ಫಿಲ್ಮ್‌ ಅಕಾಡೆಮಿ | ನಿರ್ದೇಶಕ ನಾಗಾಭರಣಗೆ ತಪ್ಪು ತಿಳಿವಳಿಕೆ ಇದೆ – ವಿದ್ಯಾಶಂಕರ್

Date:

Advertisements

ಕರ್ನಾಟಕ ಚಲನಚಿತ್ರ ಅಕಾಡೆಮಿ ಮೊದಲ ಅಧ್ಯಕ್ಷರು ಟಿ.ಎಸ್. ನಾಗಾಭರಣ ಅವರಿಗೆ ಅಕಾಡೆಮಿಯ ಸಾಂಸ್ಥಿಕ ಸ್ವರೂಪ ಬದಲಾಯಿಸಲು ಅವರಿಗೆ ಅವಕಾಶವಿತ್ತು. ಆದರೆ ಅವರು ಮಾಡಲಿಲ್ಲ. ನಂತರ ಬಂದವರೂ ಮಾಡಲಿಲ್ಲ! ಆದ್ದರಿಂದ ಸುಚಿತ್ರಾ ಫಿಲ್ಮ್ ಸೊಸೈಟಿಗೆ ಸಂಬಂಧಿಸಿದವರೇ ಕಲಾತ್ಮಕ ನಿರ್ದೇಶಕರಾಗಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ವಿದ್ಯಾಶಂಕರ್ ಹೇಳುತ್ತಾರೆ

“ನಾನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕನಾಗಿ ಮುಂದುವರಿದಿರುವುದರ ಕುರಿತು ಸಿನೆಮಾ ನಿರ್ದೇಶಕ ಟಿ.ಎಸ್. ನಾಗಾಭರಣ ಅವರಿಗೆ ತಪ್ಪು ತಿಳಿವಳಿಕೆ ಇದೆ” ಎಂದು ಎನ್. ವಿದ್ಯಾಶಂಕರ್ ಎಂದು ಸ್ಪಷ್ಟನೆ ನೀಡಿದ್ದಾರೆ.

“ಕಲಾತ್ಮಕ ನಿರ್ದೇಶಕ ಸ್ಥಾನಕ್ಕೆ ಬೇರೆಯವರು ಏಕಿಲ್ಲ? ಫಿಲ್ಮ್ ಫೆಸ್ಟಿವಲ್ ಆರ್ಟ್ ಡೈರೆಕ್ಟರ್ ಬದಲಾಗುತ್ತಿರಬೇಕು. ಆದರೆ ಪದೇಪದೇ ವಿದ್ಯಾಶಂಕರ್ ಅವರನ್ನೇ ಆರ್ಟ್ ಡೈರೆಕ್ಟರ್ ಅಂತ ಏಕೆ ಮಾಡುತ್ತಿದ್ದಾರೆ? ಬೇರೆ ಪರ್ಯಾಯವಿಲ್ಲವೇ? ಇವರುಗಳು ಬೇರೆಯವರನ್ನು ಕಲಾತ್ಮಕ ನಿರ್ದೇಶಕರ ಸ್ಥಾನಕ್ಕೆ ಬೆಳೆಸಬೇಕಲ್ಲವೇ? ಇಂಥ ಸ್ಥಾನಗಳಿಗೆ ಇನ್ನೊಂದು ಹತ್ತು ಮಂದಿ ತಯಾರಾಗಬೇಕು ” ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಮೊದಲ ಅಧ್ಯಕ್ಷರಾಗಿದ್ದ ಟಿ.ಎಸ್. ನಾಗಾಭರಣ ಅವರು ಈ ದಿನ ಡಾಟ್ ಕಾಮ್ ಜೊತೆ ಮಾತನಾಡುವಾಗ ಹೇಳಿದ್ದರು. ಇದಕ್ಕೆ ಸುದೀರ್ಘ ಪ್ರತಿಕ್ರಿಯೆಯನ್ನು ವಿದ್ಯಾಶಂಕರ್‌ ನೀಡಿದ್ದಾರೆ.

