ಫ್ರಾನ್ಸ್ | ಸರ್ಕಾರದ ಪಿಂಚಣಿ ನೀತಿ ವಿರುದ್ಧ ಕಾರ್ಮಿಕರ ಆಕ್ರೋಶ

Date:

Advertisements
  • ಏಪ್ರಿಲ್ ಮೊದಲ ವಾರದಲ್ಲಿ ಸಭೆ ನಡೆಸಲು ಪ್ರಧಾನಿ ಬೋರ್ನ್ ತೀರ್ಮಾನ
  • ಫ್ರಾನ್ಸ್ ರಸ್ತೆಗಳಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚಿ ಕಾರ್ಮಿಕರು ಆಕ್ರೋಶ

ಫ್ರಾನ್ಸ್‌ನಲ್ಲಿ ಜಾರಿ ಮಾಡಲು ಹೊರಟಿರುವ ನೂತನ ಪಿಂಚಣಿ ವ್ಯವಸ್ಥೆ ಬಗ್ಗೆ ಭಾರೀ ಜನಾಕ್ರೋಶ ವ್ಯಕ್ತವಾಗಿದ್ದು, ಕಳೆದ ಅನೇಕ ದಿನಗಳಿಂದ ಫ್ರಾನ್ಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ನೂತನ ಪಿಂಚಣಿ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ ನಂತರ ಫ್ರಾನ್ಸ್‌ ಪ್ರಧಾನಿ ಎಲಿಜಬೆತ್‌ ಬೋರ್ನ್‌ ಅವರು ಪ್ರತಿಪಕ್ಷಗಳ ನಾಯಕರು ಮತ್ತು ವ್ಯಾಪಾರಿ ಸಂಘಗಳ ಜೊತೆ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ಸೋಮವಾರ (ಮಾರ್ಚ್‌ 27) ವರದಿ ಮಾಡಿವೆ.

ಯಾವ ಮತದಾನವೂ ಇಲ್ಲದೆ ಪಿಂಚಣಿ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಪರಿಶೀಲಿಸಲು ಸಭೆ ನಡೆಸುವುದಾಗಿ ಪ್ರಧಾನಿ ಬೋರ್ನ್‌ ಭಾನುವಾರ (ಮಾರ್ಚ್‌ 26) ಹೇಳಿದ್ದಾರೆ.

Advertisements

ಪಿಂಚಣಿ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಕ್ರಮದ ವಿರುದ್ಧ ದೇಶಾದ್ಯಂತ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿದೆ. ಮತಕ್ಕೆ ಹಾಕದೆಯೇ ನೀತಿಯನ್ನು ಅಂಗೀಕರಿಸಿದ ಅಧ್ಯಕ್ಷ ಮ್ಯಾಕ್ರನ್ ಅವರ ಕ್ರಮವನ್ನು ಜನರು ಖಂಡಿಸುತ್ತಿದ್ದಾರೆ.

ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ನಿವೃತ್ತಿಯ ವಯಸ್ಸನ್ನು ಎರಡು ವರ್ಷಗಳವರೆಗೆ ಹೆಚ್ಚಿಸುವ ಶಾಸನವನ್ನು ರದ್ದುಗೊಳಿಸುವುದಿಲ್ಲ ಅಥವಾ ವಿಳಂಬ ಮಾಡುವುದಿಲ್ಲ ಎಂದಿದ್ದಾರೆ. ಸಂಸತ್ತಿನಲ್ಲಿ ಶಾಸನಕ್ಕೆ ಬೆಂಬಲ ಪಡೆಯುವ ಜವಾಬ್ದಾರಿಯನ್ನು ಪ್ರಧಾನಿ ಬೋರ್ನ್‌ ಅವರಿಗೆ ವಹಿಸಿದ್ದಾರೆ.ಪ್ರಧಾನಿ ಬೋರ್ನ್ ಅವರು ರಾಜಕೀಯ ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ. ಕಾರ್ಮಿಕ ಸಮಸ್ಯೆಗಳ ಕುರಿತು ಒಕ್ಕೂಟಗಳೊಂದಿಗೆ ಸಂವಾದವನ್ನು ಪುನರಾರಂಭಿಸುವ ಗುರಿ ಹೊಂದಿದ್ದಾರೆ ಎಂದು ಅವರ ಕಚೇರಿಯು ಪಿಂಚಣಿ ಮಸೂದೆಯನ್ನು ಉಲ್ಲೇಖಿಸದೆ ತಿಳಿಸಿದೆ.

ಪ್ರತಿಪಕ್ಷಗಳೊಂದಿಗೆ ಹಾಗೂ ಒಕ್ಕೂಟದ ನಾಯಕರೊಂದಿಗೆ ಏಪ್ರಿಲ್‌ 3ರ ನಂತರ ಸಭೆ ನಡೆಸುವುದಾಗಿ ಪ್ರಧಾನಿ ಬೋರ್ನ್‌ ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. “ನಾವು ಶಾಂತ ರೀತಿಯಲ್ಲಿ ಸೂಕ್ತ ಮಾರ್ಗ ಕಂಡುಕೊಳ್ಳಬೇಕಿದೆ” ಎಂದು ಬೋರ್ನ್‌ ಅವರು ಪ್ರತಿಭಟನೆ ಶಾಂತಗೊಳಿಸುವ ಕುರಿತು ಹೇಳಿದರು.

