ಒಂದು ಮುಖ್ಯ ಸಂಗತಿಯನ್ನು ಸ್ಪಷ್ಟಪಡಿಸಿಯೇ ಆರಂಭಿಸಬೇಕು. ಸೃಜನಶೀಲ ಎನ್ನುವ ಪರಿಕಲ್ಪನೆಯೇ ಮೂಲದಲ್ಲಿ ಸಂಕೀರ್ಣ, ಅದನ್ನು ಬಳಕೆಗೆ ತಂದ, ಅದನ್ನು ಸ್ಥಾಪಿಸಿರುವ ಪರಿ ಇನ್ನೂ ಸಂಕೀರ್ಣ. ಸೃಜನಶೀಲ ಎನ್ನುವುದು ಯಾವುದನ್ನು ಸೃಜನೇತರ ಎಂದು ಕರೆಯಲಾಗುತ್ತದೆಯೋ ಅದಕ್ಕೆ ತದ್ವಿರುದ್ಧ ಎನ್ನುವಂತೆ ಸ್ಥಾಪಿತವಾಗಿರುವುದು ಒಂದು ದುರಂತ ಬೆಳವಣಿಗೆ ಎಂದೇ ಹೇಳಬೇಕು. ಪರಿಕಲ್ಪನೆಗಳು ಆರಂಭವಾದಾಗ ಇಂಥ ಧೋರಣೆಗಳು ಇರುವುದಿಲ್ಲ. ಅವು ಬಳಕೆಯಾಗುತ್ತಾ ಹೋದಂತೆ ಕೆಲವೊಮ್ಮೆ ಅವುಗಳಿಗೆ ಬೇಲಿಯನ್ನು ಹಾಕಿಬಿಡಲಾಗುತ್ತದೆ, ಅವುಗಳಿಗೆ ಹೀನಾರ್ಥವೂ ಅಂಟಿಬಿಡುತ್ತದೆ. ಅನೇಕ ಬಾರಿ ಸೃಜನೇತರ ಎನ್ನುವುದನ್ನು ಹೀಗೆ ಬಳಸಲಾಗುತ್ತದೆ. ಕಾರಣವೇ…

ಡಾ. ಎಂ.ಎಸ್. ಆಶಾದೇವಿ
ಅನುವಾದಕಿ, ವಿಮರ್ಶಕಿ ಆಶಾದೇವಿ ಮೂಲತಃ ದಾವಣಗೆರೆ ಜಿಲ್ಲೆಯವರು. ಸ್ತ್ರೀಮತವನುತ್ತರಿಸಲಾಗದೇ (ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು), ಉರಿಚಮ್ಮಾಳಿಗೆ (ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ), ವಚನ ಪ್ರವೇಶ (ಸಂಪಾದನೆ), ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು.