ಬೆಂಗಳೂರು ನಗರದ ಕೆಲ ರಸ್ತೆಗಳಲ್ಲಿ ಕತ್ತಿ ಝಳಪಿಸುತ್ತಾ ವೀಲಿಂಗ್ ಮಾಡುತ್ತಿದ್ದ ಐದು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿನಗರ, ಕೆ.ಆರ್.ಪುರಂ ಫ್ಲೈ ಓವರ್ ಮಾರ್ಗವಾಗಿ ಸಿನಿಮೀಯ ರೀತಿಯಲ್ಲಿ ಸಾಲು ಸಾಲಾಗಿ ಬೈಕ್‌ಗಳಲ್ಲಿ ಕೈಯಲ್ಲಿ ಕತ್ತಿ ಹಿಡಿದು, ವಾಹನ ಸವಾರರಿಗೆ ಭಯ ಬೀಳಿಸಿದ್ದಾರೆ. ಪೊಲೀಸರ ಭಯವೇ ಇಲ್ಲದೇ ಹತ್ತಾರು ಮಂದಿ ಪುಂಡರು ಲಾಂಗ್ ಹಿಡಿದುಕೊಂಡು ರಾಜಾರೋಷವಾಗಿ ಬೈಕ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಲಾಂಗ್ ಹಿಡಿದು ಬೈಕ್‌ಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ನಡೆಸುತ್ತಿರುವ ಪುಂಡರ ಬಂಧನಕ್ಕೆ ಬೆಂಗಳೂರು ಪೂರ್ವ ವಿಭಾಗದ ಪೊಲೀರು ಶೋಧ ನಡೆಸಿ, ಡಿಜೆ ಹಳ್ಳಿ ಮತ್ತು ರಾಮಮೂರ್ತಿ ನಗರ ಪ್ರದೇಶಗಳಲ್ಲಿ ಕತ್ತಿ ಝಳಪಿಸುತ್ತಾ ವೀಲಿಂಗ್ ಮಾಡುತ್ತಿದ್ದ ಐದು ಯುವಕರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನಯೀಮ್, ಅರಾಫತ್, ಸಾಹಿಲ್, ನಂಜಾಮತ್ ಹಾಗೂ ಅದ್ನಾನ್ ಎಂದು ಗುರುತಿಸಲಾಗಿದೆ.
ಪುಂಡರ ಈ ಗುಂಪು ಹವಾ ಮೆಂಟೇನ್ ಮಾಡುವುದಕ್ಕೆ ಭಯಬೀಳಿಸುವಂತೆ ಕೈಯಲ್ಲಿ ಕತ್ತಿ, ಲಾಂಗು, ಡ್ರ್ಯಾಗರ್ ಹಿಡಿದು ಅಟ್ಟಹಾಸ ಮೆರೆಯುತ್ತಾ, ರಸ್ತೆಯಲ್ಲಿ ಬೆಂಕಿ ಬರುವಂತೆ ಕತ್ತಿ ಹಾಗೂ ಲಾಂಗ್‌ನಿಂದ ಬೀಸುತ್ತಿದ್ದು, ಪುಂಡರ ಹಾವಳಿಗೆ ವಾಹನ ಸವಾರರು ಬೆಚ್ಚಿಬಿದ್ದಿದ್ದರು.
“ಲಾಂಗ್ ಹಿಡಿದುಕೊಂಡು ಪುಂಡರು ಬೈಕ್ ವ್ಹೀಲಿಂಗ್ ನಡೆಸಿದ ಪ್ರಕರಣ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಪೊಲೀಸ್ ಇಲಾಖೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಖಡಕ್ ಆಗಿ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಇಂತಹ ಪುಂಡರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವ ಸೆಕ್ಷನ್ ಅಡಿ ಕೇಸ್ ಹಾಕಬೇಕು ಅದನ್ನು ಪೊಲೀಸರು ಮಾಡ್ತಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು, ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ತಾರೆ ಎಂದು ಹೇಳಿದರು.
Good work by Bengaluru East Division Police.Police have arrested 5 youths who were brandishing #swords & doing #wheeling in DJ Halli & Ramamurthy Nagar areas of #Bengaluru.The accused have been identified as Nayeem, Arafat,Sahil,Nanjamat & Adnan.@DCPEASTBCP @CPBlr @BlrCityPolice pic.twitter.com/e2IaBJsDT5
— Yasir Mushtaq (@path2shah) February 20, 2025