“ಸಮಾಜದಲ್ಲಿ ಪರಿಪೂರ್ಣತೆಯಿಂದ ಶಿಕ್ಷಣ ಪಡೆದು ವ್ಯಕ್ತಿತ್ವ ನಿರ್ಮಾಣ ಹೊಂದಲು ಪರಸ್ಪರ ಸಂವಹನ ಕಲೆ ಬಹು ಮುಖ್ಯವಾಗಿದೆ” ಎಂದು ಜೆಸಿಐ ನೂತನ ಅಧ್ಯಕ್ಷ ಕುಮಾರ ಬೆಣ್ಣಿ ಅವರು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಕೆ. ಎಲ್. ಇ ಶಿಕ್ಷಣ ಸಂಸ್ಥೆಯ ರಾಜ ರಾಜೇಶ್ವರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಜೆಸಿಐ ಸಂಸ್ಥೆ ಆಯೋಜಿಸಿದ್ದ ವ್ಯಕ್ತಿತ್ವ ಹಾಗೂ ವಿಕಾಸತೆ ವಿಷಯ ಕುರಿತು ಮಾತನಾಡಿದರು.
“ಜೆಸಿಐ ಸಂಸ್ಥೆಯು, ತನ್ನದೇ ಆದ ಯೋಜನೆಯಲ್ಲಿ ವ್ಯಕ್ತಿತ್ವ ನಿರ್ಮಾಣ, ಪರಿಣಾಮ ಕಾರಿ ಭಾಷಣ ಕಲೆ, ಸೇರಿದಂತೆ ಮತ್ತಿತರ ಕ್ರಿಯಾ ಯೋಜನೆಗಳು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ನಡೆಯುವ ಶಿಕ್ಷಣಕ್ಕಷ್ಟೇ ಸೀಮಿತವಾಗದೆ, ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ” ಎಂದರು.
ಜೋನ್ ಚೇರ್ಮನ್ ಪ್ರಭುಲಿಂಗಪ್ಪ ಹಲಗೇರಿ ಅವರು ಮಾತನಾಡಿ, “ಶಿಕ್ಷಣ ಮತ್ತು ಸಂಸ್ಕೃತಿ ವಿದ್ಯಾರ್ಥಿ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಪರಿಪೂರ್ಣತೆ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಬೇಕು ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಿ, ದೇಶದ ಏಕತೆ ಮತ್ತು ಐಕ್ಯತೆ ಸಾಧಿಸಲು ಸಾಧ್ಯವಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಒಕ್ಕಲಿಗರ ವಿಕಾಸ ವೇದಿಕೆಯಿಂದ ‘ಹತ್ತನೇ ಚಾಮರಾಜ ಒಡೆಯರ್ ಜಯಂತ್ಯುತ್ಸವ ‘
ಕಾಲೇಜು ಪ್ರಾಚಾರ್ಯ ನಾರಾಯಣ ನಾಯಕ ಎ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೋನ್ ಟ್ರೈನರ್ ಪ್ರಮೋದ ಶಾಸ್ತ್ರಿ, ವಿದ್ಯಾರ್ಥಿ ಪ್ರತಿನಿಧಿ ರೇಖಾ ಶಿಡೇನೂರ,ಕಾರ್ಯದರ್ಶಿಇಮ್ರಾನ್ ನೀಲಗಾರ, ಉಪಾಧ್ಯಕ್ಷ ಅಶೋಕ ದುರ್ಗದಸೀಮಿ, ಕೋಶಾಧ್ಯಕ್ಷ ವಿದ್ಯಾದರ ಹಲಗೇರಿ, ಕಾರ್ಯಕ್ರಮಾಧಿಕಾರಿ ಭೋಜರಾಜ ಗುಲಗಂಜಿ, ಮಾಜಿ ಅಧ್ಯಕ್ಷರಾದ ಶಿವಶಂಕರ ಕೆ, ಡಾ, ಶಿವಾನಂದ ಹಿತ್ತಲಮನಿ, ವೆಂಕಟೇಶ್ ಕಾಕಿ, ಶರತ ಕುಮಾರ್, ವಿನಯ ಕುಮಾರ ಗುಲಗಂಜಿ, ವಿನಾಯಕ ಯಕನಹಳ್ಳಿ, ಮಂಜುನಾಥ ಜಿ, ಜಯಣ್ಣ ಕರಡೇರ, ಪ್ರಕಾಶ್ ಗಚ್ಚಿನ ಮಠ, ಸೇರಿದಂತೆ ಮತ್ತಿತರೆ ಪದಾಧಿಕಾರಿಗಳು ಕಾಲೇಜಿನ ಉಪನ್ಯಾಸಕರು ಎನ್. ಎಸ್.ಎಸ್, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
