ಮಹಾ ಕುಂಭಮೇಳದಲ್ಲಿ ನೈರ್ಮಲ್ಯ ಸೌಲಭ್ಯಗಳು ಅಸಮರ್ಪಕ ಆಗಿರುವುದರಿಂದ ಗಂಗಾ ನದಿಯ ದಡದಲ್ಲಿ ಮಲವಿಸರ್ಜನೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಆರೋಪದ ಹಿನ್ನೆಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನಿಪುನ್ ಭೂಷಣ್ ಎಂಬವರು ಉತ್ತರ ಪ್ರದೇಶ ಸರ್ಕಾರದಿಂದ 10 ಕೋಟಿ ರೂಪಾಯಿ ಪರಿಹಾರವನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದಾದ ನಂತರ ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗೂ (ಯುಪಿ ಪಿಸಿಬಿ) ನೋಟಿಸ್ ನೀಡಲಾಗಿದೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ | ಮಹಿಳೆಯರು ಸ್ನಾನ ಮಾಡುವ, ಬಟ್ಟೆ ಬದಲಾಯಿಸುವ ಚಿತ್ರಗಳ ಮಾರಾಟ!
ಕುಂಭಮೇಳ ಸ್ಥಳದಲ್ಲಿ ನೈರ್ಮಲ್ಯ ಸೌಲಭ್ಯಗಳ ಕಳಪೆ ವ್ಯವಸ್ಥೆಯಿಂದಾಗಿ ಉತ್ತರ ಪ್ರದೇಶ ಸರ್ಕಾರವು ದೊಡ್ಡ ಪ್ರಮಾಣದ ಮಾಲಿನ್ಯವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
2024ರ ನವೆಂಬರ್ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಸಹ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಂಗಮದ ಕೆಳಭಾಗದಲ್ಲಿ 100 ಮಿಲಿಲೀಟರ್‌ಗೆ 3,300 ಎಂಪಿಎನ್‌ನಲ್ಲಿ ಕೋಲಿಫಾರ್ಮ್ ಮಟ್ಟ ದಾಖಲಾಗಿದೆ. ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನಿಗದಿಪಡಿಸಿದ 2,500 ಎಂಪಿಎನ್/100 ಎಂಎಲ್‌ನ ಮಿತಿಯನ್ನು ಮೀರಿದೆ.
ಈ ಮಾಲಿನ್ಯಕಾರಕ ನೀರಿನಿಂದಾಗಿ ಕಾಲರಾ, ಹೆಪಟೈಟಿಸ್ ಎ ಮತ್ತು ಪೋಲಿಯೊದಂತಹ ಕಾಯಿಲೆ ಉಂಟಾಗಬಹುದು. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಲಕ್ಷಾಂತರ ಭಕ್ತರಿಗೆ ಅಪಾಯ ಉಂಟಾಗಬಹುದು ಎಂದು ಅರ್ಜಿದಾರ ನಿಪುನ್ ಭೂಷಣ್ ವಾದಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ | ಮಹಿಳೆಯರು ಸ್ನಾನ ಮಾಡುವ, ಬಟ್ಟೆ ಬದಲಾಯಿಸುವ ಚಿತ್ರಗಳ ಮಾರಾಟ!
ಇನ್ನು ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಹಲವು ಕಡೆಗಳಲ್ಲಿ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಗಂಗಾ ನದಿಯಲ್ಲಿ ಫೀಕಲ್ ಕೋಲಿಫಾರ್ಮ್ (faecal coliform) ಬ್ಯಾಕ್ಟೀರಿಯಾ ಅಧಿಕವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇತ್ತೀಚೆಗೆ ತಿಳಿಸಿದೆ.
ಇನ್ನು ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರ ಮಂಡಳಿಗೆ (ಯುಪಿಪಿಸಿಬಿ) ತಿಳಿಸಿದ್ದರೂ ಯಾವುದೇ ಅಗತ್ಯ ಕ್ರಮವನ್ನು ಕೈಗೊಂಡಿಲ್ಲ. ಬದಲಾಗಿ ಕೆಲವು ಪ್ರದೇಶಗಳ ನೀರಿನ ಪರೀಕ್ಷೆ ನಡೆಸಿ ಪತ್ರ ಬರೆದಿದೆ ಎಂದು ಹೇಳಲಾಗಿದೆ.

ನೀರು ಮಲಿನವಾದುದರಿಂದಲೇ ಇರಬೇಕು , ಮೋದಿ ನೀರಲ್ಲಿ ಮುಳುಗಿ ಏಳಿಲ್ಲ ?
ಸೊಂಟದ ಕೆಳಗಿನ ನೀರಿನಲ್ಲಿ ಹಗ್ಗದ ಸಹಾಯದೊಂದಿಗೆ ಬಗ್ಗುತ್ತಾ – ಏಳುತ್ತ ಕುಂಭ ಸ್ನಾನ ಮಾಡಿದರು ಅವರು !
(# ಸಾಕ್ಷ್ಯ: ಮೋದಿ ಅವರ ಕುಂಭ ಸ್ನಾನದ ವೀಡಿಯೋ ಚಿತ್ರ)