ವಚನಯಾನ | ಉದರ ವೈರಾಗ್ಯವುಳ್ಳ ನಕಲಿ ಫಕೀರರು

Date:

Advertisements

ದೇಶ ಸೇವೆಗಾಗಿಯೇ ಬ್ರಹ್ಮಚಾರಿಗಳನ್ನು ತಯಾರಿಸುತ್ತೇವೆ ಎನ್ನುವ ಸಂಘಟನೆಗಳು ಈ ಒಂದು ಶತಮಾನದ ಹಿಂದೆಯೇ ಈ ದೇಶದಲ್ಲಿ ಹುಟ್ಟಿಕೊಂಡಿವೆ. ಈ ಬಗೆಯ ಸಂಘಟನೆಗಳು ತಮ್ಮದೇಯಾದ ವಿದ್ಯಾರ್ಥಿ ಘಟಕಗಳನ್ನು ಸಹ ಹೊಂದಿವೆ. ಇಂತಹ ಸಂಘಟನೆಗಳಲ್ಲಿ ದೇಶಸೇವೆಗಾಗಿ ಬ್ರಹ್ಮಚಾರಿಗಳಾದವರಲ್ಲಿ ಬಹುತೇಕರು ಕಾಮವನ್ನು ನಿಯಂತ್ರಿಸಲಾಗದೆ ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವುದು ಸಹಜವಾಗಿ ನಡೆಯುತ್ತಿದೆ.

ಹೊಟ್ಟೆ ಹೊರೆಯಲು ಮನುಷ್ಯ ಯಾವ ವೇಷವಾದರೂ ಹಾಕಬಲ್ಲ ಎನ್ನುವುದಕ್ಕೆ ಭೂತ ಮತ್ತು ವರ್ತಮಾನದ ಅನೇಕ ಘಟನೆಗಳು ಸಾಕ್ಷಿಯಾಗಿವೆ. “ಉದರ ವೈರಾಗ್ಯವಿದು ನಮ್ಮ ಪದುಮನಾಭನಲಿ ಲೇಶ ಭುಕುತಿಯಿಲ್ಲ…” ಎನ್ನುವ ದಾಸವಾಣಿಯು ನಿರ್ದಿಷ್ಟವಾಗಿ ಈ ತರಹದ ನಕಲಿ ಫಕೀರರ ಕುರಿತೇ ಹೇಳಿದಂತಿದೆ. ಸನ್ಯಾಸ ಅಥವಾ ಬ್ರಹ್ಮಚರ್ಯ ಎನ್ನುವುದು ನಿಸರ್ಗಕ್ಕೆ ವಿರುದ್ಧವಾದದ್ದು. ನಿಸರ್ಗದತ್ತವಾಗಿ ಮನುಷ್ಯನಿಗೆ ಬಳುವಳಿಯಾಗಿ ಬಂದಿರುವ ಕಾಮ, ಕ್ರೋಧ, ಮದ, ಮತ್ಸರಾದಿ ಅರಿಷಡ್ವರ್ಗಗಳು ಹಿತಮಿತವಾಗಿ ಬಳಕೆಯಾಗಲೇಬೇಕು. ಇವನ್ನು ಬಲವಂತವಾಗಿ ದಮನಿಸಲು ಪ್ರಯತ್ನಿಸಿದಷ್ಟು ಕೆರಳಬಲ್ಲವು ಅಥವಾ ವಿಕಾರಗೊಳ್ಳಬಲ್ಲವು. ಕಾಮವನ್ನು ಹಿತಮಿತವಾಗಿ ಬಳಸುವುದು ಅಗತ್ಯ ಹಾಗೂ ಅನಿವಾರ್ಯ. ಆದರೆ ಬಲವಂತದಿಂದ ದಮನಿಸುವುದು ಸಲ್ಲ. ಅನೇಕ ಜನರು ತಾವು ಬ್ರಹ್ಮಚಾರಿಗಳು ಎಂದು ಹೇಳಿಕೊಳ್ಳುತ್ತಾರೆ, ಆದರೆ ವಾಸ್ತವವಾಗಿ ಹಾಗೆ ಬದುಕುವುದಿಲ್ಲ.

