ಶಿವಮೊಗ್ಗ, ಭದ್ರಾವತಿ, ಸಾಗರ ಹಾಗೂ ಆನವಟ್ಟಿಯಲ್ಲಿ ಆಯಾ ಠಾಣೆಗಳ ಪೊಲೀಸರು ಫೆಬ್ರವರಿ 15ರ ಸಂಜೆ ವಿಶೇಷ ಕಾಲ್ನಡಿಗೆ ಗಸ್ತು ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು, “ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ವಿಶೇಷ ಕಾಲ್ನಡಿಗೆ ಗಸ್ತು ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವರು ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, 123 ಲಘು ಪ್ರಕರಣ, ಕೋಟ್ಪಾ ಕಾಯ್ದೆ(ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ)ಯಡಿ 18 ಪ್ರಕರಣ ಹಾಗೂ ಮೋಟಾರು ಕಾಯ್ದೆಯಡಿ 56 ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ತಿಳಿಸಿದೆ.

ಎಲ್ಲೆಲ್ಲಿ ಗಸ್ತು?
ಶಿವಮೊಗ್ಗ ನಗರದ ಕಸ್ತೂರ ಬಾ ರಸ್ತೆ, ಎಂಕೆಕೆ ರಸ್ತೆ, ಭರ್ಮಪ್ಪ ನಗರ, ಒಟಿ ರಸ್ತೆ, ಅಣ್ಣಾನಗರ, ಮಂಜುನಾಥ ಬಡಾವಣೆ, ಅಶೋಕ ರಸ್ತೆ, ಕೋಟೆ ರಸ್ತೆ, ಓಲ್ಡ್ ಬಾರ್ ಲೈನ್ ರಸ್ತೆ, ಪೆನ್ಷನ್ ಮೊಹಲ್ಲಾ, ಕಾಮತ್ ಪೆಟ್ರೋಲ್ ಬಂಕ್ ಸಮೀಪ, ಮೇಲಿನ ತುಂಗಾನಗರ, ಕೆಳಗಿನ ತುಂಗಾನಗರ, ರಾಜೇಂದ್ರ ನಗರ, ರವೀಂದ್ರ ನಗರ, ಬಸವನಗುಡಿ, ಜೈಲ್ ರಸ್ತೆ, ಸೋಮಿನಕೊಪ್ಪ, ಬೊಮ್ಮನಕಟ್ಟೆ, ಪುರಲೆ ಹಾಗೂ ತಾಲೂಕಿನ ಆಯನೂರು ಗ್ರಾಮದಲ್ಲಿ ಕಾಲ್ನಡಿಗೆ ಗಸ್ತು ನಡೆಸಲಾಗಿದೆ.
ಭದ್ರಾವತಿ ನಗರದ ನ್ಯೂಟೌನ್, ಖಾಜಿ ಮೊಹಲ್ಲಾ, ಹನುಮಂತನಗರ, ಸತ್ಯಸಾಯಿನಗರ ಹಾಗೂ ಬಾರಂದೂರು, ಶಂಕರಘಟ್ಟ ಗ್ರಾಮದಲ್ಲಿ ಗಸ್ತು ನಡೆಸಲಾಗಿದೆ.

ಸಾಗರ ಪಟ್ಟಣದ ಹೊಸನಗರ ರಸ್ತೆ, ಜನ್ನೇಹಕ್ಲು ಹಾಗೂ ಸೊರಬ ತಾಲೂಕಿನ ಆನವಟ್ಟಿ ಪಟ್ಟಣದ ನೆಹರೂ ನಗರ ವೃತ್ತದಲ್ಲಿ ಕಾಲ್ನಡಿಗೆ ಗಸ್ತು ನಡೆಸಲಾಗಿದೆ” ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.