“ದಿನಾಂಕ 21.2.2025 ರಂದು ಬೆಳಗಾವಿ ಕೆ.ಎಸ್.ಆರ್.ಟಿ.ಸಿ ಕಾರ್ಯನಿರ್ವಾಹಕ ಬಸ್ ಕಂಡಕ್ಟರ್ ಚಾಲಕನ ಮೇಲೆ ಹಲ್ಲೆ ನಡೆಸಿದ ಗೂಂಡಾಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಇಂದು ನಮ್ಮ ಕರ್ನಾಟಕ ಯುವರಕ್ಷಣಾ ವೇದಿಕೆ ಚಳ್ಳಕೆರೆ ಘಟಕದ ವತಿಯಿಂದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
‘ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ದೌರ್ಜನ್ಯದಿಂದ ವರ್ತಿಸುವ ಮೂಲಕ ಕನ್ನಡಿಗರರ ಸ್ವಾಭಿಮಾನ ಕೆಣಕಿದ್ದಾರೆ. ಈ ರೀತಿ ಗೂಂಡಾ ವರ್ತನೆ ತೋರಿದವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಚಳ್ಳಕೆರೆ ತಹಶೀಲ್ದಾರರಾದ ರೆಹಾನ್ ಪಾಷರವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರರು “ಮುಂದಿನ ದಿನಗಳಲ್ಲಿ ಇಂತ ಘಟನೆಗಳನ್ನು ಮರುಕಳಿಸದೆ ಇರುವ ಹಾಗೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರಜೆಗಳು ರಕ್ಷಸುವ ಸಂವಿಧಾನಕ್ಕೆ ಅಪಾಯ, ಸಂವಿಧಾನ ಯಾನ ಕಾರ್ಯಕ್ರಮದಲ್ಲಿ ಚಿಂತನೆ
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರಜೆಗಳ ರಕ್ಷಸುವ ಸಂವಿಧಾನಕ್ಕೆ ಅಪಾಯ, ಸಂವಿಧಾನ ಯಾನ ಕಾರ್ಯಕ್ರಮದಲ್ಲಿ ಚಿಂತನೆ
ಪ್ರತಿಭಟನೆಯಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮೈಲಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಹಾಲೇಶ್ ಯಾದವ್, ನಗರಾಧ್ಯಕ್ಷ ಮಾರುತಿ, ನಗರ ಉಪಾಧ್ಯಕ್ಷ ಜಯಣ್ಣ, ನಗರ ಕಾರ್ಯದರ್ಶಿ ಉಪೇಂದ್ರ, ತಾಲೂಕು ಉಪಾಧ್ಯಕ್ಷ ಗುರುರಾಜ್,
ತಾಲೂಕ್ ಕಾರ್ಯದರ್ಶಿ ಗೌಡ ಯಾದವ್, ನಗರ ಉಪಾಧ್ಯಕ್ಷ ಮಂಜುನಾಥ್, ಶ್ರೀನಿವಾಸ್,
ಆಟೋ ವಿಭಾಗದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.