“ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಲಭ್ಯವಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸೇವೆ ನೀಡಲು ಮುಂದಾಗಬೇಕು. ಹೊರರೋಗಿಗಳ ವಿಭಾಗದಲ್ಲಿ ಉತ್ತಮ ಚಿಕಿತ್ಸೆ ಲಭಿಸಿದರೆ ಹಾನಗಲ್ ತಾಲೂಕಾಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಲಿದೆ” ಎಂದು ಹಾನಗಲ್ಲ ತಾಲೂಕಸ್ಪತ್ರೆಗೆ ಶಾಸಕ ಶ್ರೀನಿವಾಸ್ ಮಾನೆ ಸಲಹೆ ನೀಡಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಸ್ಪತ್ರೆಗೆ ಶಾಸಕ ಶ್ರೀನಿವಾಸ್ ಮಾನೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
“ಆಸ್ಪತ್ರೆಯ ಹೊರರೋಗಿ ವಿಭಾಗ, ಒಳರೋಗಿ ವಿಭಾಗ ಹಾಗೂ ಔಷಧಿ ವಿಭಾಗ ಸೇರಿದಂತೆ ಇತರೆ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಮಾಹಿತಿ ಪಡೆದರು. ಸಿಬ್ಬಂದಿ ಹಾಜರಾತಿ ರೆಜಿಸ್ಟರ್ ಸೇರಿದಂತೆ ಇತರ ದಾಖಲೆಗಳ ರೆಜಿಸ್ಟರ್ ವೀಕ್ಷಿಸಿದರು. ಸಿಬ್ಬಂದಿ ಇಲಾಖೆಯ ಕಾರ್ಯ ನಿಮಿತ್ತ ಬೇರೆಡೆ ಹೋಗಿದ್ದರೆ ರೆಜಿಸ್ಟರ್‌ನಲ್ಲಿ ಸ್ಪಷ್ಟವಾಗಿ ನಮೂದಿಸುವಂತೆ ಸಿಬ್ಬಂದಿಗೆ ಶಾಸಕ ಮಾನೆ ಸೂಚಿಸಿದರು.
“ಕೇಂದ್ರದಲ್ಲಿ ಜನತೆಗೆ ಆರೋಗ್ಯ ಸೇವೆ ಲಭಿಸಬೇಕು. ಈ ನಿಟ್ಟಿನಲ್ಲಿ ಗಮನ ಹರಿಸಿ. ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಗ್ರಾಮಸ್ಥರ ಸಹಕಾರ ಪಡೆದು, ಕೇಂದ್ರಕ್ಕೆ ಅಗತ್ಯವಿರುವ ಸಣ್ಣಪುಟ್ಟ ಸೌಲಭ್ಯಗಳನ್ನು ಪಡೆಯಿರಿ. ನಾನೂ ಸಹ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮಾರ್ಚ್ 3ರಂದು ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ
ತಾಪಂ ಕೆಡಿಸಿ ಸದಸ್ಯ ಮಹ್ಮದ್ ಹನೀಫ್ ಬಂಕಾಪೂರ, ಮುಖಂಡರಾದ ಚನ್ನಬಸಪ್ಪ ಬಿದರಗಡ್ಡಿ, ರಾಜೂ ಬೇಂದ್ರೆ, ನಾಗರಾಜ ಮಲ್ಲಮ್ಮನವರ, ಗಂಗಾಧರ ಕ್ಷೌರದ, ಮಲ್ಲೇಶಣ್ಣ ಕ್ಷೌರದ, ಎಂ.ಎಸ್ .ಪಾಟೀಲ, ಚನ್ನವೀರಗೌಡ ಪಾಟೀಲ, ಅರುಣ ಮಲ್ಲಮ್ಮನವರ, ರಸೂಲ್ ವಾಗಿನಕೊಪ್ಪ, ಪತಂಗಸಾಬ ಮಕಾನದಾರ, ಲಕ್ಷ್ಮೀ ಕಲಾಲ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