ಭಾರತದ ಒಬ್ಬ ಜನಪ್ರಿಯ ರಾಜಕಾರಣಿಯನ್ನು ಅವರ ಅನುಯಾಯಿಗಳು ಹಾಗೂ ಮಾಧ್ಯಮಗಳು ಅವರೊಬ್ಬ ದೊಡ್ಡ ಬ್ರಹ್ಮಚಾರಿ ಎಂದು ವೈಭವೀಕರಿಸಿದ್ದನ್ನು ನಾವು ಬಲ್ಲೆವು. ಆದರೆ, ಪಾಪ ಆ ರಾಜಕಾರಣಿ ಅಷ್ಟೇ ನಿಯತ್ತಿನಿಂದ ತಾನೊಬ್ಬ ಅವಿವಾಹಿತನೇ ಹೊರತು ಬ್ರಹ್ಮಚಾರಿಯಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದನ್ನು ಕೂಡ ನಾವು ನೋಡಿದ್ದೇವೆ. ರಾಷ್ಟ್ರೀಯತೆಯ ಹೆಸರಿನಲ್ಲಿ ಕಾರ್ಯ ನಿರ್ವಹಿಸುವ ಸಂಘಟನೆಯೊಂದರ ಪೂರ್ಣಾವಧಿ ಕಾರ್ಯಕರ್ತರು ಹಾಗೂ ಆ ಮೂಲಕ ರಾಜಕಾರಣಿಗಳಾದ ಅನೇಕರು ತಾವು ಮಹಾನ್ ಬ್ರಹ್ಮಚಾರಿಗಳು ಎಂದು ಹೇಳಿಕೊಳ್ಳುವುದನ್ನು ನಾವು ತಿಳಿದಿದ್ದೇವೆ. ಅನೇಕ ಮಠಾಧೀಶರು ತಾವು ಬ್ರಹ್ಮಚಾರಿಗಳು ಎಂದು ಹೇಳಿಕೊಳ್ಳುವುದನ್ನು ಸಹ ನಾವು ನೋಡುತ್ತಿದ್ದೇವೆ. ಇವರನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಜವಾಗಿಯೂ ಇವರು ಬ್ರಹ್ಮಚಾರಿಗಳೇ! ಎನ್ನುವ ಪ್ರಶ್ನೆ ಜನರಲ್ಲಿ ಮೂಡುವುದು ಸಹಜ.

