ವಿಜಯನಗರ | ಎಐ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಬೇಕು: ಎನ್‌ಎಎಂ ಇಸ್ಮಾಯಿಲ್

Date:

Advertisements

ಎಐ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಬೇಕು ಎಂದು ಕನ್ನಡ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮತ್ತು ಲೇಖಕ ಎನ್‌ಎಎಂ ಇಸ್ಮಾಯಿಲ್ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಕೇಶಿರಾಜ ಸಭಾಂಗಣದಲ್ಲಿ, ಕನ್ನಡ ಭಾಷಾಧ್ಯಯನ ವಿಭಾಗ ಮತ್ತು ಕೆಎಲ್‌ಇ ದತ್ತಿನಿಧಿ ಸಹಯೋಗದೊಂದಿಗೆ ಲೋಕ ತಾಯ್ನುಡಿ ದಿನದ ಅಂಗವಾಗಿ ಮೆರೆವ ಕರ್ಣಾಟ ದೇಶದೊಳ್ ಎಐ ಕಾಲದ ತಾಯ್ನುಡಿ ತಲ್ಲಣಗಳು ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಎಐ ತಂತ್ರಜ್ಞಾನದ ಇಂದಿನ ಯುಗದಲ್ಲಿ ಭಾಷೆಯ ಜತೆಗಿನ ಸಾವಯವ ಸಂಬಂಧ ಮತ್ತು ಜೈವಿಕ ಸಂಬಂಧವನ್ನು ಮರುಸ್ಥಾಪಿಸಿಕೊಳ್ಳುವ ಕಡೆ ನಾವು ಮುಖಮಾಡಬೇಕು. ಎಐ ತಂತ್ರಜ್ಞಾನ ಇಂಗ್ಲಿಷ್ ಭಾಷೆಯ ಮೂಲಕ ಉಗಮಗೊಂಡಿದ್ದು, ಅದರ ಬೆಳವಣಿಗೆಯೂ ಇಂಗ್ಲೀಷ್ ಭಾಷೆಯ ಮೂಲಕವೇ ನಡೆಯುತ್ತಿದೆ. ಎಐ ತಂತ್ರಜ್ಞಾನವನ್ನು ಪ್ರಾದೇಶಿಕ ಭಾಷೆಗಳಲ್ಲಿ ಬಳಸುವ ಮೂಲಕ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಬೇಕು” ಎಂದರು.

Advertisements

“ಎಐ ತಂತ್ರಜ್ಞಾನವು ಅದಕ್ಕೆ ಅಳವಡಿಸಲಾದ ಮಾಹಿತಿ ಮತ್ತು ತಾರ್ಕಿಕ ಲೆಕ್ಕಚಾರದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಮನುಷ್ಯನ ಬುದ್ಧಿಮತ್ತೆ ಎಂಬುದು ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆ. ಮನುಷ್ಯನ ಬುದ್ಧಿಮತ್ತೆ ಯಾವುದೇ ವಿಚಾರವನ್ನು ಪ್ರಸ್ತುತಪಡಿಸುವಾಗ ಅವನಲ್ಲಿರುವ ಆಲೋಚನೆ ಮತ್ತು ನೆನಪುಗಳು ಪ್ರಭಾವ ಬೀರುತ್ತವೆ. ಬುದ್ಧಿವಂತಿಕೆ ಮತ್ತು ಪ್ರಜ್ಞೆ ಯಂತ್ರದ ಜತೆಗೆ ಸೇರುವುದಿಲ್ಲ. ಸಾರ್ವತ್ರಿಕ ಉದ್ದೇಶದ ಬುದ್ಧಿವಂತಿಕೆ ಮತ್ತು ತರ್ಕ ಎಐ ತಂತ್ರಜ್ಞಾನದಲ್ಲಿದೆ. ಆದರೆ ಕಥೆ ಹೇಳುವ, ಮಂಡಿಸುವ ಕ್ರಿಯೆಯಿಲ್ಲ. ಎಐ ದೇಹ ಎನ್ನುವ ಸಾಮಾಜಿಕ, ರಾಜಕೀಯ, ಆರ್ಥಿಕ ಪರಿಸರದಿಂದ ಹೊರತಾಗಿದೆ. ಪರಿಸರವೇ ಇಲ್ಲದೆ ಲೆಕ್ಕಚಾರ ಮಾಡಿ ಫಲಿತಾಂಶಗಳನ್ನು ಮುಂದಿಡುತ್ತದೆ” ಎಂದರು.‌

