ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆತ್ತಿರುವ 2024-25 ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಮಾತ್ರವೇ ಚರ್ಚೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಭೆಯಯಲ್ಲಿ ಸಚಿವರುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಕೆಡಿಪಿ ಸಭೇ ಬಹಿಷ್ಕರಿಸಿ ಸಭೆಯಿಂದ ಹೊರನಡೆದರು.

ಗ್ಯಾರಂಟಿ ಬಗ್ಗೆ ಚರ್ಚೆ ನಡೆಸಲು ಮತ್ತೊಂದು ಸಭೆ ಮಾಡಿಕೊಳ್ಳಿ. ಮೂರು ತಿಂಗಳಿಗೆ ಮಾಡುವ ಸಭೆಯನ್ನು ಆರು ತಿಂಗಳಿಗೆ ಮಾಡುತ್ತೀರ. ಈ ಸಭೆಯಲ್ಲಿ ಮುಖ್ಯವಾಗಿ ರೈತರ ಹಲವಾರು ಸಮಸ್ಯೆಗಳಿವೆ. ಅದರ ಬಗ್ಗೆ ಚರ್ಚೆ ಯಾಗಬೇಕು. ಜನರು ಸಮಸ್ಯೆಯಿಂದ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ಶಾಸಕ ಸುರೇಶ್ ಗೌಡ ಸಚಿವರುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕೆಡಿಪಿ ಸಭೆಯಿಂದ ಹೊರನಡೆದರು.
ನಂತರ ಮಾಧ್ಯಮದವರೊಂಗೆ ಮಾತನಾಡಿದ ಶಾಸಕ ಸುರೇಶ್ ಗೌಡ, ಇದೊಂದು ಟೈಂ ಪಾಸ್ ಸಭೆ. ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಯನ್ನು ಆರು ತಿಂಗಳಿಗೆ ನಡೆಸುತ್ತಿದ್ದಾರೆ. ನಾವು ಆರು ತಿಂಗಳ ಹಿಂದಿನಿಂದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಹೇಮಾವತಿ ನೀರಿನ ಬಗ್ಗೆ, ಬೇಸಿಗೆ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ.ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಆದರೆ ಗಂಟೆಗಟ್ಟಲೆ ಗ್ಯಾರಂಟಿ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ.

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆಗೆ ಪ್ರತ್ಯೇಕ ಸಭೆ ಮಾಡಿಕೊಳ್ಳಲಿ. ಪ್ರಸ್ತುತ ಸಮಸ್ಯೆಗಳ ಚರ್ಚೆಗೆ ಸಭೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ರೇವಣ್ಣ ಅವರು ಯಾವೋದು ಕ್ಯಾಬಿನೆಟ್ ರ್ಯಾಂಕ್ ತಗೊಂಡು ಬಂದು ಮೀಟಿಂಗ್ ಮಾಡಿಕೊಂಡು ಕುಳಿತಿದ್ದಾರೆ. ಈತರ ಮೀಟಿಂಗ್ ಗಳು ಆಗಬಾರದು. ಸಚಿವ ಪರಮೇಶ್ವರ್ ಅವರು ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಿ. ಈ ರೀತಿಯ ಟೈಂ ಪಾಸ್ ಮಾಡೋ ಮೀಟಿಂಗ್ ಗೆ ಟಿ ಕಾಫಿಗೆ ಯಾಕೆ ಬರಬೇಕು. ಅದಕ್ಕೆ ಸಭೆ ಬಹಿಷ್ಕರಿಸಿ ಹೊರಬಂದಿದ್ದೇನೆ ಎಂದು ಹೇಳಿದರು.
