ಸಮಾಜದಲ್ಲಿ ಕೋಮು ಸೌರ್ಹಾದತೆಯ ಅರಿವು ಮೂಡಿಸಲು ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥೆ ಮಮತಾಜ್ ಬೇಗಂ ಹೇಳಿದರು.
ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಹಾರಾ ಗ್ರಾಮೀಣ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಹಿಡಿಯುವಲ್ಲಿ ಕೋಮು ಸೌಹಾರ್ದತೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಗ್ರಾಮೀಣ ಭಾಗದಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಂಡು ಹೋಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಸಾರ್ವಜನಿಕರು ಎಲ್ಲರೂ ಒಂದೇ ಎನ್ನುವ ಭಾವದಿಂದ ಜೀವಿಸಿದರೆ ಯಾವುದೇ ಕಾನೂನಿನ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಎಲ್ಲ ಕೋಮಿನವರು ಭಾತೃತ್ವದಿಂದ ಬದುಕಬೇಕುʼ ಎಂದರು.
ಧನ್ನೂರ್ ಠಾಣೆ ಎಎಸ್‌ಐ ಬಾಪುರಾವ್ ಮಾತನಾಡಿ, ʼಇಡೀ ಮಾನವ ಜನಾಂಗಕ್ಕಾಗಿ ಹೋರಾಡಿದ ಡಾ.ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಬದುಕು-ಹೋರಾಟದ ಆಶಯದಂತೆ ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯʼ ಎಂದು ನುಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಸಹಾರಾ ಸಂಸ್ಥೆಯ ಅಧ್ಯಕ್ಷೆ ಕವಿತಾ ಓಂಕಾರ ಮಜಕೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಭು ಕಾಂಬಳೆ ಮತ್ತು ತಂಡದವರು ಸುಗಮ ಸಂಗೀತ ನಡೆಸಿಕೊಟ್ಟರು. ಶಾಂತಮ್ಮ ಡೊಣಗಾಪುರ ಮತ್ತು ಕಲಾ ತಂಡದವರು ವಚನ ಗಾಯನ ನಡೆಸಿ, ಜಾನಪದ ಗೀತೆಗಳ ಮೂಲಕ ಕೋಮು ಸೌಹಾರ್ದತೆಯ ಜಾಗೃತಿ ಮೂಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತುಕ್ಕು ಹಿಡಿಯುತ್ತಿವೆ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಿದ ಶುದ್ಧ ನೀರಿನ ಘಟಕ!
ಗ್ರಾಪಂ ಅಧ್ಯಕ್ಷೆ ಜ್ಯೋತಿ ಷಣ್ಮುಖ, ಉಪಾಧ್ಯಕ್ಷ ರಾಜಕುಮಾರ ಪಾಟೀಲ್, ಸದಸ್ಯರಾದ ಶಾಮ ಪಾಟೀಲ್ ಹಾಗೂ ಓಂಕಾರ ಮಜಕೂರೆ, ರಾಜಕುಮಾರ ಪಾಟೀಲ, ಸಲೀಮ ಬಾಗವಾನ್, ಶಿಕ್ಷಕಿ ಸಾರಿಕಾ, ಸತ್ಯಕಲಾ, ಅಂಬುಜಾ, ಛಾಯಾ ಪ್ರಮುಖರಾದ ಶರಣಪ್ಪ, ರವೀಂದ್ರ ಕರಂಜೆ, ಸರೋಜಿನಿ ಉಪಸ್ಥಿತರಿದ್ದರು