ನೂತನ ಪಿಂಚಣಿ ನೀತಿಯಲ್ಲಿ ನಿವೃತ್ತಿ ವಯಸ್ಸನ್ನು 62ರಿಂದ 64ಕ್ಕೆ ಏರಿಸಿರುವುದು ಜನರು ಆಕ್ರೋಶಕ್ಕೆ ಕಾರಣವಾಗಿದೆ. ಪಿಂಚಣಿ ನೀತಿ ವಿರೋಧಿಸಿ ಗುರುವಾರದ (ಮಾರ್ಚ್ 23) ನಂತರ ಸುಮಾರು 300 ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಪ್ಯಾರಿಸ್‌ನಲ್ಲಿ 450ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಬಂಧಿಸಲಾಗಿದೆ.

ಗುರುವಾರ ನಡೆದ ಅನೇಕ ಪ್ರತಿಭಟನೆಗಳು ಹಿಂಸಾ ರೂಪ ಪಡೆದುಕೊಂಡವು. ಕಪ್ಪುಪಟ್ಟಿ ಧರಿಸಿದ್ದ ಪ್ರತಿಭಟನಕಾರರು ಹಾಗೂ ಪೊಲೀಸರು ನಡುವೆ ಘರ್ಷಣೆ ನಡೆದಿತ್ತು.

“ಹಿಂಸಾಚಾರದಲ್ಲಿ ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿ ಸೇರಿ ಸುಮಾರು 441 ಮಂದಿಗೆ ಗಾಯಗಳಾಗಿವೆ” ಎಂದು ಆಂತರಿಕ ಸಚಿವ ಗೆರಾಲ್ಡ್ ಡಾರ್ಮ್ಯಾನಿನ್ ತಿಳಿಸಿದ್ದಾರೆ. ಪ್ರತಿರೋಧದ ಹಿನ್ನೆಲೆಯಲ್ಲಿ ದೇಶದಲ್ಲಿ ನೀತಿಯ ಕುರಿತು ಅಭಿಪ್ರಾಯ ಸಂಗ್ರಹಣೆ ನಡೆದಿದೆ. ಇದರಲ್ಲಿ ಪಿಂಚಣಿ ನೀತಿಯ ವಿರುದ್ಧ ಫ್ರಾನ್ಸ್ ಜನರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ನಂತರ, ನೀತಿಯನ್ನು ಹಿಂಪಡೆಯುವ ಸಂಬಂಧ ಅಧ್ಯಕ್ಷ ಮ್ಯಾಕ್ರನ್ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಆದರೆ, ತಮ್ಮ ನಿರ್ಧಾರವನ್ನು ಮ್ಯಾಕ್ರನ್ ಸಮರ್ಥಿಸಿಕೊಂಡಿದ್ದಾರೆ. “ವ್ಯವಸ್ಥೆಯು ದಿಕ್ಕುತಪ್ಪದಂತೆ ಮಾಡಲು ಈ ನೀತಿ ಅಗತ್ಯ” ಎಂದು ಹೇಳಿದ್ದಾರೆ.

ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರು ಮಂಗಳವಾರ ಬೋಡೊ ನಗರಕ್ಕೆ ಭೇಟಿ ನೀಡಬೇಕಿತ್ತು. ಈ ವೇಳೆ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಕಾರ್ಮಿಕ ಒಕ್ಕೂಟಗಳು ನಿರ್ಧರಿಸಿದ್ದವು. ಗುರುವಾರ ರಾತ್ರಿ ಬೋಡೊ ನಗರದ ಭವ್ಯವಾದ ಟೌನ್‌ ಹಾಲ್‌ನ ಮರದ ಬಾಗಿಲಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. “ಪ್ರತಿಭಟನೆಯ ಕಾರಣ ರಾಜ ಮೂರನೇ ಚಾರ್ಲ್ಸ್ ಅವರ ಫ್ರಾನ್ಸ್ ಭೇಟಿಯನ್ನು ಮುಂದೂಡಲಾಗಿದೆ” ಎಂದು ಅಧ್ಯಕ್ಷ ಮ್ಯಾಕ್ರನ್ ಕಚೇರಿ ಶುಕ್ರವಾರ ಹೇಳಿದೆ.

ಕಸದ ರಾಶಿಗೆ ಬೆಂಕಿ

ಪಿಂಚಣಿ ನೀತಿ ವಿರೋಧಿಸಿ ಫ್ರಾನ್ಸ್‌ನ ರಸ್ತೆಯ ತುಂಬೆಲ್ಲಾ ಕಸದ ರಾಶಿಗಳನ್ನು ಸುರಿಯುವುದು, ಅದಕ್ಕೆ ಬೆಂಕಿ ಹಚ್ಚುವುದು ಕಂಡು ಬಂದಿದೆ. ಸ್ವಚ್ಛತಾ ಕಾರ್ಮಿಕರೂ ಪ್ರತಿಭಟನೆ ನಡೆಸುತ್ತಿದ್ದು, ರಸ್ತೆಗಳಲ್ಲಿ ಕಸದ ರಾಶಿ ಸುರಿಯಲಾಗಿದೆ. ಗುರುವಾರದಂದು ಪ್ಯಾರಿಸ್‌ನಲ್ಲಿ ಸುಮಾರು ಸಾವಿರ ಕಸದ ರಾಶಿಗಳಿಗೆ ಬೆಂಕಿ ಹಚ್ಚಲಾಗಿತ್ತು.

ದೇಶದಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ. ದೇಶದ ಅತಿ ದೊಡ್ಡ ಮಾಸೈ ವಾಣಿಜ್ಯ ಬಂದರಿನ ಮಾರ್ಗಗಳನ್ನು ಬಂದ್ ಮಾಡಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X