ಗ್ರಾಹಕರೇ ನಕಲಿ ಬಿಲ್‌ ಬಗ್ಗೆ ಎಚ್ಚರವಿರಲಿ ಎಂದ ಬೆಸ್ಕಾಂ

Date:

Advertisements
  • ಶೇ. 50ರಷ್ಟು ಹೆಚ್ಚು ವಿದ್ಯುತ್‌ ಶುಲ್ಕವನ್ನು ಗ್ರಾಹಕರಿಂದ ಸಂಗ್ರಹಿಸುತ್ತಿದೆ ಎಂಬ ಸುದ್ದಿ ಸುಳ್ಳು
  • ಸಾರ್ವಜನಿಕರಲ್ಲಿ ವಿದ್ಯುತ್‌ ಸರಬರಾಜು ಕಂಪನಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವ ವ್ಯವಸ್ಥಿತ ಹುನ್ನಾರ

ʼಬೆಸ್ಕಾಂ ವಿದ್ಯುತ್‌ ಬಿಲ್‌ ತುಲನೆʼ ಹೆಸರಿನಲ್ಲಿ ನಕಲಿ ಬಿಲ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗ್ರಾಹಕರು ಈ ಬಗ್ಗೆ ಎಚ್ಚರವಹಿಸಿ ಎಂದು ಬೆಸ್ಕಾಂ ಪ್ರಕಟಣೆ ಮೂಲಕ ತಿಳಿಸಿದೆ.

ಮೇ 2023 ಮತ್ತು ಜೂನ್‌ 2023ರ ಗೃಹ ಬಳಕೆಯ ವಿದ್ಯುತ್‌ ಬಿಲ್‌ ಗಳನ್ನು ತುಲನೆ ಮಾಡಿ, ಜೂನ್‌ ತಿಂಗಳಲ್ಲಿ ಬೆಸ್ಕಾಂ ಶೇ.50 ರಷ್ಟು ಹೆಚ್ಚು ವಿದ್ಯುತ್‌ ಶುಲ್ಕವನ್ನು ಗ್ರಾಹಕರಿಂದ ಸಂಗ್ರಹಿಸುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಹೇಳಿದೆ.

ಈ ಬಿಲ್‌ನಲ್ಲಿ ಗ್ರಾಹಕನ ಆರ್.‌ಆರ್.‌ನಂಬರ್‌ ಆಗಲಿ ಅಥವಾ ಖಾತೆ ಸಂಖ್ಯೆ (ಅಕೌಂಟ್‌ ಐಡಿ) ಇಲ್ಲ. ಹಾಗೆಯೇ ಗ್ರಾಹಕರ ಹೆಸರು ಮತ್ತು ವಿಳಾಸ ಕೂಡ ಇಲ್ಲ. ಆದರೆ, ದುಪ್ಪಟ್ಟು ಬಿಲ್‌ ನಮೂದಿಸಿ ಸಾರ್ವಜನಿಕರಲ್ಲಿ ವಿದ್ಯುತ್‌ ಸರಬರಾಜು ಕಂಪನಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ.

Advertisements

ನಕಲಿ ಬಿಲ್ಬೆಸ್ಕಾಂ ಫೇಕ್ ಬಿಲ್

ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ನಕಲಿ ಬಿಲ್‌ನಲ್ಲಿ ಮೇ ತಿಂಗಳಲ್ಲಿ ನಮೂದಿಸಿರುವ ವಿದ್ಯುತ್‌ ದರದಲ್ಲಿ ಇಂಧನ ಹೊಂದಾಣಿಕೆ ವೆಚ್ಚವನ್ನು (FAC) ಪ್ರತಿ ಯೂನಿಟ್‌ಗೆ 55 ಪೈಸೆಯಷ್ಟು ಬೆಸ್ಕಾಂ ವಿಧಿಸಿತ್ತು ಎಂದು ಹೇಳಲಾಗಿದೆ. ಆದರೆ, ಮೇ ತಿಂಗಳ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ ಕೇವಲ 6 ಪೈಸೆ ಮಾತ್ರ ಇಂಧನ ಹೊಂದಾಣಿಕೆ ವೆಚ್ಚವನ್ನು ಬೆಸ್ಕಾಂ ತನ್ನ ಗ್ರಾಹಕರಿಂದ ಸಂಗ್ರಹಿಸಿತ್ತು ಎಂದು ತಿಳಿಸಿದೆ.

ಹಾಗೆಯೆ ಜೂನ್‌ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಇಂಧನ ಹೊಂದಾಣಿಕೆ ವೆಚ್ಚವನ್ನು ಪ್ರತಿ ಯೂನಿಟ್‌ ಗೆ 2.64 ಪೈಸೆಯಷ್ಟು ಬೆಸ್ಕಾಂ ವಿಧಿಸಿದೆ ಎಂದು ನಕಲಿ ಬಿಲ್‌ ನಲ್ಲಿ ನಮೂದಿಸಲಾಗಿದೆ. ಆದರೆ, ಜೂನ್‌ ತಿಂಗಳ ಬಿಲ್‌ನಲ್ಲಿ ಇಂಧನ ಹೊಂದಾಣಿಕೆ ವೆಚ್ಚ ಪ್ರತಿ ಯೂನಿಟ್‌ಗೆ 59 ಪೈಸೆಯಷ್ಟು ಹಿಂಬಾಕಿಯಾಗಿ ಬೆಸ್ಕಾಂ ಸಂಗ್ರಹಿಸುತ್ತಿದೆ ಎಂದಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ: ತುಷಾರ್ ಗಿರಿನಾಥ್

ವಿದ್ಯುತ್ ಬಿಲ್‌ ನಲ್ಲಿ ಗೊಂದಲ ಇದ್ದರೆ ಸಂಬಂಧಪಟ್ಟ ಉಪ ವಿಭಾಗ ಕಚೇರಿಗೆ ಹೋಗಿ ಪರಿಹರಿಸಿಕೊಳ್ಳಿ, ಈ ನಕಲಿ ಬಿಲ್‌ ಅನ್ನು ಯಾರೂ ಪರಿಗಣಿಸಬೇಡಿ ಎಂದು ಬೆಸ್ಕಾಂ ತನ್ನ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.

ಬೆಸ್ಕಾಂನ ಅಧಿಕೃತ ಬಿಲ್ಬೆಸ್ಕಾಂ ಬಿಲ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಿರುವ ನಕಲಿ ಬಿಲ್‌ನಲ್ಲಿ ಮೇ ತಿಂಗಳ ವಿದ್ಯುತ್‌ ಶುಲ್ಕ, 131 ಯೂನಿಟ್‌ ವಿದ್ಯುತ್‌ ಬಳಕೆಗೆ ₹1162 ಎಂದು ನಮೂದಿಸಲಾಗಿದೆ. ಅದೇ ರೀತಿ ಜೂನ್‌ ತಿಂಗಳ ವಿದ್ಯುತ್‌ ಶುಲ್ಕದಲ್ಲಿ 163 ಯೂನಿಟ್‌ ವಿದ್ಯುತ್‌ ಬಳಕೆಗೆ ₹2166 ಎಂದು ನಮೂದಿಸಲಾಗಿದೆ ಇದು ಸಂಪೂರ್ಣ ಸುಳ್ಳು ಎಂದು ಬೆಸ್ಕಾಂ ತಿಳಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X