‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಶ್ಮಿಕಾ ಮಂದಣ್ಣ – ಪುಷ್ಟ, ಡಿಯರ್ ಕಾಮ್ರೇಡ್, ಗೀತಗೋವಿಂದಂ, ಯಜಮಾನ, ಅಂಜನೀಪುರ, ಸೀತಾರಾಮಂ ಹಾಗೂ ವಾರಿಸು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ‘ನ್ಯಾಷನಲ್ ಕ್ರಶ್’ ಎಂದು ಕರೆಸಿಕೊಂಡಿದ್ದಾರೆ. ಕನ್ನಡ, ತೆಲುಗು ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ, ಈಗ ತಮಿಳು ಚಿತ್ರರಂಗದಲ್ಲಿ ಸಕ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಪುಷ್ಟ-2 ಸಿನಿಮಾದ ಹಿಟ್ ಆಗುತ್ತಿರುವ ನಡುವೆ, ಕಳೆದ ಒಂದೆರಡು ತಿಂಗಳುಗಳಿಂದ ರಶ್ಮಿಕಾ ಚೆನ್ನೈನಲ್ಲಿ ಸುತ್ತಾಡುತ್ತಿದ್ದಾರೆ. ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಕಾಲಿವುಡ್‌ನ ಪ್ರಸಿದ್ಧ ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ, ಚೆನ್ನೈನ ಅತ್ಯಂತ ಜನಪ್ರಿಯ OMR ಪ್ರದೇಶದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿ ಚೆನ್ನೈನಲ್ಲಿ ನೆಲೆಸಲು ರಶ್ಮಿಕಾ ಯೋಜಿಸುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ರಶ್ಮಿಕಾ ಪ್ರಸ್ತುತ ಚೆನ್ನೈನಲ್ಲಿದ್ದಾರೆಯೇ, ಭವಿಷ್ಯದಲ್ಲಿ ತಮಿಳು ಸಿನಿಮಾಗಳಲ್ಲಿ ನಟನೆಯನ್ನು ಮುಂದುವರೆಸುತ್ತಾರೆಯೇ, ಚೆನ್ನೈನಲ್ಲಿ ಹೊಸ ಅಪಾರ್ಟ್ಮೆಂಟ್ ಖರೀದಿಸುತ್ತಾರೆಯೇ ಎಂಬ ಅನೇಕ ಪ್ರಶ್ನೆಗಳು ಅವರ ಸುತ್ತ ಹೆಣೆದುಕೊಂಡಿವೆ. ಆದರೆ, ರಶ್ಮಿಕಾ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆಗಳು ಇನ್ನೂ ಬಂದಿಲ್ಲ.
ರಶ್ಮಿಕಾ ಈಗಾಗಲೇ ತಮಿಳು ಚಿತ್ರ ‘ಜೈ ಸುಲ್ತಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.