ಚಿತ್ರದುರ್ಗದ ಜಾನಪದ ಜಾಗೃತಿ ಪರಿಷತ್ 12ನೇ ವರ್ಷದ ಸಂಭ್ರಮಾಚರಣೆಯಲ್ಲಿ ಸಾಧನೆಗೈದ ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ದಿನಾಂಕ 24-02-2025 ರಂದು ಜಾನಪದ ಜಾಗೃತಿ ಪರಿಷತ್ ಚಿತ್ರದುರ್ಗ ಆಯೋಜಿಸಿದ್ದ 12 ವರ್ಷದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಾಂಗ್ರೆಸ್ ವಿಭಾಗದ ಮುಖಂಡ ಸನ್ಮಾನ್ಯ ಶ್ರೀ ಆರ್ ಕೆ ಸರ್ದಾರ್ ರವರಿಗೆ ರಾಜ್ಯ ಕಾಯಕ ಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಅಲ್ಪಸಂಖ್ಯಾತರ ನಾಯಕರಾದ ಆರ್ ಕೆ ಸರ್ದಾರ್ ಮಾತನಾಡಿ, “ನಮ್ಮ ಕನ್ನಡ ಭಾಷೆ ಅದ್ಭುತವಾದದು. ಅತ್ಯಂತ ಸರಳ, ಸಿಹಿ ಭಾಷೆಯಾಗಿದೆ. ಎಲ್ಲಾ ಭಾಷೆಗಿಂತ ಸುಂದರ ಭಾಷೆ. ಜಾನಪದ ಎಂದರೆ ನಾವು ಆಡುವ ಭಾಷಾ ಶೈಲಿ, ಭಾಷೆಯಲ್ಲಿ ಇರುವ ಮಾನವೀಯತೆ ಮತ್ತು ನಮ್ಮ ಜೀವನದ ಕಥೆಯನ್ನು ತಿಳಿಸುವುದೇ ಜಾನಪದ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮದುವೆ ಸಂಭ್ರಮ; ಹತ್ತಕ್ಕೂ ಹೆಚ್ಚು ಮನೆಗಳ ಸರಣಿ ಕಳ್ಳತನ
ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಅಬ್ದುಲ್ ರೆಹಮಾನ್, ಹಿರಿಯ ವಕೀಲ ಬಿಕೆ. ರಹಮತುಲ್ಲಾ ಹಾಗೂ ಮೊಹಮದ್ ಯಾಸಿನ್ ಅವರುಗಳಿಗೂ ರಾಜ್ಯ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ಪ್ಯಾರೇಜಾನ್, ಲೇಖಕ ಆನಂದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ರವಿ, ಸಂಗೀತ ಕಲಾವಿದ ಗೌಸ್, ಹಾಗೂ ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.
