ಭಾರೀ ಮಳೆಯಿಂದ ರೈಲು ಸುರಂಗ ಮಾರ್ಗ(ಟನಲ್)ದಲ್ಲಿ ದೊಡ್ಡ ಕಲ್ಲು ಉರುಳಿ ಬಿದ್ದಿದ್ದು, ಕಲಬುರಗಿ-ಬೀದರ್ ರೈಲು ಟನಲ್‌ನಲ್ಲಿಯೇ ಸಿಲುಕಿಕೊಂಡಿದೆ. ಸದ್ಯ, ಭಾರೀ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಕಲಬುರಗಿಯಿಂದ ಬೀದರ್‌ಗೆ ಹೊರಟಿದ್ದ ರೈಲು ಕಮಲಾಪುರ ತಾಲೂಕಿನ ಮರಗುತ್ತಿ ಬಳಿಯಿರುವ ರೈಲು ಸುರಂಗ ಮಾರ್ಗದಲ್ಲಿ ದೊಡ್ಡ ಕಲ್ಲು ಉರುಳಿ ಬಿದ್ದಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಕಲ್ಲು ಉರುಳಿ ಬಿದ್ದ ಪರಿಣಾಮ ಕಲ್ಲು ರೈಲಿಗೆ ತಾಗಿದ್ದರಿಂದ ರೈಲು ನಿಂತಿದ್ದು, ಪ್ರಯಾಣಿಕರು ಭಯದಲ್ಲಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಸೀತಾನದಿ ಬಳಿ ಭೀಕರ ಅಪಫಾತ; ಇಬ್ಬರು ಶಿಕ್ಷಕರು ಸಾವು, ಮತ್ತೊರ್ವ ಗಂಭೀರ
ಭಾನುವಾರ ರಾತ್ರಿ ಮಳೆ ಸುರಿದ ಪರಿಣಾಮ ಸುರಂಗದೊಳಗೆ ಹಸಿಯಾಗಿದ್ದ ಪರಿಣಾಮ ಕಲ್ಲು ಉರುಳಿ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಪ್ರಯಾಣಿಕರ ಜೀವಕ್ಕೆ ಯಾವುದೇ ಅಪಾಯವಿಲ್ಲ.