ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ದೆಹಲಿಯಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಏಳು ಸಚಿವರ ಪೈಕಿ ಐವರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಪೋರ್ಟ್ (ಎಡಿಆರ್) ವಿಶ್ಲೇಷಣೆ ತಿಳಿಸಿದೆ. ಈ ಪೈಕಿ ಓರ್ವ ಸಚಿವ ಆಶಿಶ್ ಸೂದ್ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳಿವೆ ಎಂದು ವರದಿ ಉಲ್ಲೇಖಿಸಿದೆ.
ಇಬ್ಬರು ಸಚಿವರು ಕೋಟ್ಯಾಧಿಪತಿಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2025ರ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಸಚಿವರು ಸಲ್ಲಿಸಿದ ಅಫಿಡವಿಟ್ ಆಧರಿಸಿ ಈ ಸಂಶೋಧನೆಗಳು ನಡೆದಿವೆ.
ಇದನ್ನು ಓದಿದ್ದೀರಾ? ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ‘ಗೂಂಡಾಗಿರಿ’ ವಿಡಿಯೋ ವೈರಲ್!
ರಾಜೌರಿ ಗಾರ್ಡನ್ ಕ್ಷೇತ್ರದ ಮಂಜಿಂದರ್ ಸಿಂಗ್ ಸಿರ್ಸಾ ಅವರು ಅತಿ ಹೆಚ್ಚು ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 248.85 ಕೋಟಿ ರೂಪಾಯಿ ಮಂಜಿಂದರ್ ಆಸ್ತಿಯಾಗಿದೆ. ಇನ್ನು ಸಚಿವರ ಪಟ್ಟಿಯಲ್ಲಿಅತೀ ಕಡಿಮೆ ಆಸ್ತಿಯನ್ನು ಕರವಾಲ್ ನಗರ ಕ್ಷೇತ್ರದ ಕಪಿಲ್ ಮಿಶ್ರಾ ಅವರು ಘೋಷಿಸಿದ್ದಾರೆ. ಅವರ ಆಸ್ತಿ 1.06 ಕೋಟಿ ರೂ.ಗಳಷ್ಟಿದೆ ಎಂದು ವರದಿಯಾಗಿದೆ.
ಇನ್ನು ಏಳು ಸಚಿವರ ಸರಾಸರಿ ಆಸ್ತಿ 56.03 ಕೋಟಿ ರೂ.ಗಳಾಗಿದ್ದು, ಎಲ್ಲಾ ಏಳು ಸಚಿವರು ಸಾಲ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ನವದೆಹಲಿ ಕ್ಷೇತ್ರದ ಪರ್ವೇಶ್ ಸಾಹಿಬ್ ಸಿಂಗ್, ಅತ್ಯಧಿಕ ಸಾಲ (74.36 ಕೋಟಿ ರೂ.) ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? BREAKING NEWS | ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ
ಆರು ಸಚಿವರು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದು, ಆದರೆ ಓರ್ವ ಸಚಿವರು 12ನೇ ತರಗತಿ ಮಾತ್ರ ಓದಿರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಐವರು ಸಚಿವರು 41 ರಿಂದ 50 ವರ್ಷ ವಯಸ್ಸಿನವರಾಗಿದ್ದರೆ, ಉಳಿದ ಇಬ್ಬರು 51ರಿಂದ 60 ವರ್ಷ ವಯಸ್ಸಿನವರಾಗಿದ್ದಾರೆ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಮಾತ್ರ ಮಹಿಳೆಯಾಗಿದ್ದು, ಬೇರೆ ಮಹಿಳಾ ಶಾಸಕಿಯರಿಗೆ ಯಾವುದೇ ಖಾತೆ ನೀಡಲಾಗಿಲ್ಲ.
ಫೆಬ್ರವರಿ 5ರಂದು ದೆಹಲಿ ಚುನಾವಣೆ ನಡೆದಿದ್ದು ಫೆಬ್ರವರಿ 8ರಂದು ಫಲಿತಾಂಶ ಹೊರಬಿದ್ದಿದೆ. 70 ಸದಸ್ಯ ಬಲವಿದ್ದು ದೆಹಲಿ ವಿಧಾನಸಭೆಯಲ್ಲಿ ಈ ಪೈಕಿ 48 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಅಧಿಕಾರ ಪಡೆದುಕೊಂಡಿತು. ಎಎಪಿ 22 ಸ್ಥಾನ, ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆದ್ದಿಲ್ಲ.
