ಜಗದ್ವಿಖ್ಯಾತ ಹಂಪಿ ಉತ್ಸವ ಮಹಿಳಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಿಕ್ಷಕಿ, ಕವಿಯತ್ರಿ ನೀಲಮ್ಮ ಬಿ. ಮಲ್ಲೆ ಕೆಂಭಾವಿ ಅವರು ಆಯ್ಕೆಯಾಗಿದ್ದಾರೆ.
ಫೆಬ್ರವರಿ 28 ರಂದು ಹಂಪಿ ಉತ್ಸವದಲಿ ಮಹಿಳಾ ಪ್ರತಿನಿಧಿಗಳಾಗಿ ಕವಿಗೋಷ್ಠಿಗೆ ಆಹ್ವಾನ ನೀಡಲಾಗಿದೆ ಎಂದು ವಿಜಯನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖಕಿ ನೀಲಮ್ಮ ಬಿ. ಮಲ್ಲೆ ಅವರು ಆಯ್ಕೆಯಾಗಿದಕ್ಕೆ ಅವರ ಅಭಿಮಾನಿಗಳು, ಸಾಹಿತ್ಯದ ಬಳಗ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಹರ್ಷವ್ಯಕ್ತಪಡಿಸಿದರು.