Advertisements

ಆದರೆ, ಅವರಲ್ಲಿ ಬಹುತೇಕರಿಗೆ ತೋರಿಕೆಯ ಬ್ರಹ್ಮಚರ್ಯವಿದೆಯೇ ಹೊರತು ನೈಜ ಬ್ರಹ್ಮಚರ್ಯವಿಲ್ಲ ಎನ್ನುವುದು ಅನೇಕ ವೇಳೆ ಬಹಿರಂಗಗೊಂಡಿದ್ದಿದೆ. ಬ್ರಹ್ಮಚರ್ಯವೆನ್ನುವುದು ಇಂದ್ರಿಯಗಳನ್ನು ನಿಗ್ರಹಿಸುವ ಒಂದು ಬಗೆಯ ಕಠಿಣ ತಪಸ್ಸು ಇದ್ದ ಹಾಗೆ. ಅದನ್ನು ಪಾಲಿಸುವುದು ಸಾಮಾನ್ಯ ಮನುಷ್ಯರಿಗೆ ಅತ್ಯಂತ ಕಷ್ಟಸಾಧ್ಯ ಹಾಗೂ ಅದು ನಿಸರ್ಗಕ್ಕೆ ವಿರುದ್ಧವಾದದ್ದು ಕೂಡ. ತೋರಿಕೆಯ ಬ್ರಹ್ಮಚರ್ಯವಂತೂ ಇನ್ನೂ ಹೆಚ್ಚು ಅಪಾಯಕಾರಿಯಾದದ್ದು. ಅದನ್ನು ಚಿನ್ಮಯಜ್ಞಾನಿ ಚನ್ನಬಸವಣ್ಣನವರು “ಕಾಯ ಬ್ರಹ್ಮಚಾರಿಯಾದರೇನಯ್ಯಾ ಆಸೆ ಬ್ರಹ್ಮಚಾರಿಯಾಗದನಕ್ಕರ…? ಎಂದು ವಿಡಂಬಿಸಿದ್ದಾರೆ. ಈ ನಕಲಿ ಬ್ರಹ್ಮಚಾರಿಗಳು ಮನದೊಳಗಿನ ಆಸೆ ಹೋಗಲಿ, ಅವರು ತಮ್ಮ ಕಾಯವೂ ಬ್ರಹ್ಮಚಾರಿಯಾಗಿ ಉಳಿಸಿಕೊಳ್ಳುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕಿದೆ. ದೇಹವನ್ನು ಪರಿಶುದ್ಧ ಬ್ರಹ್ಮಚಾರಿಯಾಗಿ ಇಟ್ಟುಕೊಳ್ಳಲಾಗದವರು ಮನಸ್ಸನ್ನು ಬ್ರಹ್ಮಚಾರಿಯಾಗಿ ಇಟ್ಟುಕೊಳ್ಳುವುದು ಅಸಾಧ್ಯದ ಮಾತು. ಬ್ರಹ್ಮಚರ್ಯ ಸೃಷ್ಠಿ ನಿಯಮಕ್ಕೆ ಹೊರಗು ಎನ್ನುತ್ತಾರೆ ದಾರ್ಶನಿಕರಾದ ಶರಣರು. ಈ ಸೃಷ್ಠಿಯು ಮುಂದುವರೆಯಬೇಕಾದರೆ ಜೀವ ಜಗತ್ತು ವೃದ್ಧಿಸಲೇಬೇಕು. ಹಾಗಾಗದಿದ್ದರೆ ಈ ನಿಸರ್ಗವೇ ವಿನಾಶಹೊಂದುತ್ತದೆ. “ಕಷ್ಟಜೀವಿಗಳೆಲ್ಲ ನೆಟ್ಟಗೆ ಶಿವಜ್ಞಾನಿಗಳಾಡೆಗೆ ಮುಂದೆ ಭವದ ಬಳ್ಳಿಗೆ ಬೀಜವಿನ್ನೆಲ್ಲಿಯದೊ?” ಎಂದು ಪ್ರಶ್ನಿಸುವ ಮೂಲಕ ಶರಣ ಚನ್ನಬಸವಣ್ಣನವರು ಈ ಸಾಮಾನ್ಯ ಜನರು ಬ್ರಹ್ಮಚರ್ಯ ಪಾಲಿಸದರೆ ಮುಂದೆ ಈ ಜೀವ ಜಗತ್ತು ಉಳಿಯುವುದಾದರೂ ಹೇಗೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಮುಂದುವರೆದು ಚನ್ನಬಸವಣ್ಣನವರು ಕಷ್ಟಜೀವಿಗಳು ನೆಟ್ಟಗೆ ಶಿವಜ್ಞಾನಿಗಳಾಗುವುದು ಕರಕಷ್ಟ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಾರೆ.

ದೇಶ ಸೇವೆಗಾಗಿಯೇ ಬ್ರಹ್ಮಚಾರಿಗಳನ್ನು ತಯಾರಿಸುತ್ತೇವೆ ಎನ್ನುವ ಸಂಘಟನೆಗಳು ಈ ಒಂದು ಶತಮಾನದ ಹಿಂದೆಯೇ ಈ ದೇಶದಲ್ಲಿ ಹುಟ್ಟಿಕೊಂಡಿವೆ. ಈ ಬಗೆಯ ಸಂಘಟನೆಗಳು ತಮ್ಮದೆಯಾದ ವಿದ್ಯಾರ್ಥಿ ಘಟಕಗಳನ್ನು ಸಹ ಹೊಂದಿವೆ. ಇಂತಹ ಸಂಘಟನೆಗಳಲ್ಲಿ ದೇಶಸೇವೆಗಾಗಿ ಬ್ರಹ್ಮಚಾರಿಗಳಾದವರಲ್ಲಿ ಬಹುತೇಕರು ಕಾಮವನ್ನು ನಿಯಂತ್ರಿಸಲಾಗದೆ ಅನೇಕ ರೀತಿಯಲ್ಲಿ ಪರ ಸ್ತ್ರೀಯರೊಂದಿಗೆ ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವುದು ಸಹಜವಾಗಿ ನಡೆಯುತ್ತದೆ. ಇಂತಹ ಸಂಘಟನೆಗಳ ಅನೇಕ ಅಕ್ರಮ ಚಟುವಟಿಕೆಗಳಲ್ಲಿ ಸಲಿಂಗ ಕಾಮ ಕೂಡ ಒಂದು. ಈ ತರಹದ ಸಂಘಟನೆಗಳಲ್ಲಿ ದೇಶಭಕ್ತ ಬ್ರಹ್ಮಚಾರಿಗಳು ವಿದ್ಯಾರ್ಥಿ ಘಟಕದಲ್ಲಿರುವ ತರುಣ ವಿದ್ಯಾರ್ಥಿಗಳೊಂದಿಗೆ ಸಲಿಂಗ ಕಾಮದಲ್ಲಿ ತೊಡಗುವ ಸಂಗತಿಗಳೂ ಸರ್ವೇಸಾಮಾನ್ಯವಾಗಿದೆ. ತೋರಿಕೆಯ ಅಥವಾ ಬಲವಂತದ ಬ್ರಹ್ಮಚರ್ಯವು ಅತ್ಯಂತ ಹೆಚ್ಚು ಅಪಾಯಕಾರಿ ಎನ್ನುವ ಸಂಗತಿ ನಾವು ಮನಗಾಣಬೇಕಿದೆ.