Advertisements

“ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಮುಖಾಂತರ 2011ರಲ್ಲಿ ಆರಂಭವಾಯಿತು. ಇದಕ್ಕೂ ಮೊದಲೇ ಅಂದರೆ 2006ರಲ್ಲಿ ಸುಚಿತ್ರಾ ಫಿಲ್ಮ್ ಸೊಸೈಟಿ ಗಿರೀಶ್ ಕಾಸರವಳ್ಳಿ ಅವರ ಕಲಾತ್ಮಕ ನಿರ್ದೇಶನದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಿಸಿತು. ನಾನಾಗ ಸುಚಿತ್ರಾದ ಅಧ‍್ಯಕ್ಷನಾಗಿದ್ದೆ. 2009ರ ತನಕ ಫಿಲ್ಮ್ ಫೆಸ್ಟಿವಲ್ ನಡೆಸಿದೆವು. 2009ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಆರಂಭಿಸಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ವಾರ್ತಾ ಇಲಾಖೆ ಅಧಿಕಾರಿಗಳು ಸುಚಿತ್ರಾ ಫಿಲ್ಮ್ ಸೊಸೈಟಿ ಪದಾಧಿಕಾರಿಗಳೊಂದಿಗೆ ಮಾತನಾಡಿದರು. ಇನ್ನು ಮುಂದೆ ಸರ್ಕಾರವೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಡೆಸುತ್ತದೆ ಎಂದು ಲಿಖಿತವಾಗಿ ಕೇಳಿಯೇ ತೆಗೆದುಕೊಂಡರು” ಎಂದು ಬೆಂಗಳೂರು 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ವಿವರಿಸಿದರು.

“ನಾಗಾಭರಣ ನಿಮ್ಮೊಂದಿಗೆ (ಕುಮಾರ ರೈತ) ಮಾತನಾಡುವಾಗ ʼನರಹರಿರಾಯರು ವಿದ್ಯಾಶಂಕರ್ ಅವರನ್ನು ಕಲಾತ್ಮಕ ನಿರ್ದೇಶಕರನ್ನಾಗಿ ತರಬೇತು ಮಾಡಿದರುʼ ಎಂದು ಹೇಳಿದ್ದಾರೆ. ಆದರೆ, ವಾಸ್ತವ ಬೇರೆ. ನರಹರಿರಾಯರು ನನ್ನನ್ನು ತರಬೇತು ಮಾಡಿಲ್ಲ. ಏಕೆಂದರೆ ಮೊದಲ ಮೂರು ವರ್ಷ ಗಿರೀಶ್ ಕಾಸರವಳ್ಳಿ ಕಲಾತ್ಮಕ ನಿರ್ದೇಶಕ. ರಾಜ್ಯ ಸರ್ಕಾರ 2011ರಲ್ಲಿ ಫಿಲ್ಮ್ ಫೆಸ್ಟಿವಲ್ ಶುರು ಮಾಡಿದಾಗ ಮೂರು ವರ್ಷ (2011 ರಿಂದ 2013) ಸುಚಿತ್ರಾ ಮಾಜಿ ಅಧ್ಯಕ್ಷ ನರಹರಿ ರಾವ್ ಅವರು ಕಲಾತ್ಮಕ ನಿರ್ದೇಶಕರಾಗಿದ್ದರು. ಈ ಬಳಿಕ ನಾನು ಐದು ವರ್ಷ (2014 ರಿಂದ 2020) ಕಲಾತ್ಮಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಕೋವಿಡ್ ಸಮಯದಲ್ಲಿ (2021) ಫಿಲ್ಮ್ ಫೆಸ್ಟಿವಲ್ ನಡೆಯಲಿಲ್ಲ. 2022 ಮತ್ತು 2023ರಲ್ಲಿ ಮತ್ತೆ ನರಹರಿ ರಾವ್ ಅವರೇ ಕಲಾತ್ಮಕ ನಿರ್ದೇಶಕರಾದರು. ನಾನು 2024ರಲ್ಲಿ ಪುನಃ ಕಲಾತ್ಮಕ ನಿರ್ದೇಶಕನಾದೆ. ಈಗ 2025ರಲ್ಲಿಯೂ ಇದ್ದೇನೆ.

