ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪದ ಹೆಬ್ಬಾಲೆ ಜೇನುಕಲ್ ಬೆಟ್ಟ ಮೀಸಲು ಅರಣ್ಯದಲ್ಲಿ ಕಾಡು ಹಂದಿ ಬೇಟೆಯಾಡಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಕರಿಯಪ್ಪ ಬಡಾವಣೆ ಕುಶಾಲನಗರ ನಿವಾಸಿ ಎಸ್ ಎಂ ದಯಾನಂದ(61) ಹಾಗೂ ಬಳ್ಳೂರಿನ ಪಿ ವಿ ಮನೋಜ್(33) ಬಂಧಿತ ಆರೋಪಿಗಳು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯ ಅಧಿಕಾರಿ ಶೈಲೇಂದ್ರ ಕುಮಾರ್, ಉಪವಲಯ ಅರಣ್ಯಾಧಿಕಾರಿ ಭರತ್, ಅರಣ್ಯ ರಕ್ಷಕ ಭೀಮನ ಗೌಡ ಬಿರಾದಾರ್, ಅರಣ್ಯ ವೀಕ್ಷಕ ರಾಜಪ್ಪ, ಸಿಬ್ಬಂದಿಗಳಾದ ವರುಣ್ ಎಚ್ ಜೆ ಮತ್ತು ವೇದಮೂರ್ತಿ ಸೇರಿದಂತೆ ಅಧಿಕಾರಿಗಳ ತಂಡ ಕಾರ್ಯಚಾರಣೆ ನಡೆಸಿತ್ತು.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 9, 39, 50, 51 ಶೆಡ್ಯೂಲ್‌ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಸಂತ ಸೇವಾಲಾಲ್ ರ ತತ್ವಾದರ್ಶ ತಿಳಿದುಕೊಳ್ಳಿ : ವೆಂಕಟ ನಾಯಕ
ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿತ ಆರೋಪಿಗಳಿಂದ ಪ್ರೇಮ್ ಸಾಗರ್ ಅಂಡ್ ಸನ್ಸ್ ಕಂಪನಿಯ ಒಂದು ಕೋವಿ, ವಿಸ್ಕೊ ಸ್ಪೆಷಲ್ ಕಂಪನಿಯ ಒಂದು ಕೋವಿ, ತಲೆಗೆ ಕಟ್ಟಿದ ಟಾರ್ಚ್, ಕೆಎ 12 ಎಂಎ 7139 ಸಂಖ್ಯೆಯ ಬೊಲೆರೋ ಜೀಪ್, ಜೀವಂತ ತೋಟ 5, ಹಂದಿಯ ಮೃತ ದೇಹ ಹಾಗೂ ಬಿಳಿ ಬಣ್ಣದ ಚೀಲ ವಶಪಡಿಸಿಕೊಂಡಿದ್ದಾರೆ.