ಇನ್ನು ಅನೇಕ ವೇಳೆ ಕೆಲವರು ಮದುವೆಯಾದ ಮೇಲೆ ಹೆಂಡತಿಯನ್ನು ತ್ಯಜಿಸಿ ಬ್ರಹ್ಮಚಾರಿಗಳಂತೆ ನಟಿಸುವುದನ್ನು ನೋಡುತ್ತೇವೆ. ಅಂತಹ ವ್ಯಕ್ತಿಗಳಂತೂ ಸಂಸಾರದ ತಾಪತ್ರಯಗಳು ಬೇಡ ಎನ್ನುವ ಬೇಜವಾಬ್ದಾರಿತನದಿಂದ ಹೆಂಡತಿಯನ್ನು ತ್ಯಜಿಸಿ ಬ್ರಹ್ಮಚಾರಿಗಳಂತೆ ಬದುಕುವ ನಾಟಕ ಮಾಡುತ್ತ ಅನೇಕ ಸ್ತ್ರೀಯರೊಂದಿಗೆ ಅಕ್ರಮ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ. ಸಂಸಾರವೆನ್ನುವುದೇ ಒಂದು ಬಹುದೊಡ್ಡ ತಪಸ್ಸು. ಅದನ್ನು ನಿಭಾಯಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಹೆಂಡತಿ ಹಾಗೂ ಸಂಸಾರವನ್ನು ತ್ಯಜಿಸಿ ಬ್ರಹ್ಮಚರ್ಯ ಪಾಲಿಸುತ್ತೇನೆ ಎನ್ನುವವರದ್ದಂತು ದೊಡ್ಡ ಬೂಟಾಟಿಕೆ ಎಂದೇ ಹೇಳಬೇಕಿದೆ.

