ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದ ಸಭೆಯಲ್ಲಿ ಬಿಜೆಪಿ ನಾಯಕರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದಿದೆ. ವೇದಿಕೆಯ ಮೇಲಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಪದಾಧಿಕಾರಿಗಳು ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಮದನ್ ರಾಥೋಡ್ ಪುನರ್ ಆಯ್ಕೆ ಆಗಿದ್ದರಿಂದ, ಅವರಿಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಹಮೀದ್ ಖಾನ್ ಮೇವಾಟಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಜಸ್ಥಾನದ ಎಲ್ಲ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ, ವೇದಿಕೆಯಲ್ಲಿ ಕುರ್ಚಿಗಳಲ್ಲಿ ಕುಳಿತುಕೊಳ್ಳುವ ವಿಚಾರವಾಗಿ ಪದಾಧಿಕಾರಿಗಳ ಜಡುವೆ ಜಗಳ ನಡೆದಿದೆ.
ಪದಾಧಿಕಾರಿಯೊಬ್ಬರು ರಥೋಡ್ ಪಕ್ಕದಲ್ಲಿ ಕುಳಿತಿದ್ದ ಮತ್ತೋರ್ವ ಪದಾಧಿಕಾರಿಯನ್ನು ಕುರ್ಷಿಯಿಂದ ಕೆಳಗೆ ಎಳೆದು ತಳ್ಳಿದ್ದಾರೆ. ಇಬ್ಬರೂ ಹೊಡೆದಾಟಿಕೊಂಡಿದ್ದು, ತಲೆ-ತಲೆಗೆ ಗುದ್ದಿಕೊಂಡಿದ್ದಾರೆ. ಅವರನ್ನು ಬಿಡಿಸಲು ಹಲವರು ಯತ್ನನಿಸಿದರೂ ಕೆಲ ಸಮಯದ ಹೊಡೆದಾಟ ಮುಂದುವರೆದಿದೆ ಎಂದು ವರದಿಯಾಗಿದೆ.
VIDEO | A ruckus broke out between members of BJP's minority front during a meeting at party office in Jaipur earlier today. More details awaited.
— Press Trust of India (@PTI_News) February 27, 2025
(Source: Third Party)
(Full video available on PTI Videos – https://t.co/dv5TRAShcC) pic.twitter.com/CkeCguxUMw
ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ. ಘಟನೆಯ ಬಳಿಕ, ಘಟನೆಬಗ್ಗೆ ವರದಿ ಕೊಡುವಂತೆ ಹಮೀದ್ ಖಾನ್ ಮೇವಾಟಿ ಅವರಿಗೆ ರಾಥೋಡ್ ಸೂಚಿಸಿದ್ದಾರೆ.