‘ಸ್ನೇಹಿತ ಮೋದಿಗೆ 21 ಮಿಲಿಯನ್ ಡಾಲರ್ ನೀಡಲಾಗಿದೆ’ ಎಂದ ಟ್ರಂಪ್: ಮತ್ತೊಂದು ವಿವಾದ

Date:

Advertisements

ತನ್ನ ಎರಡನೇ ಅಧಿಕಾರಾವಧಿಯಲ್ಲಿಯೂ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕವೇ ನೆಟ್ಟಿಗರ, ಇತರರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಿವಾದವನ್ನು ಸೃಷ್ಟಿಸಿದ್ದಾರೆ. ಭಾರತದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು 21 ಮಿಲಿಯನ್ ಡಾಲರ್ ಹಣವನ್ನು ತನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಗೆ ನೀಡಿರುವುದಾಗಿ ಟ್ರಂಪ್ ಶುಕ್ರವಾರವೂ ಹೇಳಿಕೊಂಡಿದ್ದಾರೆ. ಈ ಮೂಲಕ ಸತತ ಮೂರನೇ ದಿನವೂ ಈ ವಿಚಾರವನ್ನು ಟ್ರಂಪ್ ಪ್ರಸ್ತಾಪಿಸಿದ್ದಂತಾಗಿದೆ.

ಈ ಬೆನ್ನಲ್ಲೇ ವಿದೇಶದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಇಷ್ಟೊಂದು ಹಣವನ್ನು ವಿನಿಯೋಗಿಸುವ ಬದಲಾಗಿ, ಅಮೆರಿಕದಲ್ಲಿ ಮತದಾನವನ್ನು ಹೆಚ್ಚಿಸಲು ಇದೇ ರೀತಿಯ ಪ್ರಯತ್ನಗಳನ್ನು ಮಾಡಬಹುದಾಗಿತ್ತು. ವಿದೇಶಗಳಲ್ಲಿ ಇಷ್ಟು ಗಣನೀಯ ಮೊತ್ತವನ್ನು ಏಕೆ ಖರ್ಚು ಮಾಡಲಾಗುತ್ತಿದೆ ಎಂದು ಗವರ್ನರ್‌ಗಳ ಕಾರ್ಯಕಾರಿ ಅಧಿವೇಶನದಲ್ಲಿ ಮಾತನಾಡಿದ ಟ್ರಂಪ್ ಪ್ರಶ್ನಿಸಿದ್ದಾರೆ.

ಇದನ್ನು ಓದಿದ್ದೀರಾ? ಯುಗಧರ್ಮ | ಟ್ರಂಪ್ ಆಸ್ಥಾನದಲ್ಲಿ ಏನಾದರೂ ರಹಸ್ಯ ಒಪ್ಪಂದವಿದೆಯೇ?

Advertisements

ಹಾಗೆಯೇ ಬಾಂಗ್ಲಾದೇಶದ ರಾಜಕೀಯ ಬಲಪಡಿಸಲು ಒಂದು ಸಂಸ್ಥೆಗೆ 29 ಮಿಲಿಯನ್ ಡಾಲರ್ ಹಣವನ್ನು ನೀಡುವುದನ್ನು ಟೀಕಿಸಿದರು. “ಭಾರತದಲ್ಲಿ ಮತದಾನಕ್ಕಾಗಿ ನನ್ನ ಸ್ನೇಹಿತ ಪ್ರಧಾನಿ ಮೋದಿಗೆ 21 ಮಿಲಿಯನ್ ಡಾಲರ್ ನೀಡಲಾಗಿದೆ. ಭಾರತದಲ್ಲಿ ಮತದಾರರಿಗಾಗಿ ನಾವು 21 ಮಿಲಿಯನ್ ಏಕೆ ನೀಡುತ್ತಿದ್ದೇವೆ?” ಎಂದು ಟ್ರಂಪ್ ಹೇಳಿದ್ದಾರೆ.

“ಬಾಂಗ್ಲಾದೇಶದ ರಾಜಕೀಯ ಬಲಪಡಿಸಲು $29 ಮಿಲಿಯನ್ ಯಾರೂ ಕೇಳಿರದ ಸಂಸ್ಥೆಗೆ ಹೋಗಿದೆ, ಅವರಿಗೆ ಚೆಕ್ ನೀಡಲಾಗಿದೆ. ಇದನ್ನು ನೀವು ಊಹಿಸಬಲ್ಲಿರಾ? ಆ ಸಂಸ್ಥೆಯಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ಪ್ರಕಾರ ಅವರು ಬಹಳ ಸಂತೋಷದಿಂದ ಇರಬಹುದು, ಶ್ರೀಮಂತರಾಗಿರಬಹುದು. ಅವರು ಉತ್ತಮ ವ್ಯಕ್ತಿಗಳಾಗಿರುವುದಕ್ಕಾಗಿ ಶೀಘ್ರದಲ್ಲೇ ವ್ಯವಹಾರ ಸಂಬಂಧಿತ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಾರೆ” ಎಂದಿದ್ದಾರೆ.