ದೇಶಾದ್ಯಂತ ಅನೇಕ ಮಠಗಳು, ಆಶ್ರಮಗಳು, ಕುಟೀರಗಳು ತಲೆ ಎತ್ತಿವೆ. ಇವುಗಳಲ್ಲಿ ಅನೇಕ ಆಶ್ರಮಗಳು ಅಕ್ರಮ ಲೈಂಗಿಕ ಚಟುವಟಿಕೆಗಳ ಅಡ್ಡಗಳಾಗಿವೆ. ಕರ್ನಾಟಕದಲ್ಲಿ ಎಲ್ಲಾ ಸಮುದಾಯದ ಬಹುತೇಕ ಮಠಾಧೀಶರು ನೈಜ ಬ್ರಹ್ಮಚರ್ಯವನ್ನು ಪಾಲಿಸಲಾಗದೆ ವಿಫಲರಾಗಿರುವ ಅನೇಕ ಸಂಗತಿಗಳು ಸಾರ್ವಜನಿಕವಾಗಿ ಬೆಳಕಿಗೆ ಬಂದಿವೆ. ಉಚ್ಚವರ್ಗದ ಮಠಾಧೀಶನೊಬ್ಬ ತನ್ನ ಮಠಕ್ಕೆ ಭಕ್ತಿ ಮತ್ತು ಶಾಂತಿಯನ್ನು ಅರಸಿ ಬಂದ ವಿವಾಹಿತ ಮಹಿಳೆಯೊಬ್ಬಳನ್ನು ತನ್ನೊಂದಿಗೆ ಕೂಡಿದರೆ ಸಾಕ್ಷಾತ್ ಶ್ರೀರಾಮನೊಂದಿಗೆ ಕೂಡಿದಂತೆ ಎಂದು ನಂಬಿಸಿ ಒಪ್ಪಿತ ಕಾಮಕೇಳಿ ನಡೆಸಿದ ಘಟನೆಗಳೂ ಬಹಿರಂಗಗೊಂಡಿವೆ. ಈ ಬಗೆಯ ಪ್ರಕರಣಗಳಿಗೆ ನ್ಯಾಯಾಲಯದಲ್ಲಿಯೂ ಸಹ ಪರಿಹಾರ ಸಿಕ್ಕಿಲ್ಲ. ಈ ಮಠಾಧೀಶರು ನೈತಿಕ ಭಯವನ್ನೂ ಸಹ ಹೊಂದಿಲ್ಲ. ಇವು ಕೇವಲ ಬೆಳಕಿಗೆ ಬಂದ ಘಟನೆಗಳು ಮಾತ್ರ. ಹೊರಗೆ ಬರದೆ ಇರುವ ಇನ್ನೂ ಅಸಂಖ್ಯಾತ ಘಟನೆಗಳು ಇರುವ ಸಾಧ್ಯತೆಗಳಿವೆ. ದೇಶಸೇವೆಯ ಹೆಸರಿನಲ್ಲಿ ಬ್ರಹ್ಮಚಾರಿಗಳಂತೆ ನಟಿಸುವ ಅನೇಕ ರಾಜಕೀಯ ಪುಢಾರಿಗಳು ಕದ್ದುಮುಚ್ಚಿ ಒಂದಕ್ಕಿಂತ ಹೆಚ್ಚು ಜನ ಸ್ತ್ರೀಯರೊಂದಿಗೆ ಹಾಗೂ ಪುರುಷರೊಂದಿಗೆ ಸಲಿಂಗ ಕಾಮದಲ್ಲಿ ತೊಡಗಿರುವ ಘಟನೆಗಳು ಕಡಿಮೆ ಏನಿಲ್ಲ. ವರ್ತಮಾನದ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ನಕಲಿ ಫಕೀರರ ಹಾವಳಿ ಹೆಚ್ಚಿದ್ದು ನಾವೆಲ್ಲ ಗಮನಿಸುತ್ತಿದ್ದೇವೆ. ಈ ನಕಲಿ ಫಕೀರರು ದೇಶಕ್ಕಾಗಿ ಬ್ರಹ್ಮಚಾರಿಗಳಾಗಿ ಉಳಿದಿದ್ದೇವೆ ಎಂದು ಹೇಳಿಕೊಳ್ಳುವುದನ್ನೂ ನೋಡುತ್ತಿದ್ದೇವೆ. ಹಾಗೆ ಹೇಳಿಕೊಳ್ಳುವ ರಾಜಕಾರಣಿಗಳು ಅಥವಾ ಧಾರ್ಮಿಕ ಮುಖಂಡರು ಲೌಕಿಕದ ಯಾವ ಸಾಮಾನ್ಯ ವಾಂಛೆಗಳಿಂದಲೂ ಮುಕ್ತರಾಗಿಲ್ಲ. ಇಂತವರು ಎಲ್ಲ ಕಾಲದಲ್ಲೂ ಇರಲಿಕ್ಕೆ ಸಾಕು. ಆ ದೃಷ್ಟಿಯಿಂದಲೇ ಶರಣರು ಅಂತವರನ್ನು ಕುರಿತು ವಿಡಂಬನೆಯ ವಚನಗಳನ್ನು ಬರೆದಿದ್ದಾರೆ. ಶರಣ ದೇಶಿಕೇಂದ್ರ ಸಂಗನಬಸವಯ್ಯನವರ ಒಂದು ವಚನ ಇಂದಿನ ಮಠಾಧೀಶರು, ಬಾಬಾಗಳು ಹಾಗೂ ಪುಢಾರಿಗಳ ಜೀವನದ ಘಟನೆಗಳಿಗೆ ಕನ್ನಡಿ ಹಿಡಿದಂತಿದೆ:

