ಚಿನ್ನದ ಗಣಿಯಲ್ಲಿ ಭೂಕುಸಿತವಾಗಿದ್ದು, ಕನಿಷ್ಠ 42 ಮಂದಿ ಸಾವನ್ನಪ್ಪಿರುವ ಘಟನೆ ಆಫ್ರಿಕಾದ ಮಾಲಿಯಲ್ಲಿ ನಡೆದಿದೆ.
ಮಾಲಿಯ ಕೆನಿಬಾ ಜಿಲ್ಲೆಯ ಬಿಲಾಲಿ ಕೊಟೊ ಗಣಿಯಲ್ಲಿ ಅವಘಡ ಸಂಭವಿಸಿದೆ. 42 ಮಂದಿ ಮೃತಪಟ್ಟಿದ್ದರೆ, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಣಿಯಲ್ಲಿ ಭೂಮಿಯನ್ನು ಅಗೆಯುತ್ತಿದ್ದಾಗ, ಭೂಕುಸಿತವಾಗಿದೆ. ಹಲವರು ನೀರಿಗೆ ಬಿದ್ದಿದ್ದಾರೆ. ಅವರಿಗೆ ಗಾಯಗಳಾಗಿವೆ. ಇನ್ನ ಕೆಲವರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಆಫ್ರಿಕಾ ಪ್ರಮುಖ ಮೂರು ಚಿನ್ನ ಉತ್ಪಾದನಾ ಗಣಿಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಮಾಲಿ ಕೂಡ ಒಂದು. ಕೊಟೊ ಗಣಿಯಲ್ಲಿನ ಅವಗಢವು ಆಫ್ರಿಕಾದ ಪಶ್ಚಿಮ ಭಾಗದಲ್ಲಿ ನಡೆದ 2ನೇ ದುರಂತವೆಂದು ತಿಳಿದುಬಂದಿದೆ.
ಕಳೆದ ವರ್ಷ ಬಮಾಕೊದ ಬಳಿ ಕೂಡ ಚಿನ್ನದ ಗಣಿ ಕುಸಿದಿದ್ದು, ಆ ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.