ಹಾಸನ ಜಿಲ್ಲೆಯಲ್ಲಿ ಕಾಡಾನೆ-ಮಾನವನ ನಡುವಿನ ಸಂಘರ್ಷ ಎಡಬಿಡದೆ ನಡೆಯುತ್ತಿದ್ದು, ಆನೆ ದಾಳಿಗೆ ಯುವಕ ಬಲಿಯಾಗಿರುವ ಘಟನೆ ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ನಡೆದಿದೆ.
ಯುವಕ ಅನಿಲ್(28) ಆನೆ ತುಳಿತದಿಂದ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಗುಜ್ಜನಹಳ್ಳಿ ಗ್ರಾಮದ ಈತ, ಬ್ಯಾದನೆ ಗ್ರಾಮದ ಅಣ್ಣಮಲೈ ಎಸ್ಟೇಟ್‌ಗೆ ಕೆಲಸಕ್ಕೆಂದು ಬಂದಿದ್ದು, ಕಾಫಿ ತೋಟದ ಕೂಲಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಏಕಾಏಕಿ ನುಗ್ಗಿ ಬಂದು ಮೇಲೆರಗಿದ ಕಾಡಾನೆ ತನ್ನ ಸೊಂಡಿಲಿನಿಂದ ಎತ್ತಿ ಬಿಸಾಕಿ ತುಳಿದು ಸಾಯಿಸಿದೆ.

ಸೋಮವಾರ ಬೆಳಿಗ್ಗೆ ಆನೆ ಇರುವಿಕೆಯ ಬಗ್ಗೆ ಆನೆ ಕಾರ್ಯಪಡೆ ಸಾರ್ವಜನಿಕರಿಗೆ ಮಾಹಿತಿ ನೀಡಿತ್ತು.
ಇದನ್ನೂ ಓದಿದ್ದೀರಾ?ಹಾಸನ ವಿಶ್ವವಿದ್ಯಾಲಯದ ಉಳಿವಿಗೆ ಎಸ್‌ಎಫ್‌ಐ, ಡಿವೈಎಫ್‌ಐ ಹೋರಾಟ
ಯುವಕನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಸ್ಥಳ ಪರಿಶೀಲಿಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
