ಮೈಸೂರು ಜಿಲ್ಲೆ, ಗ್ರಾಮಾಂತರ ತಾಲೂಕಿನ ಆನಂದೂರು ಗ್ರಾಮದಲ್ಲಿ ಮೋರಿ ಕಾಮಗಾರಿ ವಿಚಾರವಾಗಿ ರಾಮೇಗೌಡ ಹಾಗೂ ಆತನ ತಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಭಾಕರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಇಲವಾಲ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹಲ್ಲೆ ಮಾಡಿರುವ ರಾಮೇಗೌಡ ಒಬ್ಬ ರೌಡಿ ಶೀಟರ್ ಹಾಗೂ ಗಡಿಪಾರಾಗಿದ್ದ ವ್ಯಕ್ತಿ. ಈತನ ಮೇಲೆ ಸುಮಾರು 16 ಪ್ರಕರಣಗಳು ಬಾಕಿ ಇರುವುದಾಗಿ ರೈತ ಸಂಘ ಆರೋಪಿಸಿದೆ.
ಆನಂದೂರು ಪ್ರಭಾಕರ್ ಮೇಲೆ ಹಲ್ಲೆಯಾಗುವಾಗ ಬಿಡಿಸಲು ಬಂದ ತಾಯಿ ಸುಶೀಲಮ್ಮ, ತಮ್ಮನ ಮಗ ಅಮಿತ್, ಸಂತೋಷ್, ಸ್ವಾಮಿಗೌಡ, ವೈರ್ಮುಡಿ ಗೌಡ ಅವರುಗಳ ಮೇಲೆ ರಾಮೇಗೌಡ ಮಗ ಯಶವಂತ್, ಹೆಂಡತಿ ಭಾರತಿ, ಡೈರಿ ಮಂಜು, ರಾಜೇಶ್, ಮಂಜು, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಂತಹ ಗೂಂಡಾಗಳಿಗೆ ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಸದ್ಯ ಗಾಯಾಳುಗಳಿಗೆ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇತ್ತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಇಲವಾಲ ಠಾಣಾ ಅಧಿಕಾರಿಗಳು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ʼತಕ್ಷಣ ಆರೋಪಿಗಳನ್ನು ಬಂಧಿಸಬೇಕು, ಇದರಲ್ಲಿ ಲೋಪ ಕಂಡು ಬಂದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಇಂಪ್ಯಾಕ್ಟ್ | ‘ಗೋಣಿಗದ್ದೆ ಹಾಡಿ’ ವರದಿಗೆ ಕಂದಾಯ ಸಚಿವರ ಸ್ಪಂದನೆ; ಅರಣ್ಯ ಸಚಿವರ ಜತೆಗೆ ಚರ್ಚಿಸುವ ಭರವಸೆ
ಕಾವೇರಿ ಆಸ್ಪತ್ರೆಗೆ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಮರಂಕಯ್ಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ಕಾರ್ಯದರ್ಶಿ ಚಂದ್ರಶೇಖರ್, ದಿನೇಶ್, ಚಂದ್ರ ಶೇಖರ್,ರಾಘವೇಂದ್ರ, ಸುದೀರ್ ಸೇರಿದಂತೆ ಹಲವು ಮುಖಂಡರು ಭೇಟಿ ಕೊಟ್ಟು ಹಲ್ಲೆಗೊಳಗಾದವರ ಯೋಗಕ್ಷೇಮ ವಿಚಾರಿಸಿದರು.