ಇನ್ನು ಟ್ರಂಪ್ ಈ ಹೇಳಿಕೆ ವಿಚಾರದಲ್ಲಿ ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಏರ್ಪಟ್ಟಿದೆ. ಎಲ್ಲಾ ವಿಚಾರಕ್ಕೂ ಅಪ್ರಸ್ತುತವಾಗಿ ಪ್ರತಿಕ್ರಿಯಿಸುವ, ಸುಳ್ಳು ಮಾಹಿತಿಯನ್ನು ಹರಡುವ ಮೂಲಕವೇ ಅಧಿಕ ಸುದ್ದಿಯಾಗಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್‌ನಲ್ಲಿ ಟ್ರಂಪ್ ಹೇಳಿಕೆಯನ್ನು ಹಂಚಿಕೊಂಡು, ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿದ್ದೀರಾ? ಅದಾನಿಯನ್ನೂ ಕೈಬಿಟ್ರಾ ಮೋದಿ?; ಟ್ರಂಪ್ ಎದುರು ತಮ್ಮ ಮಿತ್ರನ ವಿಷಯ ಪ್ರಸ್ತಾಪಿಸಿಲ್ಲ ಎಂದ ಪ್ರಧಾನಿ

“ಸತತ ಮೂರನೇ ದಿನವೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಮತದಾನವನ್ನು ಉತ್ತೇಜಿಸಲು USAID ನಿಧಿಯ ಬಗ್ಗೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಆದರೆ ಅವರ ಸ್ವಂತ ದೇಶದ ಖರ್ಚಿನ ಬಗ್ಗೆ ಅವರಿಗೆ ಏನು ಗೊತ್ತು” ಎಂದು ಮಾಳವಿಯಾ ಪ್ರಶ್ನಿಸಿದ್ದಾರೆ.

ವಿವಿಧ ದೇಶಗಳಿಗೆ ಸಹಾಯವನ್ನು ನೀಡುವ ಯುನೈಟೆಡ್ ಸ್ಟೇಟ್ಸ್ ಏಜೆನ್ಸ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ (USAID) ಮೇಲೆ ಟ್ರಂಪ್ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು, ಅಮೆರಿಕವು ಭಾರತದಲ್ಲಿ ಬೇರೊಬ್ಬರನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಟ್ರಂಪ್ ಈ ನಿಧಿ ನೀಡಿರುವುದನ್ನು ಕಿಕ್‌ಬ್ಯಾಕ್ ಯೋಜನೆ ಎಂದು ಕರೆದಿದ್ದಾರೆ.

ಈ ನಡುವೆ ಸರ್ಕಾರವು ವಿದೇಶಿ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆದುಕೊಂಡಿದೆ ಎಂಬ ಟ್ರಂಪ್ ಹೇಳಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಕಾಂಗ್ರೆಸ್ ಸರ್ಕಾರ ವಿದೇಶಿ ಹಣಕಾಸು ಸಂಸ್ಥೆಗಳಿಂದ ಹಣ ಪಡೆದಿದೆ ಎಂದು ಹೇಳಲಾಗುತ್ತಿದೆ. ಸ್ಮೃತಿ ಇರಾನಿ ಯುಎಸ್‌ಎಐಡಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾಗ ಮತ್ತು ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಆ ಪ್ರತಿಭಟನೆಗಳ ಹಿಂದೆ ಯುಎಸ್‌ಎಐಡಿ ಇತ್ತೇ” ಎಂದು ಪವನ್ ಖೇರಾ ಪ್ರಶ್ನಿಸಿದ್ದಾರೆ.

ಇದನ್ನು ಓದಿದ್ದೀರಾ? ಟ್ರಂಪ್ ಮೇಲಿನ ಮೋದಿ ಪ್ರೀತಿ: ಭಾರತದ ಜಾಗತಿಕ ಸ್ಥಾನಮಾನ ಕುಸಿತಕ್ಕೆ ನಾಂದಿ?

“ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೂಡ ಪ್ರತಿಭಟನೆ ನಡೆಸಿದರು, ನಂತರ ನಮ್ಮ ಸರ್ಕಾರ ಚುನಾವಣೆಯಲ್ಲಿ ಸೋತಿತು. ನಂತರ ಅವರು ಅಮೆರಿಕಕ್ಕೆ ಹೋಗಿ ಅಲ್ಲಿ ರೋಡ್ ಶೋಗಳನ್ನು ನಡೆಸಿದರು. ಅವರು ಫೋರ್ಡ್ ಫೌಂಡೇಶನ್‌ನಿಂದ ಹಣವನ್ನು ಪಡೆಯುತ್ತಿದ್ದರು. ಆರ್‌ಎಸ್‌ಎಸ್ ಕೂಡ ಅದರಲ್ಲಿ ಭಾಗಿಯಾಗಿತ್ತು ಎಂದು ಎಲ್ಲರಿಗೂ ತಿಳಿದಿದೆ” ಎಂದು ಖೇರಾ ಹೇಳಿದ್ದಾರೆ.

ಭಾರತದ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯುಎಸ್‌ಎಐಡಿ $21 ಮಿಲಿಯನ್ ಒದಗಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ. “ಕೆಲವು ಯುಎಸ್‌ಎ ಚಟುವಟಿಕೆಗಳು ಮತ್ತು ಹಣಕಾಸಿನ ಕುರಿತು ಅಮೆರಿಕ ಆಡಳಿತವು ಹೊರಹಾಕಿರುವ ಮಾಹಿತಿಯನ್ನು ನಾವು ನೋಡಿದ್ದೇವೆ. ಇವು ಸ್ಪಷ್ಟವಾಗಿ ಬಹಳ ತೊಂದರೆದಾಯಕವಾಗಿವೆ. ಇದು ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಕಳವಳಕ್ಕೆ ಕಾರಣವಾಗಿದೆ” ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X