ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತೀಯ ಪ್ರಾದೇಶಿಕ ಮಂಡಳಿ ಬೆಂಗಳೂರು ಶಾಖೆಯು 2025-26ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ.
1962ರಲ್ಲಿ ಸ್ಥಾಪನೆಯಾದ ಈ ದೊಡ್ಡ ಶಾಖೆಗೆ ಅಧ್ಯಕ್ಷರಾಗಿ ಮಂಜುನಾಥ್ ಎಂ. ಹಳ್ಳೂರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕವಿತಾ ಪರಮೇಶ, ಕಾರ್ಯದರ್ಶಿಯಾಗಿ ತುಪ್ಪದ್ ವಿರೂಪಾಕ್ಷ ಮುಪ್ಪಣ್ಣ, ಖಜಾಂಚಿಯಾಗಿ ಶ್ರೀಪಾದ್ ಎಚ್ ನಾರಾಯಣ್ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಜಿಬಿಜಿಬಿ ಮಸೂದೆ 2024 ಕುರಿತು ಶಾಸಕ ಅರ್ಷದ್ ರಿಜ್ವಾನ್ ಜತೆಗೆ ಬಿಎನ್ಪಿ ಮಾತುಕತೆ
ಚಂದ್ರಪ್ರಕಾಶ್ ಜೈನ್, ವಿನೋದ್ ಗಾರ್ಗ್, ರಾಘವೇಂದ್ರ ಹೆಗಡೆ ಹಾಗೂ ಕೆ ಎನ್ ಶ್ರೀ ರಕ್ಷಾ ಆಡಳಿತ ಸಮಿತಿ ಸದಸ್ಯರಾಗಿದ್ದಾರೆ. ನಿಶ್ಚಿಲ್ ಆರ್ ಬದ್ರಿನಾಥ್ ಅವರು ದಕ್ಷಿಣ ಭಾರತ ಸಿಎ ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
