ರಾಯಚೂರು ನಗರದ ಹರಿಜನವಾಡದಲ್ಲಿ (ದಲಿತ ಕೇರಿ) ವಾಸ ಮಾಡುತ್ತಿರುವ ಜನರ ಮನೆ ಮಾಲೀಕರ ಹೆಸರುಗಳು ನಗರಪಾಲಿಕೆ ಡಿಮ್ಯಾಂಡ್ ಖಾತೆಯಲ್ಲಿ ನಮೂದಿಸದೇ ಇರುವುದರಿಂದ ನಿವಾಸಿಗಳು ಸೌಲಭ್ಯಗಳಿಂದ ವಂಚಿತವಾಗುವಂತಾಗಿದೆ. ಇದು ನಗರಸಭೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಬಾಬುರಾವ್ ಆಕ್ರೋಶ ವ್ಯಕ್ತಪಡಿಸಿರು.
ಮಾಧ್ಯಮ ಪ್ರಕಟಣೆಯಲ್ಲಿ ಮಾತನಾಡಿ, “ಹರಿಜನವಾಡದಲ್ಲಿ ಕೆಲವೇ ಕೆಲ ಕುಟುಂಬಗಳು ಮನೆಗಳ ವಿವರಗಳು ದಾಖಲಾಗಿವೆ. ಜನರಲ್ಲಿ ಮಾಹಿತಿ ಕೊರತೆಯಿಂದ ಮನೆಗಳ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಲು ಆಗಿಲ್ಲ. ಪಾಲಿಕೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ. ನಗರಸಭೆಯಿದ್ದಾಗಲೂ ಪೌರಾಯುಕ್ತರ ಹಾಗೂ ಬಿಲ್ ಕಲೆಕ್ಟರ್‌ಗಳು ಮನೆ ಮನೆಗೆ ಬಂದು ತಿಳಿಹೇಳುವ ಕೆಲಸ ಮಾಡಿಲ್ಲ. ಇಲ್ಲಿಯ ನಿವಾಸಿಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿದ್ದು ಪ್ರತಿ ಚುನಾವಣೆಯಲ್ಲಿ ಮತ ಹಾಕಲು ಮಾತ್ರ ಸೀಮಿತವಾಗಿದ್ದಾರೆ. ಆದರೆ ಮನೆಗಳ ಮಾಲೀಕರ ಹೆಸರೇ ಇಲ್ಲದೇ ಇರುವುದರಿಂದ ಇದ್ದರೂ ಸತ್ತಂತಾಗಿದೆ. ಜನರಿಂದ ತೆರಿಗೆ ವಸೂಲಿ ಮಾಡುವುದಾಗಿ ಹೇಳುವಾಗ ನಿವಾಸಿಗಳ ದಾಖಲೆಗಳು ಸರಿಪಡಿಸುವ ಕೆಲಸ ನಗರಪಾಲಿಕೆಯಿಂದ ನಡೆಸಬೇಕಿದೆ” ಎಂದು ಅಸಮಾಧಾನಗೊಂಡರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕರ್ತವ್ಯ ಲೋಪ ಆರೋಪ; ಪಿಡಿಒ ಅಮಾನತಿಗೆ ಗ್ರಾಮಸ್ಥರ ಒತ್ತಾಯ
ನಗರ ಶಾಸಕರು ಚುನಾವಣೆಯಲ್ಲಿ ಬಂದು ಮತ ಪಡೆದಿದ್ದಾರೆ. ಆದರೆ ಅಲ್ಲಿಯ ನಿವಾಸಿಗಳಿಗೆ ಆಸ್ತಿಯನ್ನು ನೊಂದಣಿ ಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಮೂರು ಬಡಾವಣೆಯಿಂದ ಆಯ್ಕೆಯಾಗಿರುವ ನಗರಸಭೆ ಸದಸ್ಯರುಗಳು ಸಹ ಗೋಜಿಗೆ ಹೋಗದೇ ಸುಮ್ಮನಾಗಿದ್ದಾರೆ. ಬಡವರು, ಕೂಲಿಕಾರ್ಮಿಕರು ವಾಸ ಮಾಡುವ ಬಡವಾಣೆ ಜನರಿಂದ ತೆರಿಗೆ ಪಾವತಿಸಲು ಆಗುವುದಿಲ್ಲ. ಸರ್ಕಾರವೇ ಕರ ಹೊಂದಾಣಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
