ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಲ ಗ್ರಾಮದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳೆಯೋರ್ವರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ರಾಮದುರ್ಗ ತಾಲೂಕಿನ ಕಲಹಾಗ್ರಾಮದ ಶೇಖವ್ವ ಮಾದರ್(45) ಕೊಲೆಯಾದ ಮಹಿಳೆಯಾಗಿದ್ದಾರೆ. ಅದೇ ಗ್ರಾಮದ ನಿವಾಸಿ ಮಂಜುನಾಥ ಮಾದರ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಎರಡು ಕುಟುಂಬಗಳ ನಡುವಿನ ಹಳೆಯ ವೈಷಮ್ಯ ಮುಂದುವರಿದಿತ್ತು. ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದ್ದರಿಂದ ಒಂದು ಕುಟುಂಬದವರು ಊರು ಬಿಟ್ಟಿದ್ದರು. ಘಟನೆ ನಡೆದ ದಿನ ಶೇಖವ್ವ ಪಡಿತರ ಸಾಮಗ್ರಿಗಳನ್ನು ತರಲು ಕಲಹಾಲ ಗ್ರಾಮಕ್ಕೆ ಹೋಗಿದ್ದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಮಂಜುನಾಥ್ ಆಕೆಯ ಮೇಲೆ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಸುರೇಬಾನ ಪೊಲೀಸ ಠಾಣೆಯ ಪೋಲಿಸರು ಆರೋಪಿ ಮಂಜುನಾಥನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.