ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದ ಎನ್ಐಟಿ ಕ್ಯಾಲಿಕಟ್ ಪ್ರಾಧ್ಯಾಪಕಿಯೊಬ್ಬರನ್ನು ಈಗ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಗಿದೆ.
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ-ಕ್ಯಾಲಿಕಟ್ (ಎನ್ಐಟಿ) ನಿರ್ದೇಶಕಿ ಡಾ. ಶೈಜಾ ಎ ಗಾಂಧೀಜಿ ಅವರ ಹುತಾತ್ಮ ದಿನದಂದು ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದರು. ಇದೀಗ ಶೈಜಾ ಅವರನ್ನೇ ಮಾರ್ಚ್ 7ರಿಂದ ಜಾರಿಗೆ ಬರುವಂತೆ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಗಿದೆ.
ಇದನ್ನು ಓದಿದ್ದೀರಾ? ಗಾಂಧಿ ಕೊಲೆ ಸಂಭ್ರಮಿಸಿ, ಗೋಡ್ಸೆಗೆ ಜೈಕಾರ ಕೂಗಿದ ಹಿಂದು ಮಹಾಸಭಾ
ಬಲಪಂಥೀಯ ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದ ಶೈಜಾ, ಗೋಡ್ಸೆ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿ ಭಾರತವನ್ನು ಉಳಿಸಿದ್ದಾರೆ, ಅವರ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದ್ದರು.

ಶೈಜಾ ಕಾಮೆಂಟ್ ಅನ್ನು ಖಂಡಿಸಿದ್ದ ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಯುವ ಕಾಂಗ್ರೆಸ್‌ನಂತಹ ಸಂಘಟನೆಗಳು ದೂರು ದಾಖಲಿಸಿತ್ತು. ಇದಾದ ಬಳಿಕ ಶೈಜಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಕುನ್ನಮಂಗಲಂ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು.
ಆದರೆ ಈಗ ಶೈಜಾ ಅವರನ್ನೇ ಡೀನ್ ಆಗಿ ನೇಮಿಸಲಾಗಿದೆ. ಇದನ್ನು ಹಲವು ರಾಜಕೀಯ ಪಕ್ಷಗಳು ಸಿಪಿಐ(ಎಂ) ನ ಯುವ ಘಟಕವಾದ ಡಿವೈಎಫ್‌ಐ ಖಂಡಿಸಿದ್ದು, ಎನ್ಐಟಿಗೆ ಪ್ರತಿಭಟನಾ ಮೆರವಣಿಗೆಯನ್ನು ಘೋಷಿಸಿದೆ.
ಇದನ್ನು ಓದಿದ್ದೀರಾ? ಕಾಯುತಲಿದೆ ಹಂತಕ ಗೋಡ್ಸೆಯ ಚಿತಾಭಸ್ಮ, ಪುಣೆಯ ಶಿಥಿಲ ಖೋಲಿಯಲಿ!
ಬಲಪಂಥೀಯ ಸಿದ್ಧಾಂತ ಇರುವವರಿಗೆ ದೇಶದಲ್ಲಿ ವಿವಿಧ ಹುದ್ದೆಗಳನ್ನು ನೀಡುರುವ ಹಲವು ನಿದರ್ಶನಗಳಿವೆ. ಅದರಲ್ಲೂ ಮುಖ್ಯವಾಗಿ ಕೇಂದ್ರವನ್ನು ಹಾಡಿಹೊಗಳಿದ ನ್ಯಾಯಮೂರ್ತಿಗಳು ನಿವೃತ್ತರಾದ ಬಳಿಕ ವಿವಿಧ ಸಂಸ್ಥೆಗಳಲ್ಲಿ ಸ್ಥಾನ ಪಡೆದಿರುವುದನ್ನೂ ನಾವು ಮರೆಯುವಂತಿಲ್ಲ.
ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ 2018ರ ಜುಲೈ 6ರಂದು ನಿವೃತ್ತರಾಗಿದ್ದು ಅಂದೇ ರಾಷ್ಟ್ರೀಯ ಹಸಿರು ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಹೀಗೆಯೇ ನ್ಯಾಯಮೂರ್ತಿ ಅರುಣ್ ಮಿಶ್ರಾ, ಅಶೋಕ್ ಭೂಷಣ್, ಹೇಮಂತ್ ಗುಪ್ತಾ, ಎಸ್ ಅಬ್ದುಲ್ ನಜೀರ್, ರಂಜನ್ ಗೊಗೇಯ್ ಸೇರಿದಂತೆ ಹಲವು ನ್ಯಾಯಮೂರ್ತಿಗಳು ನಿವೃತ್ತಿ ಪಡೆದ ಐದು ವರ್ಷದೊಳಗಾಗಿಯೇ ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಇದೇ ರೀತಿ ಇತರೆ ಕ್ಷೇತ್ರಗಳಲ್ಲಿಯೂ ಬಿಜೆಪಿ, ಆರ್‌ಎಸ್‌ಎಸ್ ಬೆಂಬಲಿಗರಿಗೆ ಹುದ್ದೆಯನ್ನು ನೀಡಿದ್ದಾರೆ.