BIFF 16 1

ಹೀಗೆ ನಾನು ಮತ್ತು ನರಹರಿರಾಯರೇ ಪದೇಪದೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ದೇಶಕರಾಗಲು ಸಹ ಕಾರಣಗಳಿವೆ. ಸುಚಿತ್ರಾ ಫಿಲ್ಮ್ ಸೊಸೈಟಿ ಈ ಫೆಸ್ಟಿವಲ್ ಪ್ರಾರಂಭಿಸಿದಾಗ ಇದ್ದ ಸಾಂಸ್ಥಿಕ ಸ್ವರೂಪವೇ ಈಗಲೂ ಮುಂದುವರಿದಿದೆ. ರಾಜ್ಯ ಸರ್ಕಾರ ತನ್ನ ಅಧೀನಕ್ಕೆ ಚಲನಚಿತ್ರೋತ್ಸವ ಪಡೆದುಕೊಂಡಾಗ ಅದರ ಸಾಂಸ್ಥಿಕ ಸ್ವರೂಪ ಬದಲಾಗಬೇಕಿತ್ತು. ಆದರೆ ಬದಲಾಗಲಿಲ್ಲ. ಇದೇ ದೊಡ್ಡ ಸಮಸ್ಯೆಯಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಮೊದಲ ಅಧ್ಯಕ್ಷರು ಟಿ.ಎಸ್. ನಾಗಾಭರಣ. ಅಕಾಡೆಮಿ ಸಾಂಸ್ಥಿಕ ಸ್ವರೂಪ ಬದಲಾಯಿಸಲು ಅವರಿಗೆ ಅವಕಾಶವಿತ್ತು. ಆದರೆ ಅವರು ಮಾಡಲಿಲ್ಲ. ಅವರು ಅಕಾಡೆಮಿಗೆ ಸೂಕ್ತ ಸ್ವರೂಪ ಕೊಡಲು ಆಗಲಿಲ್ಲ; ನಂತರ ಬಂದವರೂ ಕೊಡಲಿಲ್ಲ! ಆದ್ದರಿಂದ ಸುಚಿತ್ರಾ ಫಿಲ್ಮ್ ಸೊಸೈಟಿಗೆ ಸಂಬಂಧಿಸಿದವರೇ ಕಲಾತ್ಮಕ ನಿರ್ದೇಶಕರಾಗಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ವಿದ್ಯಾಶಂಕರ್ ಹೇಳುತ್ತಾರೆ.

“ಅಕಾಡೆಮಿ ಬೈಲಾವನ್ನು ನಾನು, ನಾಗಾಭರಣ ಮತ್ತಿತರರು ಒಟ್ಟಿಗೆ ಕುಳಿತು ಮಾಡಿದ್ದೇವೆ. ಏಕೆ ಕಲಾತ್ಮಕ ನಿರ್ದೇಶಕರಾಗಿದ್ದವರೇ ಪದೇಪದೇ ಮುಂದುವರಿಯುವ ಸ್ಥಿತಿ ಇದೆ ಎಂದು ನಾಗಾಭರಣ ಯೋಚಿಸಬೇಕು. ಏಕೆಂದರೆ ಚಲನಚಿತ್ರ ಅಕಾಡೆಮಿ ಸರ್ಕಾರದ ಸಂಸ್ಥೆಯಾಗಿ ರೂಪುಗೊಂಡಿಲ್ಲ. ಹಾಗಾಗಿ ಆರು ತಿಂಗಳು ಅವಧಿಯಲ್ಲಿ ಮಾಡಬೇಕಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕೆಲಸಗಳನ್ನು ಆರು ವಾರದಲ್ಲಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಸರ್ಕಾರದವರು ಹಿಂದೆ ಕೆಲಸ ಮಾಡಿ ಅನುಭವವಿರುವ ನಮ್ಮನ್ನೇ ಕರೆಯುತ್ತಿದ್ದಾರೆ.

ಈಗಾಗಲೇ ಕೆಲವರು ಕಲಾತ್ಮಕ ನಿರ್ದೇಶಕರಾಗಿ ಕೆಲಸ ಮಾಡುವಷ್ಟು ತರಬೇತು ಆಗಿದ್ದಾರೆ. ಆದರೆ ಅವಧಿ ಕಡಿಮೆ ಇದ್ದಾಗ ಹೊಸಬರಿಗೆ ಕೊಟ್ಟು ಕೆಲಸ ಮಾಡಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ನಮ್ಮನ್ನು (ನರಹರಿರಾವ್, ವಿದ್ಯಾಶಂಕರ್) ತೆಗೆದುಕೊಳ್ಳುತ್ತಿರಬಹುದು. ನಾನೇನು ನನ್ನನ್ನೇ ಕಲಾತ್ಮಕ ನಿರ್ದೇಶಕ ಮಾಡಿ ಎಂದು ಅರ್ಜಿ ಹಾಕಿಕೊಂಡಿಲ್ಲ. ಆದ್ದರಿಂದ ನನ್ನನ್ನು ದೂಷಿಸಿ ಪ್ರಯೋಜನವಿಲ್ಲ.

