‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಗೆ ಮೈಸೂರಿನಲ್ಲಿ ಚಾಲನೆ

Date:

Advertisements

ಮೈಸೂರು ನಗರದ ಪುರಭವನದ ಮುಂಭಾಗದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಗೆ ಚಾಲನೆ ನೀಡಿದರು.

“ಭಾರತದ ಇಂದಿನ ರಾಜಕೀಯ ದುಃಸ್ಥಿತಿ ಅತೀವ ಆತಂಕಕ್ಕೆ ದೂಡಿದೆ. ಇದೇ ರೀತಿ ರಾಜಕೀಯ ಕೆಟ್ಟ ಪರಿಸ್ಥಿತಿಯಲ್ಲಿ ಸಾಗಿದರೆ ಹಸಿವು, ಅಸಮಾನತೆ ಮತ್ತು ಶೋಷಣೆಯಿಂದ ಬಿಡುಗಡೆ ಸಾಧ್ಯವೇ ಇಲ್ಲ. ಸುಳ್ಳು, ಅಸಹನೆ, ದ್ವೇಷಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ. ರಾಜಕೀಯ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಅಲ್ಲದೆ, ಜನರ ಪರಿಸ್ಥಿತಿ ಉನ್ನತ ಮಟ್ಟಕ್ಕೆ ತರಲು ಸಾಧ್ಯವೇ ಇಲ್ಲ. ಇದನ್ನೆಲ್ಲ ಮನಗಂಡು ರಾಜ್ಯದಲ್ಲಿ’ಜಾಗೃತ ಕರ್ನಾಟಕ’ವು ಇದೀಗ ರಾಜಕೀಯ ಸಂಘಟನೆಯಾಗಿ ರೂಪುಗೊಂಡಿದೆ.

ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮದ್ ಅವರ ನೇತೃತ್ವದಲ್ಲಿ ಸಂವಿಧಾನ ಪೀಠಿಕೆ ಓದಿದ ಕಾರ್ಯಕರ್ತರು “ರಾಜ್ಯದಲ್ಲಿ ಯುವಜನರನ್ನು ಒಳಗೊಂಡ ಪರ್ಯಾಯ ರಾಜಕಾರಣ, ಪ್ರಜಾಪ್ರಭುತ್ವ ಆಶಯದೊಂದಿಗೆ ಜನಪರವಾದ ಕೆಲಸ ಮಾಡುವ ಉದ್ದೇಶದಿಂದ ಜಾಗೃತ ಕರ್ನಾಟಕವನ್ನು ಇಂದು ರಾಜಕೀಯ ಸಂಘಟನೆಯಾಗಿ ಚಾಲನೆ ನೀಡಿದ್ದೇವೆ.

Advertisements

ರಾಜ್ಯದಲ್ಲಿ ಸಕ್ರಿಯವಾದ ರಾಜಕಾರಣ, ಯುವಜನರ ಒಳಗೊಳ್ಳುವಿಕೆ, ಸರ್ಕಾರಗಳ ಅನೀತಿಗಳ ವಿರುದ್ಧ ಹೋರಾಟದ ಮೂಲಕ ಜಾಗೃತಿ ಮೂಡಿಸುತ್ತ ಪರ್ಯಾಯ ರಾಜಕೀಯ ಶಕ್ತಿಯಾಗಿ ಮುಂದಿನ ದಿನಗಳಲ್ಲಿ ರೂಪಿಸಲಿದ್ದೇವೆ” ಎಂದರು.

ಇಂದು ಮೈಸೂರಿನಲ್ಲಿ ಚಾಲನೆ ನೀಡಿದ್ದೇವೆ ಇಡೀ ರಾಜ್ಯಾದ್ಯಂತ ಸದೃಢವಾದ ಕಾರ್ಯಕರ್ತರ ಪಡೆಯನ್ನು ರೂಪಿಸಿ, ರಾಜ್ಯದಲ್ಲಿ ಹೊಸದೊಂದು ರಾಜಕಾರಣಕ್ಕೆ ಭಾಷ್ಯ ಬರೆಯಲಿದ್ದೇವೆ ಎನ್ನುವ ಆಶಯ ನುಡಿಗಳನ್ನಾಡಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಡಾ ಬಾಬು ಜಗಜೀವನ ರಾಂ,ಡಾ ರಾಜ್ ಕುಮಾರ್ ಪ್ರತಿಮೆಗಳಿಗೆ ಮೇಲ್ಛಾವಣಿ ನಿರ್ಮಾಣ ಮಾಡುವಂತೆ ಆಗ್ರಹ

ಸುಬ್ರಹ್ಮಣ್ಯ, ಜಗದೀಶ್ ನಗರಕೆರೆ, ಚೇತನ್ ಕಾಗೆಪುರ, ಮಹೇಶ್ ಗೊರವನಹಳ್ಳಿ, ಮೋಹನ್ ಜಿ ಕೆ, ಮಂಡ್ಯ ನಾಗೇಶ್, ಸಂತೋಷ್, ಪೃಥ್ವಿರಾಜ್‌ ಬೊಪ್ಪ ಸಮುದ್ರ, ಕಿರಣ ಕನಕಪುರ, ರಾಘುರಾಮ್ ಬೆಂಗಳೂರು, ಜಗದೀಶ್ ನುಡಿ ಕರ್ನಾಟಕ, ಮಂಜುನಾಥ್ ಮಂಡ್ಯ, ಮಂಜುನಾಥ್ ಮಳವಳ್ಳಿ, ನವೀನ ಮಂಡ್ಯ, ಅಮೀರ್ ಅಮ್ಜ, ಸ್ವಾಮಿ ಹೊಂಗನೂರು, ಮಹದೇವ್ ಪ್ರಸಾದ್ ಹೊಂಗನೂರು, ಮಧು ಬಳ್ಳೂರು, ಕೃಷ್ಣಮೂರ್ತಿ ಚಂಗಚಹಳ್ಳಿ, ಹರೀಶ್ ಕುಮಾರ್ ಮೈಸೂರು, ಅಬ್ದುಲ್ಲ ಹಪೀಚ್, ದಿನೇಶ್ ರಾಮ ನಾಯಕ, ಈದಿನ.ಕಾಮ್ ವರದಿಗಾರ ಮೋಹನ್ ಮೈಸೂರು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ನಿಮಗೆ ಮಂಗಳೂರಿನಲ್ಸಿ ಒಳ್ಳೆಯ ಅವಕಾಶ ಇದೆ. ಸಿದ್ರಾಮಣ್ಣನ ಪರಿವಾರ ವಾದಿ ನೀತಿಯ ಬಗ್ಗ್ರೆ ಕ ಪಕ್ಷದ ಬಗ್ಗ್ರೆ ಕಾಂಗ್ಸ್ರೆಸ್ ಕಾರ್ಯಕರ್ತರು ಅಸಮಾಧಾನ ಹೊಂದಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X