ಮಂಗಳೂರು ನಗರದ ಖಾಸಗಿ ಪಿಯುಸಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಗುರುವಾರ ಪ್ರಕಟಗೊಂಡ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಯುಜಿ ಫಲಿತಾಂಶದಲ್ಲಿ ಹಲವಾರು ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. ಜೊತೆಗೆ, ನೀಟ್‌ನಲ್ಲಿಯೂ 720ರಲ್ಲಿ 710 ಅಂಕಗಳನ್ನು ಗಳಿಸಿ 48ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್ ವಿವಿಧ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ಅವರು ಬಿಎಸ್‌ಸಿ-ಕೃಷಿಯಲ್ಲಿ ಮೊದಲ ಸ್ಥಾನ (96.7%), ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್ (ಬಿಎನ್‌ವೈಎಸ್)ನಲ್ಲಿ ಶೇ.98.1 ಫಲಿತಾಂಶದೊಂದಿಗೆ ಎರಡನೇ ಸ್ಥಾನ, ಪಶು ವೈದ್ಯಕೀಯ ವಿಜ್ಞಾನ(ಬಿವಿಎಸ್‌ಸಿ) ಮತ್ತು ನರ್ಸಿಂಗ್ ಬಿಎಸ್‌ಸಿ ಫಾರ್ಮ್ ಡಿ(ಫಾರ್ಮಸಿ)ಯಲ್ಲಿ ಶೇ.96.667 ಫಲಿತಾಂಶದೊಂದಿಗೆ ನಾಲ್ಕನೇ ಸ್ಥಾನ ಮತ್ತು ಎಂಜಿನಿಯರಿಂಗ್ ಕೋರ್ಸ್‌ನಲ್ಲಿ 16ನೇ ರ‍್ಯಾಂಕ್ ಗಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಇಟಿ ಫಲಿತಾಂಶ ಪ್ರಕಟ : ಮೇಲುಗೈ ಸಾಧಿಸಿದ ಬಾಲಕಿಯರು
ಮೂಲತಃ ಕೋಲಾರ ಜಿಲ್ಲೆಯ ಭೈರೇಶ್, “ನಾನು ಎಂಬಿಬಿಎಸ್ ತೆಗೆದುಕೊಳ್ಳಲು ಇಚ್ಛಿಸಿದ್ದು, ಹೃದ್ರೋಗದಲ್ಲಿ ವಿಶೇಷ ಸಾಧನೆ ಮಾಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.