“ಹೆಂಡರ ಮಕ್ಕಳ ಸಲಹಲಾರದೆ
ಒಂದು ನೆವದಿಂದೆ ವೈರಾಗ್ಯ ತಲೆಗೇರಿ
ಲೋಚು ಬೋಳು ದಿಗಂಬರ ವೇಷವ ತಾಳಿˌ
ದಿಗ್ದೇಶವ ತಿರುಗುತ್ತ ತಿನಿಸು ಮೈಯುಂಡು,
ಆಸೆ ವಿಷಯವಂಕುರಿಸಿˌ ಕೊಡುವ
ಅಳಿಭಕ್ತರನರಸುತ್ತ, ತಲೆಹುಳಿತ ಶುನಕದಂತೆ ಮನೆಮನೆಯ ಶೋಧಿಸುತ ಕನಕ ಕಾಮಿನಿ
ವಸ್ತ್ರಕ್ಕತಿಮೋಹವೆರಸಿ, ಉಗಿದುಚ್ಚಿಷ್ಟದೊಳು
ಬಿದ್ದು ಹೊರಳ್ಯಾಡುವ ಸೂಕರಾಳಿಗೆ
ಇನ್ನೆತ್ತಣ ಒಡೆತನವಯ್ಯಾ, ಗುರುನಿರಂಜನ ಚನ್ನಬಸವಲಿಂಗಾ”
~ ಶರಣ ದೇಶಿಕೇಂದ್ರ ಸಂಗನಬಸವಯ್ಯ.

ಭಾವಾರ್ಥ : ಮದುವೆಯಾಗಿ ಹೆಂಡತಿ ಹಾಗೂ ಮಕ್ಕಳನ್ನು ಸಲಹುವ ಶಕ್ತಿ ಇಲ್ಲದ ದುರ್ಬಲರು, ಮೈಗಳ್ಳರು/ಸೋಮಾರಿಗಳು ಅಥವಾ ಬೇಜವಾಬ್ದಾರಿ ವ್ಯಕ್ತಿಗಳು ಕುಟುಂಬವನ್ನು ತ್ಯಜಿಸಿ ದೇಶಭಕ್ತಿಯ ನೆಪದಲ್ಲೊ ಅಥವಾ ಧರ್ಮೋದ್ಧಾರದ ನೆಪದಲ್ಲೊ ನಕಲಿ ಫಕೀರರ ವೇಷ ಹಾಕಿ ತಿರುಗುತ್ತಾರೆ. ಅಂತಹ ನಕಲಿ ಫಕೀರರು ಹಲವು ದೇಶಗಳಿಗೆ ಪಿರಿಪಿರಿ ತಿರುಗುವ ಹವ್ಯಾಸ ಹೊಂದಿರುತ್ತಾರೆ. ತಿರುಗುವ ಚಟಕ್ಕೀಡಾಗಿ ಅಲ್ಲಿ ಇಲ್ಲಿ ಸಿಗುವ ಅಣಬೆ ಮುಂತಾದ ದುಬಾರಿ ಪದಾರ್ಥಗಳನ್ನು ತಿನ್ನುವ ಅಭ್ಯಾಸ ಮೈಯುಂಡು ಲೌಕಿಕದ ಆಸೆ, ವಿಷಯಾಸಕ್ತಿಗಳನ್ನು ಬೆಳೆಸಿಕೊಳ್ಳುತ್ತಾರೆ. ಒಮ್ಮೆ ದುಡಿಯದೆ ತಿನ್ನುತ್ತ ತಿರುಗುವ ಚಟಕ್ಕೀಡಾದರೆ ಸಾಕು ಪುಕ್ಕಟ್ಟೆ ಎಲ್ಲವನ್ನು ಕೊಡುವ ಭಕ್ತರನ್ನು ಹುಡುಕುತ್ತ, ತಲೆ ಕೆಟ್ಟ ನಾಯಿಯಂತೆ ಅಲ್ಲಲ್ಲಿ ತಿಂಡಿಯನ್ನು ಅರಸುತ್ತ, ತದನಂತರ ಕ್ರಮೇಣ ದುಬಾರಿ ಬಟ್ಟೆಗಳುಡುವ, ಚಿನ್ನದಾಭರಣ ತೊಡುವ, ಹೆಣ್ಣಿನ ಸಹವಾಸ ಮಾಡುವ ಸ್ಥಿತಿ ತಲಪುತ್ತಾರೆ. ಈ ರೀತಿಯಾಗಿ ಹೊಟ್ಟೆ ಹೊರೆಯಲು ಫಕೀರನ ವೇಷ ಧರಿಸಿದವರು ಅನ್ಯರು ಉಗುಳಿದ ಎಂಜಲೊಳಗೆ ಬಿದ್ದು ಹೊರಳಾಡುವ ಹಂದಿಗಳಿದ್ದಂತೆ. ಅಂತವರು ಎಂದಿಗೂ ಒಡೆಯರು ಅಥವಾ ಮಾದರಿ ನಾಯಕರಾಗಲಾರರು ಎನ್ನುತ್ತಾನೆ ಶರಣ ದೇಶಿಕೇಂದ್ರ ಸಂಗನಬಸವಯ್ಯ.