ಎನ್‌ಎಎಂ ಇಸ್ಮಾಯಿಲ್

“ಜ್ಞಾನದ ಕುರಿತಂತೆ ಈಗಾಗಲೇ ಸಾಕಷ್ಟು ಚರ್ಚೆಗಳಾದರೂ, ಯಾವುದು ಜ್ಞಾನ ಎಂಬುದು ನಿರ್ಧರಿತವಾಗಿಲ್ಲ. ದೇಶೀಯ ಭಾಷೆಗಳಲ್ಲಿದ್ದ ಜ್ಞಾನವನ್ನು ಜ್ಞಾನವೆಂದು ಪರಿಗಣಿಸಿರುವುದು ಕಂಡುಬರುವುದಿಲ್ಲ. ಆದರೆ 12ನೇ ಶತಮಾನದ ವಚನಕಾರರು ದೇಶಿಯ ಭಾಷೆಗಳ ಕರಕುಶಲ ಕಲೆಗಳಲ್ಲಿನ ಜ್ಞಾನವನ್ನು ಗುರುತಿಸುತ್ತಾರೆ. ಕೈಗಾರಿಕ ಕ್ರಾಂತಿಯ ಎಲ್ಲ ಆವಿಷ್ಕಾರಗಳು ಕುಶಲಕರ್ಮಿಗಳಿಂದ ಆಗಿದ್ದು, ಕರಕುಶಲ ಸಮುದಾಯಗಳು ತಮ್ಮಲ್ಲಿನ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಪ್ರಸ್ತುತಪಡಿಸುವಂತಾಗಬೇಕು. ಆ ಮೂಲಕ ತಾಯ್ನುಡಿಗಳನ್ನು ಉಳಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಬೆಳೆಸುವ ಕೆಲಸವಾಗಬೇಕು” ಎಂದು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ ಡಿ ವಿ ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, “ಇಂದು ನಗರಗಳಲ್ಲಿ ಇಂಗ್ಲಿಷ್, ಹಳ್ಳಿಗಳಲ್ಲಿ ಕನ್ನಡ ಎನ್ನುವಾಗಲೂ, ಏನನ್ನು ಕಳೆದು ಕೊಂಡಿದ್ದೇವೆ ಎನ್ನುವಾಗಲೆಲ್ಲ ತಾಯ್ನುಡಿಗೆ ಹೊರಳುತ್ತೇವೆ. ಭಾಷೆ ಎಂಬುದು ನಮ್ಮ ಭಾವನೆಗಳೊಂದಿಗೆ ಬೆಸೆದುಕೊಂಡಿರುವುದು. ಯಾವುದೇ ತಂತ್ರಜ್ಞಾನದ ಮೂಲಕ ತಾಯ್ನುಡಿಯನ್ನು ಸುಲಭವಾಗಿ ಮರೆಮಾಚಲು ಸಾಧ್ಯವಿಲ್ಲ. ಎಐ ತಂತ್ರಜ್ಞಾನವು ಇನ್ನು ಶೈಶಾವಸ್ಥೆಯಲ್ಲಿರುವಾಗಲೇ ಜನರಲ್ಲಿ ಆತಂಕವನ್ನುಂಟುಮಾಡಿದೆ. ಯಾವುದೇ ತಂತ್ರಜ್ಞಾನಗಳು ಹೊಸದಾಗಿ ಬಂದಾಗ ಆತಂಕಗಳು ಸಹಜವೇ. ಆದರೆ ಆತಂಕಪಡುವ ಅಗತ್ಯವಿಲ್ಲ. ಎಐ ತಂತ್ರಜ್ಞಾನವನ್ನು ಪಳಗಿಸುವ ಮತ್ತು ನಮ್ಮದಾಗಿಸಿಕೊಳ್ಳುವ ಶಕ್ತಿಯನ್ನು ನಾವು ಬೆಳಸಿಕೊಳ್ಳಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಘನತ್ಯಾಜ್ಯ ಸಂಗ್ರಹ ಘಟಕ ಸ್ಥಳಾಂತರಕ್ಕೆ ಸಿಪಿಐಎಂಎಲ್ ಒತ್ತಾಯ

ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ ಪಿ ಮಹಾದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, “ವಿಶ್ವಸಂಸ್ಥೆಯು 2000ದ ಫೆಬ್ರವರಿ 21ರಲ್ಲಿ ಲೋಕ ತಾಯ್ನುಡಿ ದಿನವನ್ನು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಎಲ್ಲೆಡೆ ತಾಯ್ನುಡಿ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಎಐ ತಂತ್ರಜ್ಞಾನವು ಭಾಷೆಗೆ ಸಂಬಂಧಿಸಿದಂತೆ ರೂಪ-ಭೇದ, ಅರ್ಥ-ಭೇದ ಮತ್ತು ಧ್ವನಿ-ಭೇದಗಳನ್ನು ತೋರಿಸುವಲ್ಲಿ ಹಾಗೂ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ, ನಿಲುವು, ಭಾವನಾತ್ಮಕ ದೃಷ್ಠಿಕೋನಗಳನ್ನು ತೋರಿಸುವಲ್ಲಿ ವಿಫಲವಾಗಿದೆ” ಎಂದರು.

ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಇದ್ದರು. ಕನ್ನಡ ಭಾಷಾಧ್ಯಯನ ವಿಭಾಗದ ಸಂಶೋಧನಾರ್ಥಿ ಶ್ರೀದೇವಿ ಅವರು ನಿರೂಪಿಸಿದರು. ಸಂಶೋಧನಾರ್ಥಿ ಚಂದುಸ್ವಾಮಿ ಅವರು ವಂದಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X