ವಾಸ್ತವದಲ್ಲಿ ಫಿಲ್ಮ್ ಫೆಸ್ಟಿವಲ್ ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಡುತ್ತಿರುವ ಕಾರ್ಯಕ್ರಮವಲ್ಲ. ಇದರ ಬಗ್ಗೆ ಬಹಳಷ್ಟು ಮಂದಿಗೆ ತಪ್ಪು ಅಭಿಪ್ರಾಯವಿದೆ. ಅಕಾಡೆಮಿಯೇ ಮಾಡುತ್ತಿದೆ ಎಂದು ತಿಳಿದುಕೊಂಡಿದ್ದಾರೆ. ವಾರ್ತಾ ಇಲಾಖೆಯು ಚಲನಚಿತ್ರ ಅಕಾಡೆಮಿ ಮೂಲಕ ಮಾಡುತ್ತಿದೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಂಘಟನಾ ಸಮಿತಿ ಆಗುತ್ತದೆ. ಅದರಲ್ಲಿ ಅಕಾಡೆಮಿ ಅಧ್ಯಕ್ಷರೊಬ್ಬರು ಇರುತ್ತಾರೆ. ಉಳಿದ ಸದಸ್ಯರೆಲ್ಲ ಬೇರೆಯವರೇ ಇರುತ್ತಾರೆ. ಮತ್ತೊಂದು ಕೋರ್ ಕಮಿಟಿ ಮಾಡುತ್ತಾರೆ. ಇದರಲ್ಲಿ ಅಕಾಡೆಮಿ ಅಧ್ಯಕ್ಷರು ಇರುತ್ತಾರೆ. ರಾಜ್ಯ ಸರ್ಕಾರದ ಅಧಿಕಾರಿಗಳೂ ಇರುತ್ತಾರೆ. ಅಕಾಡೆಮಿ ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ರೂಪುಗೊಂಡಿಲ್ಲ. ಇದರಿಂದಲೇ ಫಿಲ್ಮ್ ಫೆಸ್ಟಿವಲ್‌ಗೂ ಸಹ ಒಂದು ನಿರ್ಧಿಷ್ಟ ಸ್ವರೂಪ ಬಂದಿಲ್ಲ” ಎಂದು ವಿದ್ಯಾಶಂಕರ್ ವಿವರಿಸಿದರು.

(ನಾಗಾಭರಣ ಅವರ ಅಭಿಪ್ರಾಯದ ಪೂರ್ಣ ಪಠ್ಯವನ್ನು ಫಿಲ್ಮ್ ಅಕಾಡೆಮಿ ಅವಾಂತರ ಭಾಗ 3ರಲ್ಲಿ ಗಮನಿಸಬಹುದು)
ಫಿಲ್ಮ್‌ ಅಕಾಡೆಮಿ ಅವಾಂತರ ಭಾಗ-3 | ನಾಗಾಭರಣ ಅವಧಿಯಲ್ಲಿ ಫಿಲ್ಮ್ ಅಕಾಡೆಮಿಗೆ ಗಟ್ಟಿ ಅಡಿಪಾಯ ದೊರೆಯಿತೆ?

ಕುಮಾರ ರೈತ
ಕುಮಾರ ರೈತ
+ posts

ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕುಮಾರ ರೈತ
ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಕೇರಳ | ಟ್ರಕ್‌ಗೆ ಕಾರು ಡಿಕ್ಕಿ; ಮಲಯಾಳಂ ನಟನಿಗೆ ಗಾಯ

ಮಲಯಾಳಂ ನಟ ಬಿಜು ಕುಟ್ಟನ್‌ ಅವರು ಇಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

Download Eedina App Android / iOS

X