ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಹಾಗೂ ವರನಟ ಡಾ.ರಾಜ್ ಕುಮಾರ್ ರವರ ಪ್ರತಿಮೆಗಳಿಗೆ ಮೇಲ್ಟಾವಣಿ (ಮಂಟಪ) ನಿರ್ಮಾಣ ಮಾಡಬೇಕೆಂದು ಹೋರಾಟ ಸಮಿತಿಯು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪರವರನ್ನು ಆಗ್ರಹಿಸಿದ್ದಾರೆ.
ಮೈಸೂರು ನಗರದಲ್ಲಿ ಡಾ ಬಿ ಆರ್ ಅಂಬೇಡ್ಕರ್, ಕುವೆಂಪು, ಬಸವಣ್ಣ, ಪರಮಹಂಸ, ಜಯ ಚಾಮರಾಜೇಂದ್ರ ಒಡೆಯರ್, ಕೃಷ್ಣರಾಜ ಒಡೆಯರ್ ಇನ್ನಿತರ ನಾಯಕರುಗಳ ಪ್ರತಿಮೆಗಳಿಗೆ ಸುಂದರವಾದ ಮೇಲ್ಪಾವಣಿ, ಅತ್ಯಾಕರ್ಷಕವಾದ ಮಂಟಪ ನಿರ್ಮಾಣ ಮಾಡಿರುವುದು ಮೈಸೂರಿನ ಜನತೆಗೆ ಸಂತೋಷದ ವಿಷಯವಾಗಿರುತ್ತದೆ. ಅದೇ ರೀತಿ ಕನ್ನಡ ನಾಡಿನ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಕನ್ನಡ ಚಲನ ಚಿತ್ರರಂಗ, ರಂಗಭೂಮಿ, ಪೌರಾಣಿಕ, ಐತಿಹಾಸಿಕ ನಾಟಕಗಳಿಗೆ ಸೇವೆ ಸಲ್ಲಿಸಿದ ಡಾ ರಾಜ್ ಕುಮಾರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನ ಮಂತ್ರಿ, ದಲಿತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಹೋರಾಟ ಮಾಡಿದಂತಹ ಡಾ ಬಾಬು ಜಗಜೀವನ ರಾಂ ರವರ ಪ್ರತಿಮೆಗಳಿಗೆ ಮೇಲ್ಬಾವಣಿ (ಮಂಟಪ) ಇಲ್ಲದಿರುವುದು ವಿಷಾದನೀಯವಾಗಿರುತ್ತದೆ.
ಈ ಕೂಡಲೇ ಈ ಸಾಲಿನ ಬಜೆಟ್‌ನಲ್ಲಿ ಇವರಿಬ್ಬರ ಮಹನೀಯರ ಪುತ್ಥಳಿಗಳಿಗೆ ಆಕರ್ಷಣೀಯವಾದ ಮೇಲ್ಪಾವಣಿ (ಮಂಟಪ) ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಬೇಕಾಗಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಸ್ ರಾಜೇಶ್ ರವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಒಕ್ಕಲಿಗರ ವಿಕಾಸ ವೇದಿಕೆಯಿಂದ ‘ಹತ್ತನೇ ಚಾಮರಾಜ ಒಡೆಯರ್ ಜಯಂತ್ಯುತ್ಸವ ‘
ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರುಗಳಾದ ಹರಿಶ್ಚಂದ್ರ,ಕೆಪಿಸಿಸಿ ಸದಸ್ಯ ಬಿ ಜಿ ಕೇಶವ,ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ನಗರ ಕಾರ್ಯದರ್ಶಿ ರಾಮಣ್ಣ,ಕಾಂಗ್ರೆಸ್ ನಗರ ಉಪಾಧ್ಯಕ್ಷರಾದ ರವಿ, ಶ್ರೀನಿವಾಸ್ ಇದ್ದರು.
