ಮನೆಯ ಬೀಗ ಮುರಿದು 10 ತೊಲ ಚಿನ್ನ ಮತ್ತು ಎರಡು ಲಕ್ಷ ರೂಪಾಯಿ ನಗದು ಕಳ್ಳತನವಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಕಾಂತ ಎಂಬುವವರ ಮನೆಯಲ್ಲಿ ನಿನ್ನೆ ಮಧ್ಯರಾತ್ರಿ ಕಳ್ಳತನ ಸಂಭವಿದೆ ಎನ್ನಲಾಗಿದೆ.
ಲಕ್ಷ್ಮೀಕಾಂತ ಕುಟುಂಬದೊಂದಿಗೆ ಪಕ್ಕದ ಯಾಪಲಪರ್ವಿ ಗ್ರಾಮದ ಜಾತ್ರೆಗೆ ಹೋಗಿದನ್ನು ಗಮನಿಸಿದ ಖದೀಮರು ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಬೀಗ ಮುರಿದು, ಒಳನುಗ್ಗಿದ್ದು, ಬೀರುವಿನ ಬೀಗ ಮುರಿದು ಹತ್ತು ತೊಲ ಬಂಗಾರ ಎರಡು ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಕೂಡಲೇ 112ಕ್ಕೆ ಮನೆ ಮಾಲೀಕರು ಕರೆ ಮಾಡಿದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಘಟನಾ ಸ್ಥಳಕ್ಕೆ ಪಿ.ಐ ವಿಎಸ್‌ಹೀರೇಮಠ, ಶ್ವಾನದಳ ಪೋಲಿಸರು, ಬೆರಳಚ್ಚು ತಂತ್ರಜ್ಞರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
