ದೇಶದಲ್ಲಿ ಹಣದುಬ್ಬರ ಅಧಿಕವಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬಂಡವಾಳಶಾಹಿಗಳನ್ನು ಬೆಳೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ತನ್ನ ವಿಧಾನಸಭಾ ಕ್ಷೇತ್ರ ರಾಯ್‌ಬರೇಲಿಗೆ ರಾಹುಲ್ ಗಾಂಧಿ ಎರಡು ದಿನ ಭೇಟಿ ನೀಡಿದ್ದು, ಮೊದಲು ಚುರುವ ಗಡಿಯಲ್ಲಿರುವ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದರು. ದೇವಾಲಯದಲ್ಲಿ ಸ್ವಲ್ಪ ಸಮಯ ಕಳೆದ ಬಳಿಕ ಬಚ್ರಾವಣ್ ಕಡೆ ತೆರಳಿದರು.
ಇದನ್ನು ಓದಿದ್ದೀರಾ? ಚುನಾವಣಾ ಆಯುಕ್ತರ ನಡುರಾತ್ರಿಯ ಆಯ್ಕೆ ಅಗೌರವದಿಂದ ಕೂಡಿದೆ: ರಾಹುಲ್ ಗಾಂಧಿ
ಬಚ್ರಾವಣ್ ಬಳಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತಿದೆ. ಜೊತೆಗೆ ಬಂಡವಾಳಶಾಹಿಗಳ ಬೆಳವಣಿಗೆಗೆ ಸಹಾಯ ಮಾಡುತ್ತಿದೆ” ಎಂದು ದೂರಿದ್ದಾರೆ.
“ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಬಿಜೆಪಿ ಸರ್ಕಾರ ಬರೀ ಬಂಡವಾಳಶಾಹಿಗಳ ಬೆಳವಣಿಗೆಗೆ ಸಹಾಯ ಮಾಡುವುದರಲ್ಲೇ ಮಗ್ನವಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹಿಂದು ಧರ್ಮದಿಂದ ರಾಹುಲ್ ಗಾಂಧಿಗೆ ಬಹಿಷ್ಕಾರ; ಹಿಂದುತ್ವವಾದಿಗಳ ಹುನ್ನಾರ!
ಈ ನಡುವೆ ರಾಹುಲ್ ಗಾಂಧಿ ಭೇಟಿಯ ವೇಳೆ ತಮ್ಮನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು ಎಂದು ಕೆಲವು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ, ಗೃಹಬಂಧನದ ಬಗ್ಗೆ ಪೊಲೀಸರು ಯಾವುದೇ ದೃಢೀಕರಣ ನೀಡಿಲ್ಲ.
“25 ಕಾರ್ಯಕರ್ತರೊಂದಿಗೆ ನಮ್ಮನ್ನು ನಗರ ಪಂಚಾಯತ್ ಕಚೇರಿಯಲ್ಲಿ ಬಂಧನದಲ್ಲಿ ಇರಿಸಲಾಗಿದೆ. ರಾಯ್‌ಬರೇಲಿಯ ಜನರು ಅವರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿರುವುದರಿಂದ ಇಲ್ಲಿಯೇ ಇದ್ದು, ಜನರ ಸಮಸ್ಯೆಗಳನ್ನು ಆಲಿಸುವುದು, ಅವುಗಳನ್ನು ಪರಿಹರಿಸುವುದು ಸಂಸದರ ಜವಾಬ್ದಾರಿಯಾಗಿದೆ. ರಾಹುಲ್ ಗಾಂಧಿ ಸಾರ್ವಜನಿಕರ ಬಗ್ಗೆ ಗಮನ ಹರಿಸುತ್ತಿಲ್ಲ” ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪ್ರವೇಶ್ ವರ್ಮಾ ಹೇಳಿದ್ದಾರೆ.
