ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ಫೆಬ್ರವರಿ 22-23 ರಂದು ದಾವಣಗೆರೆಯ ತಾಜ್ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶವು ಯಶಸ್ವಿಯಾಗಿ ಸಮಾರೋಪಗೊಂಡಿತು.
ಈ ಸಮಾವೇಶದಲ್ಲಿ ಉದ್ಯಮಶೀಲತೆ, ಸಾಮಾಜಿಕ ಜಾಲತಾಣಗಳ ಪ್ರಭಾವ, ಪರಿಸರ ಸಂರಕ್ಷಣೆ, ನಾಯಕತ್ವ ತರಬೇತಿ ಸೇರಿದಂತೆ ಹಲವಾರು ಕಾರ್ಯಾಗಾರಗಳು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಜಾತಿ ಕ್ರೌರ್ಯದಿಂದ ಪೀಡಿತ ಸಮುದಾಯದ ಯಥಾರ್ಥವನ್ನು ಕಣ್ತುಂಬಿಕೊಳ್ಳುವಂತಾದ ಮೂಗೇಟು ಕನ್ನಡ ನಾಟಕ ಪ್ರದರ್ಶನವಾಯಿತು.
ಈ ಎರಡು ದಿನಗಳ ಅವಧಿಯಲ್ಲಿ ನಡೆದ ಯೂತ್ ಎಕ್ಸ್ಪೋ ವಿಶೇಷ ಆಕರ್ಷಣೆಯಾಗಿತ್ತು. ದೆಹಲಿಯಿಂದ ಆಗಮಿಸಿದ್ದ ಖ್ಯಾತ ಗಾಯಕ ಹೈದರ್ ಸೈಫ್ ಅವರು ಮನಮುಟ್ಟುವ ಗಾಯನ ಕಾರ್ಯಕ್ರಮ ನೀಡಿದರು.
ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಯುವ ಕಾರ್ಯಕರ್ತರಿಗೆ ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷರಾದ ಜನಾಬ್ ಎಸ್. ಅಮೀನುಲ್ ಹಸನ್, ಜೆಐಎಚ್ ರಾಜ್ಯಾಧ್ಯಕ್ಷ ಡಾ. ಸಾದ್ ಬೆಳಗಾಮಿ, ಜೆಐಎಚ್ ರಾಜ್ಯ ಕಾರ್ಯದರ್ಶಿ ಡಾ. ತಾಹಾ ಮತೀನ್, ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ಅವರು ಯುವಕರಿಗೆ ಮಾರ್ಗದರ್ಶನ ನೀಡಿದರು.
ಇದನ್ನು ಓದಿದ್ದೀರಾ? ಫೆ.26ರಂದು ರಾಜಧಾನಿಯಲ್ಲಿ ಸಂಭ್ರಮದಿಂದ ನಡೆಯಲಿದೆ ಬೆಂಗಳೂರು ಬ್ಯಾರಿಗಳ ‘ಬ್ಯಾರಿ ಕೂಟ’
ಸಮಾವೇಶದಲ್ಲಿ ಹಲವು ವಿಷಯಗಳ ಮೇಲೆ ಚರ್ಚೆಗಳು ನಡೆಯಿತು ಹಾಗೂ ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.





