“ಹಿಂದಿ ಭಾರತದ ಎಷ್ಟು ಭಾಷೆಗಳನ್ನು ನುಂಗಿ ಹಾಕಿದೆ ಎಂದು ತಿಳಿದಿದೆಯೇ? ಉತ್ತರ ಭಾರತದ ಸುಮಾರು 25 ಭಾಷೆಗಳನ್ನು ನಾಶ ಮಾಡಿದೆ” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ತ್ರಿಭಾಷಾ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಕೇಂದ್ರ ಸರ್ಕಾರದ ಈ ಕ್ರಮವನ್ನು ತಮಿಳುನಾಡು ಸರ್ಕಾರ ತೀವ್ರವಾಗಿ ವಿರೋಧಿಸಿದೆ. ಅದರಲ್ಲೂ ತಮಿಳುನಾಡಿನ ನಿಧಿ ಬಿಡುಗಡೆ ಮಾಡಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು ಎಂಬ ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ಅವರ ಬೆದರಿಕೆಯು ತಮಿಳುನಾಡನ್ನು ಇನ್ನಷ್ಟು ಕೆಣಕಿದೆ.
ಇದನ್ನು ಓದಿದ್ದೀರಾ? ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಕೇಂದ್ರ ಸರ್ಕಾರ? three-language formula | BJP
ಈ ಹಿಂದಿನಿಂದಲೂ ಹಿಂದಿ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ತಮಿಳುನಾಡು ಇದೀಗ ಹಿಂದಿ ಹೇರಿಕೆ ವಿರುದ್ಧ ಕೇಂದ್ರ ಸರ್ಕಾರದ ಜೊತೆ ವಾಕ್ಸಮರ ನಡೆಸುತ್ತಿದೆ. ಹಿಂದಿ ಅದೆಷ್ಟೋ ಸ್ಥಳೀಯ ಭಾಷೆಗಳನ್ನು ನುಂಗಿ ಹಾಕಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, “ಇತರೆ ರಾಜ್ಯಗಳ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ, ಹಿಂದಿ ಭಾರತದ ಎಷ್ಟು ಭಾಷೆಗಳನ್ನು ನುಂಗಿ ಹಾಕಿದೆ ಎಂದು ನಿಮಗೆ ತಿಳಿದಿದೆಯೇ” ಎಂದು ಪ್ರಶ್ನಿಸಿದ್ದಾರೆ.
My dear sisters and brothers from other states,
— M.K.Stalin (@mkstalin) February 27, 2025
Ever wondered how many Indian languages Hindi has swallowed? Bhojpuri, Maithili, Awadhi, Braj, Bundeli, Garhwali, Kumaoni, Magahi, Marwari, Malvi, Chhattisgarhi, Santhali, Angika, Ho, Kharia, Khortha, Kurmali, Kurukh, Mundari and… pic.twitter.com/VhkWtCDHV9
“ಭೋಜ್‌ಪುರಿ, ಮೈತಿಲಿ, ಅವಧಿ, ಬ್ರಜ್, ಬಂಡೇಲಿ, ಗರ್ವಾಲಿ, ಕುಮೌನಿ, ಮಗಹಿ, ಮರ್ವರಿ, ಮಾಲ್ವಿ, ಛತ್ತೀಸ್‌ಗರ್ಹಿ, ಸಂಥಾಲಿ, ಆಂಗಿಕ, ಹೊ, ಖಾರಿಆ, ಖೋರ್ಥಾ, ಕುರ್ಮಾಲಿ, ಕುರುಖ್, ಮುಂಡಾರಿ ಮತ್ತು ಇನ್ನೂ ಹಲವು ಭಾಷೆಗಳು ಉಳಿಯಲು ಒದ್ದಾಡುತ್ತಿದೆ” ಎಂದು ಸ್ಟಾಲಿನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ ವಿವಾದ | ಶಾಲೆಗಳಲ್ಲಿ ತೆಲುಗು ಬೋಧನೆ, ಕಲಿಕೆ ಕಡ್ಡಾಯಗೊಳಿಸಿದ ತೆಲಂಗಾಣ
“ಹಿಂದಿಯ ಗುರುತಿಗಾಗಿ ನೀಡುವ ಉತ್ತೇಜನವು ಇತರೆ ಪ್ರಾಚೀನ ಮಾತೃ ಭಾಷೆಗಳನ್ನು ಕೊಂದು ಹಾಕಿದೆ. ಉತ್ತರ ಪ್ರದೇಶ ಮತ್ತು ಬಿಹಾರ ಬರೀ ಹಿಂದಿ ನೆಲೆಯಾಗಿರಲಿಲ್ಲ. ಆ ರಾಜ್ಯದ ನಿಜವಾದ ಭಾಷೆಯು ಅಳಿದುಹೋಗಿದೆ” ಎಂದಿದ್ದಾರೆ.
“ಮೈಥಿಲಿ ಭಾಷೆಯು ಸದ್ಯ ಹಿಂದಿಯನ್ನು ಮಾತನಾಡುವ ಬಿಹಾರದ ಜನರ ಸ್ಥಳೀಯ ಭಾಷೆ ಆಗಿತ್ತು. ಹಿಂದಿ ಭಾರತದ ಅತೀ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಮಾತೃ ಭಾಷೆ ಅಂದುಕೊಳ್ಳೋಣ. ಆದರೆ ಅದು ಕೂಡಾ ನಿಜವಲ್ಲ. ಆದರೆ ಹಿಂದಿ ಸ್ಥಳೀಯ ಭಾಷೆಯನ್ನು ಧಮಿನಿಸಿ ಈಗ ಉತ್ತರ ಪ್ರದೇಶ ಭಾಷೆ ಎಂಬಂತಾಗಿದೆ” ಎಂದು ಸ್ಟಾಲಿನ್ ಹೇಳಿದ್ದಾರೆ.
“ಕಳೆದ ಶತಕದಲ್ಲಿ ಹಿಂದಿ ಮತ್ತು ಸಂಸ್ಕೃತದ ಪ್ರಾಬಲ್ಯದಿಂದ ಉತ್ತರ ಭಾರತದ ಸುಮಾರು 25ಕ್ಕೂ ಅಧಿಕ ಭಾಷೆಗಳು ನಾಶವಾಗಿದೆ” ಎಂದು ಕೂಡಾ ಸ್ಟಾಲಿನ್ ತಿಳಿಸಿದ್ದಾರೆ.
