ಫುಲೆ ಅಂಬೇಡ್ಕರ್ ಸೆಂಟರ್ ನಡೆಸುತ್ತಿರುವ ಫಿಲಾಸಫಿ ಮತ್ತು ಇಂಗ್ಲಿಷ್ ಭಾಷಾ ತರಬೇತಿಗೆ ಕೊಪ್ಪಳ ತಾಲೂಕಿನ ವದಗನಾಳ ಗ್ರಾಮದ ಯುವಕ ಶಿವಮೂರ್ತಿ ಆಯ್ಕೆಯಾಗಿದ್ದಾರೆ. ತರಬೇತಿಯು ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಹಾಯಕವಾಗಿದೆ.
ಒಂದು ತಿಂಗಳ ವಸತಿ ಕೋರ್ಸ್ ಇದಾಗಿದ್ದು, ಸಾಮಾಜಿಕ, ರಾಜಕೀಯ ಪರಿಕಲ್ಪನೆಗಳು, ಇಂಗ್ಲಿಷ್ ಭಾಷೆ ಮತ್ತು ಜಾತಿ ವಿರೋಧಿ ತತ್ವಶಾಸ್ತ್ರವನ್ನು ಹೇಳಿಕೊಡುವುದು ಕೋರ್ಸ್‌ನ ಮೂಲ ಉದ್ದೇಶವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘ಜಾತಿ ನಿರ್ಮೂಲನೆ’ ಮಹಾತ್ಮ ಜ್ಯೋತಿಬಾ ಫುಲೆ ಅವರ ‘ಗುಲಾಮಗಿರಿ’ ಕೃತಿ ಕುರಿತು ತಿಳಿಸಿಕೊಡಲಾಗುತ್ತದೆ.
ನಮ್ಮ ದೇಶವು ಹೆಚ್ಚು ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ವಿಭಿನ್ನ ಪರಂಪರೆಯನ್ನು ಹೊಂದಿದೆ. ರಾಜಕೀಯ ಸುಧಾರಣೆಗಳಿಗಿಂತ ಸಾಮಾಜಿಕ ಸುಧಾರಣೆಗಳು ಬಹಳ ಮುಖ್ಯ. ಇಂಗ್ಲಿಷ್ ಕಲಿಯದಿದ್ದರೆ ಅಂಬೇಡ್ಕರ್ ಅವರು ದೊಡ್ಡ ಮಟ್ಟಕ್ಕೆ ಏರುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಘನತೆಯ ಬದುಕನ್ನು ಈ ಸೆಂಟರ್ ಎತ್ತಿ ಹಿಡಿಯುತ್ತಿದೆ. ನ್ಯಾಯ, ರಾಷ್ಟ್ರೀಯತೆ, ಲಿಂಗ ಸಮಾನತೆ ಮುಂತಾದ ವಿಷಯಗಳನ್ನು ಈ ಕೇಂದ್ರವು ಕಲಿಸುತ್ತಿದೆ. ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳನ್ನು ನೋಡುವುದು, ಆತ್ಮಾವಲೋಕನ ಮಾಡಿಕೊಳ್ಳುವುದು ತರಬೇತಿಯ ಭಾಗವಾಗಿದೆ.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಪ್ರೌಢಶಾಲೆ; ಕಣ್ಮುಚ್ಚಿ ಕುಳಿತ ಗ್ರಾಪಂ
