ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಅಡವಿ ಚಿಕ್ಕನಹಳ್ಳಿಯ ಗೋಕಟ್ಟೆಯಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮಣ್ಣು ಅಗೆದು ಸಾಗಿಸುತ್ತಿರುವ ಆರೋಪ ಕೇಳಿ ಬಂದಿದೆ.

“ಅಡವಿ ಚಿಕ್ಕನಹಳ್ಳಿಯ ಗೋಕಟ್ಟೆಯಲ್ಲಿ ಅಕ್ರಮವಾಗಿ ಜಮೀನುಗಳಿಗೆ ಮಣ್ಣನ್ನು ತುಂಬಲಾಗುತ್ತಿದೆ ಕಳೆದ ಎರಡು ಮೂರು ದಿನಗಳಿಂದ ನೂರಾರು ಲೋಡುಗಟ್ಟಲೇ ಅಕ್ರಮ ಮಣ್ಣು ಸಾಗಾಣಿಕೆ ಮಾಡಿದ್ದು, ಗೋಕಟ್ಟೆಯನ್ನು ಹಾಳು ಮಾಡಲಾಗುತ್ತಿದೆ” ಎಂದು ರೈತ ಮುಖಂಡರು, ಗ್ರಾಮಸ್ಥರು ಆರೋಪಿಸಿದ್ದಾರೆ.

ಗೋಪನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಡವಿ ಚಿಕ್ಕನಹಳ್ಳಿಯಲ್ಲಿ ಯಾವುದೇ ಅನುಮತಿ ಇಲ್ಲದೆ, ಕೆಲವೇ ಖಾಸಗಿ ಜನರ ಅನುಕೂಲಕ್ಕಾಗಿ ಗ್ರಾಮದ ಜಾನುವಾರುಗಳ ಮೇವು ನೀರಿಗಾಗಿ ಮೀಸಲಾಗಿರುವ ಗೋಕಟ್ಟೆಯನ್ನು ಹಾಳು ಮಾಡಲಾಗುತ್ತಿದೆ ಎಂದು ತಾಲೂಕಿನ ರೈತ ಮುಖಂಡ ಶ್ರೀನಿವಾಸ್ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಿರ್ವಾಹಕನ ಮೇಲೆ ಹಲ್ಲೆ. ದುಷ್ಕರ್ಮಿಗಳ ಮತ್ತು ಬೆಳಗಾವಿ ಪೊಲೀಸರ ಮೇಲೆ ಕ್ರಮಕ್ಕೆ ಒತ್ತಾಯ.
ಗೋಕಟ್ಟೆಯಲ್ಲಿ ಅಕ್ರಮವಾಗಿ ಮಣ್ಣು ಮತ್ತು ಮರಳು ಎರಡನ್ನು ತಮ್ಮ ಸ್ವಂತ ಜಮೀನುಗಳಿಗೆ ಯಾವುದೇ ಪರವಾನಗಿ ಇಲ್ಲದೆ ಹಾಕಿಸುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ನನ್ನನ್ನು ಎಸ್ ನಿಂಗೇಗೌಡ ವಾದ ಮಾಡಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ತೆಗೆದುಕೊಂಡು ಪಲಾಯನ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತ ಸಂಘ. ಹೋರಾಟ ನೆಡೆಸಲಿದೆ” ಎಂದು ವಾಸುದೇವ ಮೇಟಿ ಬಣದ ಚಳ್ಳಕೆರೆ ತಾಲೂಕಿನ ಅಧ್ಯಕ್ಷ ಶ್ರೀನಿವಾಸ್ ಚಿಕ್ಕನಹಳ್ಳಿ ಆಗ್ರಹಿಸಿದ್ದಾರೆ