ಟಿಪ್ಪಣಿ : ನಕಲಿ ಫಕೀರರು ಎಲ್ಲಾ ಕಾಲಕ್ಕೂ ಈ ಸಮಾಜಕ್ಕೆ ಹೊರೆಯಾಗಿ ಬದುಕಿದ್ದಾರೆ. ಒಂದು ಮನೆಯ ಯಜಮಾನಿಕೆˌ ಒಂದು ಸಂಸ್ಥೆಯ ಅಥವಾ ಒಂದು ಮಠದ ಮುಖ್ಯಸ್ಥ ಅಥವಾ ಒಂದು ದೇಶದ ನಾಯಕನಾಗುವವನಿಗೆ ಯಾವೆಲ್ಲ ಲಕ್ಷಣಗಳು ಇರಬಾರದು ಎನ್ನುವುದನ್ನು ಶರಣ ದೇಶಿಕೇಂದ್ರ ಸಂಗನಬಸವಯ್ಯನವರು ಬಹಳ ಮಾರ್ಮಿಕವಾಗಿ ತಮ್ಮ ಮೇಲಿನ ವಚನದಲ್ಲಿ ವಿವರಿಸಿದ್ದಾರೆ. ಮನುಷ್ಯಸಹಜ ಗುಣಾವಗುಣಗಳು ಹಾಗೂ ವಿಷಯಾಸಕ್ತಿಗಳುಳ್ಳವರು ನಕಲಿ ಫಕೀರನ ವೇಷದಲ್ಲಿ ಒಂದು ಧಾರ್ಮಿಕ ಸಂಸ್ಥೆಯ ಮುಖಂಡ ಅಥವಾ ಒಂದು ದೇಶದ ನಾಯಕರಾಗಲು ಅನರ್ಹರು. ಇಂದಿನ ಬಹುತೇಕ ಮಠಾಧೀಶರು ಮತ್ತು ರಾಜಕಾರಣಿಗಳು ಯಾವ ಯಾವುದೊ ಸಂಘ-ಸಂಸ್ಥೆಗಳನ್ನು ಸೇರಿ ದೇಶಭಕ್ತಿಯ ಹೆಸರಿನಲ್ಲಿ ಬ್ರಹ್ಮಚಾರಿಗಳಾಗುತ್ತಾರೆ. ಹಾಗೆ ಒತ್ತಾಯದ /ಬಲವಂತದ/ ತೋರಿಕೆಯ ಅಥವಾ ಢಾಂಬಿಕ ಬ್ರಹ್ಮಚಾರಿಗಳಾದವರು ದೇಶದ ಅಥವಾ ಮಠಗಳ ಮುಖ್ಯಸ್ಥರಾಗಲು ಅರ್ಹರಲ್ಲ ಎನ್ನುವುದೆ ವಚನದ ಭಾವಾರ್ಥ. ಶರಣರು ಸರ್ವಕಾಲಿಕವಾದ ಸತ್ಯವನ್ನೆ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ವಚನಗಳು ಇಂದಿನ ಕಾಲಕ್ಕೂ ನಿಖರವಾಗಿ ಅನ್ವಯವಾಗುತ್ತವೆ.

