ರಾಜ್ಯದಲ್ಲಿ 9 ಔಷಧಗಳನ್ನು ನಿಷೇಧಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ. ಅಲ್ಲದೆ, ಆ ಔಷಧಗಳನ್ನು ದೇಶಾದ್ಯಂತ ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ. ಜೊತೆಗೆ, ಮಾರಾಟಕ್ಕಾಗಿ ವಿತರಿಸಲಾಗುವ ಔಷಧಗಳನ್ನು ಕೇಂದ್ರ ಪರೀಕ್ಷಿಸಿದ್ದರೂ ಸಹ ರಾಜ್ಯದಲ್ಲಿಯೂ ಮತ್ತೆ ಪರೀಕ್ಷೆ ನಡೆಸಿಯೇ ಮಾರಾಟಕ್ಕೆ ಅನುಮತಿಸುವುದಾಗಿಯೂ ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇತ್ತೀಚೆಗೆ, ಆರೋಗ್ಯ ಇಲಾಖೆ 9 ಔಷಧಗಳನ್ನು ರಾಜ್ಯದ ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷೆಯಲ್ಲಿ ಆ ಔಷಧಗಳು ಅಸುರಕ್ಷಿತವಾಗಿವೆ ಮತ್ತು ಕಳಪೆ ಗುಣಮಟ್ಟ ಹೊಂದಿವೆ ಎಂಬುದು ಸಾಬೀತಾಗಿತ್ತು. ಅವುಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, ದೇಶಾದ್ಯಂತ ಅವುಗಳ ನಿಷೇಧಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರಿಗೆ ದಿನೇಶ್ ಗುಂಡೂರಾವ್ ಪತ್ರವನ್ನೂ ಬರೆದಿದ್ದಾರೆ.
ಇನ್ನು, ಔಷಧಗಳ ಗುಣಮಟ್ಟ ಪರೀಕ್ಷೆಗೆ ರಾಜ್ಯದಲ್ಲಿ ಹೊಸ ಕಾನೂನನನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯಕ್ಕೆ ಬರುವ ಎಲ್ಲ ಬ್ಯಾಚ್‌ಗಳ ಎಲ್ಲ ರೀತಿಯ ಮಾತ್ರೆಗಳು, ಇಂಜೆಕ್ಷನ್‌ಗಳು, ಸಿರಪ್‌ಗಳು ಹಾಗೂ ಫ್ಲೋಯಿಡ್‌ಗಳನ್ನು ರಾಜ್ಯದ ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅವುಗಳು ಅಸುರಕ್ಷಿತ ಎಂದು ಸಾಬೀತಾದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಔಷಧ ತಯಾರಕ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ವರದಿ ಓದಿದ್ದೀರಾ?: ಬಿಜೆಪಿಯ ಕರಾಳ ಮುಖ | ರೀಲ್ಸ್ ಮಾಡುವುದು, ಅವಘಡವಾದಾಗ ಅಳಿಸಲು ನೋಟಿಸ್ ಕೊಡುವುದು!
ರೂಪಿಸಲಾಗುವ ಹೊಸ ಕಾನೂನಿನ ಅಡಿಯಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಪೂರೈಕೆಯಾಗುವ ಔಷಧಗಳನ್ನು ಕೇಂದ್ರ ಸರ್ಕಾರದ ಲ್ಯಾಬ್‌ನಲ್ಲಿ ಔಷಧಿಗಳನ್ನು ಪರೀಕ್ಷಿಸಿ, ಅವುಗಳ ಉಣಮಟ್ಟ ಉತ್ತಮವಾಗಿವೆ ಎಂದು ವರದಿ ಬಂದರೂ ಸಹ, ರಾಜ್ಯದಲ್ಲಿ ಅವುಗಳನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ರಾಜ್ಯದಲ್ಲಿನ ಪರೀಕ್ಷೆಯಲ್ಲಿ ಗುಣಮಟ್ಟ ಸಾಬೀತು ಮಾಡುವಲ್ಲಿ ಔಷಧಗಳು ವಿಫಲವಾದರೆ, ಅವುಗಳನ್ನು ನಿರ್ಬಂಧಿಸಲಾಗುತ್ತದೆ ಎಂದು ಇಲಾಖೆ ತೀರ್ಮಾನಿಸಿದೆ.
ಈಗಾಗಲೇ ನಿಷೇಧವಾಗಿರುವ ಔಷಧಗಳು
ಐಪಿ 100 ಎಂಎಲ್, ಪಾಕ್ಸನ್ಸ್ ಫಾರ್ಮಾಸಿಟಿಕಲ್ಸ್‌ನ ಫ್ರುಸ್ಮೈಡ್ ಇಂಜೆಕ್ಷನ್ ಫ್ರ್ಯೂಕ್ಸ್ 10ಎಂಜಿ
ಐ.ಪಿ. ಐಎಚ್‌ಎಲ್ ಲೈಫ್‌ಸೈನ್ಸಸ್‌ನ ಮೆಟ್ರೊನಿಡಜೋಲ್ ಇಂಜೆಕ್ಷನ್
ಐಪಿ-100 ಎಂಎಲ್, ಎಲ್ಪಾ ಲ್ಯಾಬೊರೇಟರಿಸ್‌ನ ಡೈಕ್ಲೊಫೆನ್ಯಾಕ್ ಸೋಡಿಯಂ ಇಂಜೆಕ್ಷನ್
ಐಪಿ, ರುಸೊಮಾ ಲ್ಯಾಬೊರೇಟರಿಸ್‌ನ ಡೆಕ್ಸ್ಟ್‌ರೋಸ್ 25% ಡಬ್ಲ್ಯೂ/ವಿ ಡಿ25 ಇಂಜೆಕ್ಷನ್
ಮಾರ್ಟಿನ್ ಮತ್ತು ಬ್ರೌನ್ ಬಯೋ ಸೈನ್ಸ್‌ನ ಅಟ್ರೋಪೈನ್ ಸಲ್ಫೇಟ್ ಇಂಜೆಕ್ಷನ್ ಐಪಿ1 ಎಂಎಲ್
ಫಾರ್ಮಾ ಇಂಪೆಕ್ಸ್ ಕಂಪನಿಯ ಮೆಟ್ರೊನಿಡಜೋಲ್ ಇಂಜೆಕ್ಷನ್
ಮಾಡರ್ನ್ ಲ್ಯಾಬೊರೇಟರಿಸ್‌ನ ಪೈಪರಾಸಿಲಿನ್ ಮತ್ತು ಟಾಜೊಬ್ಯಾಕ್ಟಮ್, ರಿಗೈನ್ ಲ್ಯಾಬೊರೇಟರಿಸ್‌ನ ಕ್ಯಾಲ್ಸಿಯಂ ಗ್ಲುಕೊನೇಟ್ ಇಂಜೆಕ್ಷನ್
ಒಂಡನ್ಸೆಟ್ರೋನ್ ಇಂಜೆಕ್ಷನ್