‘ಬ್ಯಾಡ್ ಟಚ್’ ಮಾಡಿದ ಸೇನಾಧಿಕಾರಿಗೆ ಐದು ವರ್ಷಗಳ ಜೈಲು ಕಾಯಂ

Date:

Advertisements

ಹನ್ನೊಂದು ವರ್ಷದ ಬಾಲೆಯ ಮೇಲೆ ಲೈಂಗಿಕ ಹಲ್ಲೆಗಳನ್ನು ನಡೆಸಿ ಕಿರುಕುಳ ನೀಡಿದ ಮಾಜಿ ಸೇನಾಧಿಕಾರಿಗೆ ‘ಪೋಕ್ಸೋ’ ಕಾಯಿದೆಯಡಿ ವಿಧಿಸಲಾಗಿದ್ದ ಐದು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಬಾಂಬೆ ಹೈಕೋರ್ಟು ಎತ್ತಿ ಹಿಡಿದಿದೆ.

ಹಲ್ಲೆ ಮತ್ತು ಕಿರುಕುಳಕ್ಕೆ ಗುರಿಯಾಗಿರುವ ಅಪ್ರಾಪ್ತಳ ಹೇಳಿಕೆ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹುದಾಗಿದೆ. ಕಾರಾಗಾರ ಶಿಕ್ಷೆಯನ್ನು ಪ್ರಶ್ನಿಸಿರುವ ಮೇಲ್ಮನವಿದಾರನ ‘ದುರುಳ ಸ್ಪರ್ಶ’ವನ್ನು (ಬ್ಯಾಡ್ ಟಚ್) ಗುರುತು ಹಿಡಿದಿರುವ ಆಕೆಯ ಸಹಜ ಪ್ರವೃತ್ತಿ ಅಥವಾ ಅಂತರ್ಗತ ಭಾವನೆಯನ್ನು ನಂಬಬಹುದು ಎಂದು ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರನ್ನು ಒಳಗೊಂಡ ನ್ಯಾಯಪೀಠ ಇತ್ತೀಚೆಗೆ ಹೇಳಿದೆ.

‘ಜನರಲ್ ಕೋರ್ಟ್ ಮಾರ್ಶಲ್’ 2021ರಲ್ಲಿ ನೀಡಿದ್ದ ಕನಿಷ್ಠ ಐದು ವರ್ಷಗಳ ಶಿಕ್ಷೆಯನ್ನು ಮುಂಬಯಿಯ ಸಶಸ್ತ್ರ ಸೇನಾ ನ್ಯಾಯಾಧಿಕರಣ (Armed Forces Tribunal) ಎತ್ತಿ ಹಿಡಿದಿತ್ತು. ಆಪಾದಿತನು ಈ  ತೀರ್ಪನ್ನು ಬಾಂಬೆ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದ. 2024ರಲ್ಲಿ ಲೆಫ್ಟಿನೆಂಟ್ ಕರ್ನಲ್ ದರ್ಜೆಯ ಈ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

Advertisements

2020ರ ಫೆಬ್ರವರಿ ಒಂದರಂದು ಪುಣೆಯಲ್ಲಿ ಪೋಸ್ಟಿಂಗ್ ನಂತರ ಈತ ತನ್ನ ಅಧೀನದಲ್ಲಿರುವ ಹವಾಲ್ದಾರನನ್ನು ತನ್ನ ಇಬ್ಬರು ಮಕ್ಕಳನ್ನು ಕರೆತರುವಂತೆ ಸೂಚಿಸಿದ. ಅವರಿಗೆ ಹಸ್ತಸಾಮುದ್ರಿಕೆಯನ್ನು ಹೇಳಿಕೊಡುವುದಾಗಿ ಹೇಳಿದ್ದ. ತಂದೆ ಮತ್ತು ಮಗನನ್ನು ಪೆನ್ ತರುವಂತೆ ಕಳಿಸಿದ. ಎರಡು ನಿಮಿಷಗಳ ನಂತರ ಹವಾಲ್ದಾರ್ ಹಿಂತಿರುಗಿದಾಗ ಮಗಳು ಅಳುತ್ತಿದ್ದುದು ಕಂಡುಬಂತು.

ತಾನು ಯಾವ ತಪ್ಪನ್ನೂ ಮಾಡಿಲ್ಲವೆಂದೂ, ಬಾಲಕಿಯಿಂದ ತಂದೆ-ತಾತನ ಮಮತೆಯ ಭಾವನೆಯಲ್ಲಿ ಕೇವಲ ಒಂದು ಮುತ್ತನ್ನು ಕೇಳಿದ್ದಾಗಿಯೂ ಲೆಫ್ಟಿನೆಂಟ್ ಕರ್ನಲ್ ಹೇಳಿದ್ದ.

ಮೊದಲ ಭೇಟಿಯಲ್ಲೇ ಬಾಲಕಿಯ ಕೈ ಹಿಡಿಯಲು ಕಾರಣವೇ ಇರಲಿಲ್ಲ. ಅನುಚಿತವಾಗಿ ಮುಟ್ಟಿ, ಮುತ್ತು ಕೇಳಿದ್ದೂ ಸರಿಯಲ್ಲ ಎಂದು ಹೈಕೋರ್ಟು ತನ್ನ ತೀರ್ಪಿನಲ್ಲಿ ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ(SIR) ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ...

ಹಿಂದೂ ಧರ್ಮ ಪ್ರಚಾರಕ ಪ್ರೇಮಾನಂದರಿಗೆ ತನ್ನ ಕಿಡ್ನಿ ದಾನ ಮಾಡಲು ಮುಂದಾದ ಮುಸ್ಲಿಂ ಯುವಕ

ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ 26 ವರ್ಷದ ಮುಸ್ಲಿಂ ಯುವಕನೊಬ್ಬ ತನ್ನ ಒಂದು...

ಬಿಹಾರ ಎಸ್ಐಆರ್ | ʼಆಧಾರ್ʼ ಅನ್ನು ಪುರಾವೆಯಾಗಿ ಸ್ವೀಕರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶನ

ಬಿಹಾರ ಎಸ್ಐಆರ್‌ಗೆ ಪುರಾವೆಯಾಗಿ ಆಧಾರ್ ಅನ್ನು ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್...

ಲಕ್ನೋ | ದಲಿತ ಮಹಿಳೆಯ ಗುರುತು ದುರುಪಯೋಗಿಸಿಕೊಂಡು ಸುಳ್ಳು ಆರೋಪ ಸೃಷ್ಟಿ: ವಕೀಲನಿಗೆ ಜೀವಾವಧಿ ಶಿಕ್ಷೆ

ದಲಿತ ಮಹಿಳೆಯ ಗುರುತು ದುರುಪಯೋಗಿಸಿಕೊಂಡ ಮತ್ತು ಸುಳ್ಳು ಆರೋಪಗಳನ್ನು ದಾಖಲಿಸಿದ ವಕೀಲರೊಬ್ಬರಿಗೆ...

Download Eedina App Android / iOS

X