 65.02 ಲಕ್ಷ ಕಿಲೋಮೀಟರ್ ಸಂಚರಿಸುತ್ತವೆ.
ಶೂನ್ಯ ಟಿಕೆಟ್ ಅಥವಾ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಿದ ಡೇಟಾದ ಆಧಾರದ ಮೇಲೆ ನಿಗಮಗಳಿಗೆ ಉಚಿತ ಪ್ರಯಾಣದ ವೆಚ್ಚವನ್ನು ಸರ್ಕಾರ ನೀಡುತ್ತದೆ. ಶಕ್ತಿ ಯೋಜನೆಗೆ ವಾರ್ಷಿಕ ಸುಮಾರು ₹4,051. 56 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿದ್ಯುತ್ ದರ ಹೆಚ್ಚಳಕ್ಕೆ ಸ್ಪಷ್ಟನೆ ನೀಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ
ವಿಶೇಷ ಅನುದಾನ ಮತ್ತು ಹಣಕಾಸಿನ ನೆರವಿನ ಹೊರತಾಗಿ ಬಸ್ ಪಾಸ್ಗಳಿಗೆ ಒದಗಿಸಲಾದ ಸಬ್ಸಿಡಿಯನ್ನು ಸರ್ಕಾರವು ವಾಡಿಕೆಯಂತೆ ಮರುಪಾವತಿ ಮಾಡುತ್ತದೆ. ಸರ್ಕಾರವು ಏಪ್ರಿಲ್ 2022 ರಿಂದ ಮಾರ್ಚ್-2023 ರವರೆಗೆ ಎಲ್ಲಾ ನಾಲ್ಕು ನಿಗಮಗಳಿಗೆ ₹ 3,606.52 ಕೋಟಿ ಮರುಪಾವತಿ ಮಾಡಿದೆ.