ಇದನ್ನೂ ಓದಿ ವಚನಯಾನ | ಕಲ್ಲು ದೇವರ ಪೂಜಿಸುವ ಕತ್ತೆಗಳು

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

4 COMMENTS

  1. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಮ್ಮ ಹಿರಿಯರು ಮನೆ ಗೆದ್ದು ಮಾರ ಗೆಲ್ಲು ಅಂತಾ ಹೇಳಿದ್ದು ಯಾವನು ಸಂಸಾರದ ಕಷ್ಟಗಳನ್ನು ನಿಬಾಯಿಸಬಲ್ಲ ಅವನು ದೇಶದ ಸಂಕಷ್ಟಗಳನ್ನು ನಿವಾರಿಸಬಲ್ಲರು

  2. ಪ್ರಗತಿಪರ ಎಂದು ತನ್ನನ್ನು‌ ಬಿಂಬಿಸಿಕೊಳ್ಳುತ್ತಿರುವ ಲೇಖಕರು ಅಸತ್ಯದ ಪ್ರಪಾತದಲ್ಲಿ ಬಿದ್ದಿದ್ದಾರೆ. ತಾವು ಕಪ್ಪು ಕನ್ನಡಕ‌ ಧರಿಸಿ ಜಗತ್ತೆಲ್ಲ ಕತ್ತಲೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಬಾಯಿಗೆ ಬಂದ ಹಾಗೆ ಬರೆದು ಸಾಧನೆ ಮಾಡಿರುವ ಭ್ರಮೆಯಲ್ಲಿದ್ದಾರೆ. ಈ‌ ಹೀನ ಮನಃಸ್ಥಿತಿಗೆ ಧಿಕ್ಕಾರವಿರಲಿ. ರಾಮಚಂದ್ರಾಪುರ ಗುರುಗಳ‌ ಶ್ರೇಷ್ಠ ವ್ಯಕ್ತಿತ್ವವನ್ನು ಕಾಣಲಾಗದೆ, ಸತ್ಯವನ್ನು ಕಾಣಲಾಗದೆ, ಕೇವಲ ಒಂದು ಕಡೆಯಿಂದ ಮಾತ್ರ ನೋಡಿ ಅಸತ್ಯ ಬರೆಯುತ್ತಿರುವುದು ಖಂಡನಾರ್ಹ. ದಯವಿಟ್ಟು ಜವಾಬ್ದಾರಿಯುತವಾಗಿರಿ ಪಾಟೀಲರೇ.

    • Sir, this guy J. S. Patil has complete hatred towards Sanatanis which you can observe from his YouTube and other posts. When we post Comments showing his falsehood he deletes our Comments. So, I you can find only Comments praising him. People like J. S. Patil are dangerous to any community.

  3. ಅಯ್ಯಾ ಶರಣ ಪಾಟೀಲ, ಬದನವಾಳು ಮತ್ತು ದೇಶದ ಹಲವು ಸ್ಥಳಗಳಲ್ಲಿ ಅಮಾಯಕ ದಲಿತರನ್ನು ಕೊಂದಿದ್ದು ಲಿಂಗಾಯತರು ತಾನೇ? ನ್ಯಾಯಾಲಯಗಳು ನಿಮಗೆ ಶಿಕ್ಷೆಯನ್ನು ಸಹ ಕೊಟ್ಟಿದೆ. ಮುರುಘಾ ಮಠದ ಮತ್ತು ಕೆಲವು ಲಿಂಗಾಯತ ಮಠದ ಕಾಮಿ ಸ್ವಾಮಿಗಳು ಜೈಲಿಗೆ ಹೋಗಿರುವುದು ನಿನಗೆ ಗೊತ್ತಿದೆ ತಾನೇ? ಮೊದಲು ಬಸವಣ್ಣನವರ ​ ಸರಿಯಾಗಿ ಅರ್ಥ ಮಾಡಿಕೊ. ನಿನ್ನ ಎಲ್ಲಾ YouTube videoಗಳು ಬರಿ ತಪ್ಪು, ಸುಳ್ಳು ಮಾಹಿತಿಗಳನ್ನು ಕೊಟ್ಟು ದ್ವೇಷ, ಆಕ್ರೋಶದಿಂದ ತುಂಬಿವೆ. ಮೊದಲು ಮಾನವನಾಗು. ಸುಳ್ಳು ಹೇಳುವುದನ್ನು ಬಿಡು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X