ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆ ಕೊಪ್ಪಳದ ಕುಷ್ಟಗಿ ತಾಲೂಕಿನ ಕಳ್ಳಮಳ್ಳಿ ತಾಂಡಾದ ವಿಜಯಕುಮಾರ್ ಚವ್ಹಾಣ ಎಂಬ ಅಪರಾಧಿಗೆ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಡಿ.ಕೆ 20 ವರ್ಷ ಜೈಲು ಮತ್ತು 20 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
2022ರ ಜುಲೈ 21ರಂದು ಬಾಲಕಿ ತನ್ನ ಗ್ರಾಮದಲ್ಲಿ ಗೆಳತಿಯ ಮನೆಗೆ ನೋಟ್ಸ್ ತೆಗೆದುಕೊಂಡು ಬರಲು ಹೋದಾಗ ವಿಜಯಕುಮಾರ ತನ್ನ ಮೋಟಾರ್ ಸೈಕಲ್ ಮೇಲೆ ಅಪಹರಿಸಿದ್ದ, ಬಳಿಕ ಹೇಮಗುಡ್ಡದ ದೇವಸ್ಥಾನಕ್ಕೆ ಹೋಗಿ ಅಲ್ಲಿ ಅಡುಗೆ ಮಾಡುವ ಶೆಡ್ಡಿನಲ್ಲಿ ಮದುವೆಯಾಗುವುದಾಗಿ ಪುಸಲಾಯಿಸಿ, ಅತ್ಯಾಚಾರ ಮಾಡಿದ್ದಾನೆ. ನಾಲ್ಕು ದಿನ ಅಲ್ಲೇ ಬಚ್ಚಿಟ್ಟಿದ್ದ ಎಂದು ಆರೋಪಿಸಿ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಹಿಂಪಡೆಯಲು ಪ್ರಗತಿಪರ ಸಂಘಟನೆಗಳ ಒತ್ತಾಯ
ಆಗಿನ ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು. ಇದೀಗ ಪ್ರಕರಣ ಅಂತ್ಯ ಕಂಡಿದ್ದು, ಅಪರಾಧಿಗೆ ಶಿಕ್ಷೆಯಾಗಿದೆ.
