ಭಾಲ್ಕಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ದಲಿತ ವಿದ್ಯಾರ್ಥಿ ಪರಿಷತ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸಭೆ ನಡೆಯಿತು.
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳ ಮ್ಯಾನೆಜ್ಮೆಂಟ್ ಕೂಟದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮರು ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ತರುವುದು ಹಾಗೂ ವಸತಿ ಶಾಲೆಗಳ ಸುಧಾರಣೆ ಮತ್ತು ಮೂಲಸೌಕರ್ಯ ಹೆಚ್ಚಿಸಲು ಕ್ರಮ ವಹಿಸಲು ಮತ್ತು ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪರೀಕ್ಷಾ ಪ್ರವೇಶ ಪಾತ್ರ ಇಟ್ಟುಕೊಂಡು ಪೀಡಿಸುವ ಶಾಲಾ-ಕಾಲೇಜುಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಹೋರಾಟ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು,
ದಲಿತ ವಿದ್ಯಾರ್ಥಿ ಪರಿಷತ್ ಭಾಲ್ಕಿ ತಾಲ್ಲೂಕು ಪದಾಧಿಕಾರಿಗಳ ನೇಮಕ :
ಮಹಾದೇವ ದರು (ತಾಲ್ಲೂಕು ಸಂಚಾಲಕ), ರವಿ ಭಾವಿದೊಡ್ಡಿ (ಸಹ ಸಂಚಾಲಕ), ಅಭಿಷೇಕ್ ಕೋಕಣೆ (ಸಂಘಟನಾ ಸಂಚಾಲಕ), ನಿಖಿಲ್ ಲಾಮಲೇ (ಪ್ರಧಾನ ಕಾರ್ಯದರ್ಶಿ), ವಿಶ್ವ ಕಾಂಬಳೆ (ಸಹ ಕಾರ್ಯದರ್ಶಿ), ಪ್ರಥ್ವಿರಾಜ (ಸಂಪರ್ಕ ಕಾರ್ಯದರ್ಶಿ) ಹಾಗೂ ಕರಣ, ಹರ್ಷವರ್ಧನ್ ದರು, ಅನಿಕೇತ ಸೇರಿದಂತೆ ಇತರೆ ವಿದ್ಯಾರ್ಥಿಗಳನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಹಾಡುಹಗಲೇ ಮನೆ ನುಗ್ಗಿ ಚಿನ್ನಾಭರಣ ಕದ್ದರೆಂದು ಸುಳ್ಳು ಕಥೆ ಕಟ್ಟಿದ ಕುಟುಂಬ
ಸಭೆಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಹಾಗೂ ಪ್ರಮುಖರಾದ ಸಂದೀಪ ವಾಲದೊಡ್ಡಿ, ಸೈನಿಲ್ ಬಂಧು, ಅಮರನಾಥ ಹುಡುಗೆ, ವಿಶಾಲ ಬಂಧು ಹಾಜರಿದ್ದರು.