ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಹೂವಿನ ಪೇಟೆಯ ಹೂವಿನ ವ್ಯಾಪಾರಿ ನವೀದ್ ಪಾಷಾ, ಟಿ ವಡ್ಡಹಳ್ಳಿ ಗ್ರಾಮದ ಆನಂದ್, ಕುರುಮಾರ್ಲಹಳ್ಳಿ ಗ್ರಾಮದ ಶ್ರೀನಿವಾಸ್ ಎಂ, ರಂಗೇನಹಳ್ಳಿ ಗ್ರಾಮದ ಶ್ರೀನಿವಾಸಪ್ಪ, ಸುಜ್ಜನಹಳ್ಳಿ ಗ್ರಾಮದ ವೆಂಕಟೇಶ್, ನಂದನ ಹೊಸಹಳ್ಳಿ ಗ್ರಾಮದ ಮಂಜುನಾಥ್, ಟಿ ವಡ್ಡಹಳ್ಳಿ ಗ್ರಾಮದ ನಾಗೇಂದ್ರ, ಶೆಟ್ಟಿಹಳ್ಳಿ ಗ್ರಾಮದ ವೆಂಕಟರಾಯಪ್ಪ ಬಂಧಿತರು.
ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕುರುಮಾರ್ಲಹಳ್ಳಿ ಗ್ರಾಮದ ಬಳಿ ಇಸ್ಪೀಟ್ ಜೂಜು ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮುರಳೀಧರ್ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿದ್ದು, ಬಂಧಿತರಿಂದ 16 ಸಾವಿರ ನಗದು, 15 ದ್ವಿಚಕ್ರವಾಹನಗಳು, 11 ಮೊಬೈಲ್, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಉರ್ದು ಅಕಾಡೆಮಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮೊಹಮ್ಮದ್ ಜಿಲಾನಿ ಆಯ್ಕೆ
ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.