ದರ ಏರಿಕೆಯ ಮೂಲಕ ಬೆಂಗಳೂರಿನ ಜನತೆಗೆ ಬಿಸಿತುಪ್ಪವಾಗಿದೆ ‘ನಮ್ಮ ಮೆಟ್ರೊ’. ಒಮ್ಮೆಲೆ ಶೇ.80ರಿಂದ 100ರಷ್ಟು ಏರಿಕೆ ಕಂಡ ದರದಿಂದಾಗಿ ಪ್ರಯಾಣಿಕರು ಆಘಾತಗೊಂಡರು. ಒಂದು ಕಡೆ ಬಸ್ ಟಿಕೆಟ್ ಬಿಸಿ, ಮತ್ತೊಂದು ಕಡೆ ಮೆಟ್ರೊ ಬರೆ! ಅಧಿಕಾರಿಗಳು, ರಾಜಕಾರಣಿಗಳು ನಿತ್ಯವೂ ಮೆಟ್ರೊದಲ್ಲಿ ಓಡಾಡಿದ್ದರೆ ಜನರ ಕಷ್ಟ ಅರ್ಥವಾಗುತ್ತಿತ್ತೇನೋ. ಆದರೆ ಅವರಿಗೆ ಸಾಮಾನ್ಯರ ಬವಣೆ ತಿಳಿಯುವುದಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿದವರು ಒಬ್ಬರಿಗೊಬ್ಬರ ಮೇಲೆ ಗೂಬೆ ಕೂರಿಸುತ್ತಾ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ‘ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ’ (ಬಿಎಂಆರ್‌ಸಿಎಲ್) ಪ್ರಕಾರ…

ವಿನಯ್ ಶ್ರೀನಿವಾಸ್
ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಿನಯ್ ಶ್ರೀನಿವಾಸ್ ಅವರು ಜನಪರ ಹೋರಾಟಗಳ ದಿಟ್ಟ ದನಿಯೂ ಹೌದು. ವಕೀಲರಾಗಿ, ಬರಹಗಾರರಾಗಿ, ಬೆಂಗಳೂರಿನ ನಾಡಿಮಿಡಿತ ಬಲ್ಲವರಾಗಿ ಅವರು ನೀಡುವ ಒಳನೋಟಗಳು ಅಪರೂಪದ್ದಾಗಿವೆ